ಕೆಟ್ಟ ಮತ ಯಂತ್ರ, ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರುಮತದಾನ
ಬೆಂಗಳೂರು, ಮೇ 12: ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರುಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.
ಹೆಬ್ಬಳಾದ ಲೊಟ್ಟೆಗೊಲ್ಲಹಳ್ಳಿಯ 158 ಮತಗಟ್ಟೆಯ 2ನೇ ಬೂತ್‌ನಲ್ಲಿ ಮತಯಂತ್ರ ಕೆಟ್ಟಿದ್ದ ಕಾರಣ ಬೆಳಿಗ್ಗಿನಿಂದ ಇಲ್ಲಿ ಒಂದೂ ಮತದಾನ ಆಗಿಲ್ಲ.
ಬೆಳಿಗ್ಗೆ ಮತಯಂತ್ರವನ್ನು ರಿಪೇರಿಗೆಂದು ತೆಗೆದುಕೊಂಡು ಹೋದ ಸಿಬ್ಬಂದಿ ಮಧ್ಯಾಹ್ನವಾದರೂ ಯಂತ್ರ ರಿಪೇರಿ ಆಗದ ಕಾರಣ ಒಬ್ಬ ಮತದಾರನೂ ಮತ ಹಾಕಲಿಲ್ಲ, ಕೊನೆಗೆ ಈಗ ಚುನಾವಣಾ ಆಯುಕ್ತರು ಮರು ಮತದಾನ ಮಾಡುವುದಾಗಿ ಘೋಷಿಸಿದ್ದಾರೆ.

ಮರುಮತದಾನದ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications