ಏಪ್ರಿಲ್ 8ರಂದು ಫೇಜರ್ ಟೌನ್‍ನಲ್ಲಿ ಕ್ರೈಸ್ತ ಬಾಂಧವರ ‘ವಿಮೋಚನಾ ಓಟ’

ವಿಮೋಚನಾ ಓಟ ಅಥವಾ ಸ್ಯಾಲ್ವೇಷನ್ ರನ್ ಎಂಬ 5ಕಿ.ಮೀಗಳ ಓಟವನ್ನು ನ್ಯೂ ಲೈಟ್ಸ್ ಸ್ಪೋಟ್ರ್ಸ್ & ಫಿಟ್‍ನೆಸ್ ಅಕಾಡೆಮಿ ಆಯೋಜಿಸಿದೆ. ಏಪ್ರಿಲ್ 8ರಂದು ಫ್ರೇಜರ್ ಟೌನ್‍ನ ಸಂತ ಫ್ರಾನ್ಸಿಸ್ ಜೇವಿಯರ್‍ ಕ್ಯಾಥಡ್ರಾಲ್ ಚರ್ಚ್‍ನಲ್ಲಿ ಈ ಓಟ ನಡೆಯಲಿದೆ.

ಬೆಂಗಳೂರು, ಮಾರ್ಚ್ 5: ವಿಮೋಚನಾ ಓಟ ಅಥವಾ ಸ್ಯಾಲ್ವೇಷನ್ ರನ್ ಎಂಬ 5ಕಿ.ಮೀಗಳ ಓಟವನ್ನು ನ್ಯೂ ಲೈಟ್ಸ್ ಸ್ಪೋಟ್ರ್ಸ್ & ಫಿಟ್‍ನೆಸ್ ಅಕಾಡೆಮಿ ಆಯೋಜಿಸಿದೆ.

ಏಪ್ರಿಲ್ 8ರಂದು ಫ್ರೇಜರ್ ಟೌನ್‍ನ ಸಂತ ಫ್ರಾನ್ಸಿಸ್ ಜೇವಿಯರ್‍ ಕ್ಯಾಥಡ್ರಾಲ್ ಚರ್ಚ್‍ನಲ್ಲಿ ಈ ಓಟ ನಡೆಯಲಿದೆ. ಇದರಲ್ಲಿ ಚರ್ಚ್‍ಗಳ ಮುಖ್ಯಸ್ಥರು ಮತ್ತು ಎಲ್ಲ ವರ್ಗಗಳ ಕೈಸ್ತ ಬಾಂಧವರು ಸೇರಿದಂತೆ 3000 ಜನರು ಭಾಗವಹಿಸುವ ನಿರೀಕ್ಷೆಯಿದೆ.[ಬೆಂಗಳೂರಿನಲ್ಲಿದ್ದ ಮಾಜಿ ರಾಷ್ಟ್ರಪತಿ ವಿವಿ ಗಿರಿ ಮನೆ ನೆಲಸಮ]

rchbishop Bernard Moras to Flag off ‘Salvation Run’ on April 8

ವಿಮೋಚನಾ ಓಟಕ್ಕೆ ಬೆಂಗಳೂರಿನ ಆರ್ಚ್‍ಬಿಷಪ್ ರೆವರೆಂಡ್ ಡಾ. ಬೆರ್ನಾಡ್ ಮೊರಾಸ್ ಮುಂಜಾನೆ 6:30 ಗಂಟೆಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭವಾಗಿ ಸಮಾಜದ ಹಲವಾರು ಪ್ರಮುಖರು ಮತ್ತು ಕ್ರೀಡಾ ತಾರೆಯರು ಹಾಜರಾಗಲಿದ್ದಾರೆ.[ರಾಮನವಮಿ ನೆಪದಲ್ಲಿ 'ಶೋಲೆ' ಬೆಟ್ಟಕ್ಕೆ ಮರುಪ್ರಯಾಣ]

ಕ್ರೀಡೆಯ ಮೂಲಕ ಜೀವನವನ್ನು ಸಮೃದ್ಧಿಗೊಳಿಸುವುದು, ಆರೋಗ್ಯಯುತ ಜೀವನಶೈಲಿ ಮತ್ತು ಉದ್ದೇಶಭರಿತ ಬಾಳ್ವೆ ನಡೆಸಲು ಪ್ರತಿಯೊಬ್ಬರಲ್ಲಿ ಶಿಸ್ತು ಮೂಡಿಸುವುದು ಈ ಓಟದ ಉದ್ದೇಶವಾಗಿದೆ.

ಈ ಓಟ ರಾಜ್ಯಮಟ್ಟದ ವಿಶ್ರಾಂತ ಕ್ರೀಡಾಪಟು ಮತ್ತು ಕ್ರೀಡಾ ನಿರ್ವಾಹಕರಾಗಿರುವ ಎಲ್ವಿಸ್ ಜೋಸೆಫ್ ಪರಿಕಲ್ಪನೆಯಾಗಿದೆ. ಇದೇ ಮೊದಲ ಬಾರಿಗೆ ಕ್ರೈಸ್ತ ಸಮಾಜದ ಎಲ್ಲ ಚರ್ಚ್‍ಗಳ ಮುಖಂಡರು ಮತ್ತು ಎಲ್ಲ ವರ್ಗದ ಜನರು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+