ಜಿಯೋದಿಂದ ಟ್ರಾಫಿಕ್ ಪೊಲೀಸರಿಗೆ 50,000 N95 ಮಾಸ್ಕ್

ಬೆಂಗಳೂರು, ಆಗಸ್ಟ್ 28: ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಿಲಯನ್ಸ್ ಗ್ರೂಪ್ ನಿಂದ 50,000 N95 ಮಾಸ್ಕ್ ಹಾಗೂ ಅಷ್ಟೇ ಸಂಖ್ಯೆಯ ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.

Recommended Video

      Metro ಸಂಚಾರ ಆರಂಭ! | Oneindia Kannada

      ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಇದ್ದರು.

      ರಿಲಯನ್ಸ್ ಸಮೂಹದ ಪ್ರತಿನಿಧಿಯಾಗಿ ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಹಾಜರಿದ್ದರು.

      Reliance Jio donates 50,000 N95 masks and sanitisers to Bengaluru Traffic Police

      ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹಗಲಿರುಳು ಶ್ರಮಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ, ತಡೆಗೆ ಈಗಾಗಲೇ ಹಲವು ಬಗೆಯಲ್ಲಿ ನೆರವು ಸಹ ನೀಡುತ್ತಿದೆ. ದೇಶದ ಅಗತ್ಯಕ್ಕೆ ತಕ್ಕಂತೆ ಈ ಬಗೆಯ ಶ್ರಮವನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತಲೇ ಇದೆ.

      ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಅವರು ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಅವರಿಗೆ N95 ಮಾಸ್ಕ್, ಸ್ಯಾನಿಟೈಸರ್ ಗಳನ್ನು ಹಸ್ತಾಂತರಿಸಿದರು.

      Reliance Jio donates 50,000 N95 masks and sanitisers to Bengaluru Traffic Police

      ರಿಲಯನ್ಸ್ ಫೌಂಡೇಷನ್ ಬಗ್ಗೆ: ರಿಲಯನ್ಸ್ ಇಂಡಸ್ಟ್ರೀಸ್ ನದೇ ಭಾಗವಾಗಿರುವ ದತ್ತಿ ಸಂಸ್ಥೆ ರಿಲಯನ್ಸ್ ಫೌಂಡೇಷನ್. ಈ ಸಂಸ್ಥೆಯ ನೇತೃತ್ವವನ್ನು ಸ್ಥಾಪಕಿ ಹಾಗೂ ಮುಖ್ಯಸ್ಥೆ ನೀತಾ ಅಂಬಾನಿ ವಹಿಸಿದ್ದಾರೆ.

      Reliance Jio donates 50,000 N95 masks and sanitisers to Bengaluru Traffic Police

      ಗ್ರಾಮೀಣ ಭಾಗದಲ್ಲಿನ ಬದಲಾವಣೆ, ಆರೋಗ್ಯ, ಶಿಕ್ಷಣ, ಅಭಿವೃದ್ಧಿಗಾಗಿ ಕ್ರೀಡೆ, ವಿಪತ್ತು ಸನ್ನಿವೇಶಕ್ಕೆ ಸ್ಪಂದನೆ, ನಗರ ನವೀಕರಣ, ಕಲೆ, ಸಂಸ್ಕೃತಿ ಹಾಗೂ ಪರಂಪರೆ- ಈ ವಲಯದಲ್ಲೆಲ್ಲ ದೇಶದ ಅಭಿವೃದ್ಧಿಗೆ ಇರುವ ಸವಾಲುಗಳನ್ನು ಎದುರಿಸುವ ಕಡೆಗೆ ಫೌಂಡೇಷನ್ ದೃಷ್ಟಿ ನೆಟ್ಟಿದೆ. ದೇಶಾದ್ಯಂತ 37 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಮತ್ತು ಹಲವು ನಗರ ಪ್ರದೇಶಗಳು ಹಾಗೂ 3.6 ಕೋಟಿಗೂ ಹೆಚ್ಚು ಬದುಕನ್ನು ರಿಲಯನ್ಸ್ ಫೌಂಡೇಷನ್ ತಲುಪಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+