Ranya Rao: ಬೆದರಿಕೆ ಹಾಕುತ್ತಿದ್ದಾರೆ, ಹಿಂಸೆ ಕೊಡುತ್ತಿದ್ದಾರೆ! ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ರನ್ಯಾ ರಾವ್

ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧನವಾದ ಬಳಿಕ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ದೇಶ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕಳೆದ ವಾರ 14.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದ ನಟಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇದೀಗ ರನ್ಯಾ ರಾವ್ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆ ಸಂದರ್ಭದಲ್ಲಿ ಮೌಖಿಕ ಹಿಂಸೆ ಮತ್ತು ಬೆದರಿಕೆ ಹಾಕಿದ್ದು ಇದರಿಂದ ನನಗೆ ಆಘಾತವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಕಸ್ಟಡಿಯ ಸಂದರ್ಭದಲ್ಲಿ ದೈಹಿಕವಾಗಿ ಹಿಂಸೆ ನೀಡಿಲ್ಲ, ಆದರೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Ranya rao traumed court verbal torture allegations

ದೈಹಿಕೆ ಹಿಂಸೆ ಕೊಟ್ಟಿದ್ದಾರೆಯೇ ಎಂದು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಇಲ್ಲ ಎಂದು ಉತ್ತರಿಸಿದ ಅವರು, ನನಗೆ ಮೌಖಿಕವಾಗಿ ಹಿಂಸೆ ನೀಡಲಾಗಿದೆ. ಬೆದರಿಕೆ ಹಾಕಿದ್ದು ಇದರಿಂದ ನನಗೆ ಆಘಾತವಾಗಿದೆ, ನನ್ನ ಮನಸ್ಸಿಗೆ ನೋವಾಗಿದೆ ಎಂದು ನ್ಯಾಯಾಲಯದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರನ್ಯಾ ರಾವ್ ಆರೋಪವನ್ನು ಡಿಆರ್‌ಐ ಅಧಿಕಾರಿಗಳು ನಿರಾಕರಿಸಿದ್ದಾರೆ. ಬಂಧನ ಮತ್ತು ವಿಚಾರಣೆಯನ್ನು ಸಿಸಿಟಿವಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ರನ್ಯಾ ರಾವ್ ಮೇಲೆ ಹಲ್ಲೆ ಮಾಡಿದ್ರಾ?

ರನ್ಯಾ ರಾವ್ ಬಂಧನದ ಸಮಯದಲ್ಲಿ ಅಥವಾ ಬಂಧನದ ಬಳಿಕ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ವದಂತಿಗಳು ಬಂದ ಬಳಿಕ ಈ ಬೆಳವಣಿಗೆ ನಡೆದಿದೆ. ಅವರ ಚಿತ್ರಗಳು ವೈರಲ್ ಆಗಿದ್ದು ಕಣ್ಣುಗಳು ಊದಿಕೊಂಡಿರುವುದು, ಮುಖದ ಮೇಲೆ ಗಾಯವಾಗಿರುವ ಗುರುತು ಕಂಡುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ನಟಿಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಔಪಚಾರಿಕವಾಗಿ ದೂರು ನೀಡುವವರೆಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರನ್ಯಾ ರಾವ್‌ಗೆ ಮಾರ್ಚ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಮಂಗಳವಾರ (ಮಾರ್ಚ್ 11) ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಗಳಾದ ರನ್ಯಾ ರಾವ್, ಮಾರ್ಚ್ 3 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿದ್ದಾಗ 14.2 ಕೆಜಿ ತೂಕದ, 14.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳ ಜೊತೆ ಸಿಕ್ಕಿಬಿದ್ದಿದ್ದರು.

2014 ರ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ರನ್ಯಾ ರಾವ್ ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿದ ನಂತರ ಡಿಆಆರ್ ಐ ಅಧಿಕಾರಿಗಳು ಅವರ ಮೇಳೆ ಕಣ್ಣಿಟ್ಟಿದ್ದರು. 2024ರಲ್ಲಿ ಅವರು ದುಬೈಗೆ 27 ಬಾರಿ ಹೋಗಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+