ಬಿಬಿಎಂಪಿ ಆಸ್ತಿ ತೆರಿಗೆ(ವಿನಾಯಿತಿ ಸಹಿತ) ಪಾವತಿ ಅವಧಿ ವಿಸ್ತರಣೆ

ಬೆಂಗಳೂರು, ಜೂನ್ 1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿ ಅವಧಿ ಮತ್ತೊಮ್ಮೆ ವಿಸ್ತರಿಸಲಾಗಿದೆ. ಆನ್ ಲೈನ್ ಪಾವತಿ ವ್ಯವಸ್ಥೆಯಲ್ಲಿನ ಲೋಪ, ವಲಯವಾರು ಪಾವತಿ ಗೊಂದಲದಿಂದಾಗಿ ತೆರಿಗೆ ಪಾವತಿಸದ ನಾಗರಿಕರು ಚಿಂತಿಸಬೇಕಾಗಿಲ್ಲ. ಜೂನ್ 30ರ ತನಕ ಶೇ 5ರಷ್ಟು ವಿನಾಯಿತಿ ಜತೆಗೆ ತೆರಿಗೆ ಪಾವತಿಸಬಹುದು.

ಸಾಮಾನ್ಯವಾಗಿ ಆಸ್ತಿ ತೆರಿಗೆಯನ್ನು ಏಪ್ರಿಲ್‌ ತಿಂಗಳಿನಲ್ಲೇ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ದೊರೆಯುತ್ತದೆ. ಈ ಅವಧಿಯನ್ನು ಮೇ ತಿಂಗಳ ಅಂತ್ಯದ ತನಕ ಈ ಬಾರಿ ವಿಸ್ತರಿಸಲಾಯಿತು. ಈಗ ಜೂನ್ ತಿಂಗಳ ಅಂತ್ಯದ ತನಕ ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಆನಂತರ ತೆರಿಗೆ ಪಾವತಿಸಿದರೆ ಶೇ 2ರಷ್ಟು ಬಡ್ಡಿ ಕಟ್ಟಬೇಕು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜು ಹೇಳಿದ್ದಾರೆ. [ಆನ್ ಲೈನ್ ಮೂಲಕ ತೆರಿಗೆ ಕಟ್ಟುವುದು ಹೇಗೆ?]

ಪಾವತಿ ಮಾಡುವುದು ಹೇಗೆ? : ಬಿಬಿಎಂಪಿ 2 ರೀತಿಯ ಸೌಲಭ್ಯಗಳನ್ನು ನೀಡಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಬಹುದು. ಅಥವಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿಯೂ ತೆರಿಗೆ ಪಾವತಿ ಮಾಡಬಹುದಾಗಿದೆ.

Rebate period for property tax extended to June 30

ತೆರಿಗೆ ಪಾವತಿ ಮಾಡಲು ಜನರು ಅರ್ಜಿ ನಮೂನೆ ಮತ್ತು ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬೇಕು. bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿ ಮಾಡುವ ಬಗ್ಗೆ ಮಾಹಿತಿ ಇದೆ.

ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ನೆಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಯಾವುದೇ ಬ್ಯಾಂಕಿನ ಮಾಸ್ಟರ್‌ ಹಾಗೂ ವೀಸಾ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ ಮೂಲಕವೂ ಪಾವತಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತ್ಯೇಕ ಸೇವಾ ಶುಲ್ಕವಿರುವುದಿಲ್ಲ. [ಬೆಂಗಳೂರಿಗರೇ ಗಮನಿಸಿ: ಏಪ್ರಿಲ್ 01 ರಿಂದ ಆಸ್ತಿ ತೆರಿಗೆ ಹೆಚ್ಚಳ]

ಕೆನರಾ ಬ್ಯಾಂಕ್‌ನ ಬೆಂಗಳೂರು ನಗರದ 175 ಶಾಖೆಗಳ ಜೊತೆ ಇನ್ನೂ ಐದು ಬ್ಯಾಂಕುಗಳನ್ನು ಸೇರಿಸಲಾಗಿದ್ದು, ಎಲ್ಲಿ ಬೇಕಾದರೂ ಪಾವತಿ ಮಾಡಬಹುದು. ಚೆಕ್‌ ಮೂಲಕ ತೆರಿಗೆ ಕಟ್ಟಿದರೆ, ನಗದೀಕರಣದ ಬಳಿಕ ರಶೀದಿ ದೊರೆಯುತ್ತದೆ.

ಆಸ್ತಿ ತೆರಿಗೆ ಹೆಚ್ಚಳ: ವಸತಿ ಪ್ರದೇಶಗಳಿಗೆ ಶೇ 20 ಮತ್ತು ವಸತಿಯೇತರ ಪ್ರದೇಶಗಳಿಗೆ ಶೇ 25ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಈ ಬಾರಿ ಇಲ್ಲಿ ತನಕ(ಏಪ್ರಿಲ್ ತಿಂಗಳಿನಿಂದ) ಸುಮಾರು 711.16 ಕೋಟಿ ರು ತೆರಿಗೆ ಸಂಗ್ರಹವಾಗಿದ್ದು, ಈ ಪೈಕಿ 163.21 ಕೋಟಿ ರು ಆನ್ ಲೈನ್ ಪಾವತಿ ಮೂಲಕ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+