• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆರಿ ತೋಟದಲ್ಲಿ ವಿಹರಿಸಲು ರಂಗಶಂಕರಕ್ಕೆ ಬನ್ನಿ

By Mahesh
|

ಬೆಂಗಳೂರು, ಜುಲೈ 21: ಬೆಂಗಳೂರು ಥಿಯೇಟರ್ ಕಂಪನಿ, ಆಂಟನ್ ಚೆಕಾಫ್ ನ 'ದಿ ಚೆರ್ರಿ ಆರ್ಚರ್ಡ್' ನಾಟಕದ ಕನ್ನಡಾನುವಾದ, ಚೆರ್ರಿ ತೋಟ ನಾಟಕವನ್ನು, ಜುಲೈ 23 , 2015 ರಂದು, ಸಂಜೆ7.30 ಕ್ಕೆ ಪ್ರದರ್ಶಿಸುತ್ತಿದೆ.

ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ ‘ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‌ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.

ನಾಟಕದ ಬಗ್ಗೆ: ನಾಟಕದ ಕೇಂದ್ರವಾದ ಚೆರ್ರಿ ತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿ ತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ.

ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ. ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.

ನಾಟಕದ ಕೇಂದ್ರವಾದ ಚೆರ್ರಿ ತೋಟ

ನಾಟಕದ ಕೇಂದ್ರವಾದ ಚೆರ್ರಿ ತೋಟ

ನಾಟಕದ ಕೇಂದ್ರವಾದ ಚೆರ್ರಿ ತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿ ತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ.

ಸಾರ್ವಕಾಲಿಕ ಶ್ರೇಷ್ಟ ನಾಟಕ

ಸಾರ್ವಕಾಲಿಕ ಶ್ರೇಷ್ಟ ನಾಟಕ

ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ. ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.

ನಿರ್ದೇಶಕ ವೆಂಕಟೇಶ್ ಪ್ರಸಾದ್ ಬಗ್ಗೆ

ನಿರ್ದೇಶಕ ವೆಂಕಟೇಶ್ ಪ್ರಸಾದ್ ಬಗ್ಗೆ

ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ವೆಂಕಟೇಶ್ ಪ್ರಸಾದ್, ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಮುಖವಾಗಿ ಕಾಣುತ್ತಿರುವ ನಟ ಮತ್ತು ಸಂಘಟಕ. ಬಹುಪಾಲು ರಂಗಭೂಮಿಯ ಸಾಂಗತ್ಯವನ್ನು ‘ಸಮುದಾಯ' ಸಂಘಟನೆ ಜೊತೆ

ಅಂದರೆ, ಸುಮಾರು 10 ವರ್ಷಗಳಕಾಲ ಸಮುದಾಯದ ಜೊತೆ ಗುರುತಿಸಿಕೊಂಡಿರುವ ವೆಂಕಟೇಶ್ ಪ್ರಸಾದ್, ರಂಗಭೂಮಿಯ ಮತ್ತು ಸಂಘಟನೆಯ ಪಾಠಗಳನ್ನು ಕಲಿತಿದ್ದು ಸಮುದಾಯದಲ್ಲಿ

ಸಮುದಾಯ, ಬೆಂಗಳೂರಿನ ಕಾರ್ಯದರ್ಶಿ

ಸಮುದಾಯ, ಬೆಂಗಳೂರಿನ ಕಾರ್ಯದರ್ಶಿ

ಎಮ್.ಎಸ್.ಸತ್ಯು ಅವರ ‘ಕುರಿ' ನಾಟಕದಲ್ಲಿ ಪಾತ್ರಮಾಡುವ ಮೂಲಕ ಸಮುದಾಯ ಪ್ರವೇಶಿಸಿದ ಇವರು, ಸಮುದಾಯದ ನಂತರದ ಎಲ್ಲಾ ಚಟುವಟಿಕೆಗಳ ಭಾಗವಾದ ಇವರು, ಸಂಘಟನೆಯಲ್ಲೂ ಪ್ರಮುಖಪಾತ್ರ ವಹಿಸುತ್ತ, ಕಳೆದ 3 ವರ್ಷಗಳಿಂದ ಸಮುದಾಯ, ಬೆಂಗಳೂರಿನ ಕಾರ್ಯದರ್ಶಿಯಾಗಿದ್ದರು.

ಪ್ರಮುಖ ನಿರ್ದೇಶಕರ ಜೊತೆ

ಪ್ರಮುಖ ನಿರ್ದೇಶಕರ ಜೊತೆ

ಎಮ್.ಎಸ್.ಸತ್ಯು, ನಟರಾಜ್ ಹೊನ್ನಳ್ಳಿ, ಪ್ರಮೋಸ್ ಶಿಗ್ಗಾಂವ್, ಪ್ರಕಾಶ್ ಬೆಳವಾಡಿ, ಶ್ರೀಪಾದ್ ಭಟ್, ಸ್ಯಾಮ್‍ಕುಟ್ಟಿ ಪಟ್ಟಂಕರಿ ಮುಂತಾದ ಪ್ರಮುಖ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ಮಹತ್ವದ ನಾಟಕಗಳಲ್ಲಿ ಪ್ರಮುಖ ಪಾತ್ರ

ಮಹತ್ವದ ನಾಟಕಗಳಲ್ಲಿ ಪ್ರಮುಖ ಪಾತ್ರ

ಸಮುದಾಯದ ಪ್ರಮುಖ ನಾಟಕಗಳಾದ ‘ಕುರಿ', ‘ಜುಗಾರಿಕ್ರಾಸ್'', ‘ಪಂಪಭಾರತ', ಕತ್ತಲೆದಾರಿದೂರ', ‘ಸುತ್ತಿಕೊಂಡರೆಸರ್ಪ', ‘ಕಲ್ಯಾಣದಕೊನೆಯದಿನಗಳು', ‘ನಮ್ಮ ರಾಬರ್ಟ್ ಕ್ಲೈವ್, ‘ತುಘಲಕ್' ಹೀಗೆ ಹಲವು ಮಹತ್ವದ ನಾಟಕಗಳಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಾರೆ. ಇವರು ಅಭಿನಯಿಸಿರುವ ಸಮುದಾಯದ ಇತ್ತೀಚಿನ ‘ತುಘಲಕ್' ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾದ ಸಂಚಲನ ಮೂಡಿಸಿ ಅತಿ ಕಡಿಮೆ ಅವಧಿಯಲ್ಲಿ ಸುಮಾರು 40 ಪ್ರದರ್ಶನಗಳನ್ನು ಕಂಡಿದೆ.

 ಪ್ರಮುಖ ಪ್ರಯೋಗಾತ್ಮಕ ಚಿತ್ರದಲ್ಲಿ

ಪ್ರಮುಖ ಪ್ರಯೋಗಾತ್ಮಕ ಚಿತ್ರದಲ್ಲಿ

ಇವರ ತುಘಲಕ್ ಪಾತ್ರನಿರ್ವಹಣೆ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ರಂಗಭೂಮಿಯಲ್ಲದೆ ಕಿರುತೆರೆ, ಸಿನಿಮಾಗಳಲ್ಲೂ ತೊಡಗಿಸಿಕೊಂಡಿರುವ ವೆಂಕಟೇಶ್ ಪ್ರಸಾದ್, ಟಿ.ಎನ್.ಸೀತಾರಾಮ್ ರವರ ಬಹು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಭಗವತಿಕಾಡು', ‘ಮಾಗಿಯಕಾಲ' ದಂಥ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ಇತ್ತೀಚಿಗಷ್ಟೆ ‘ಗಾಳಿ ಬೀಜ' ಎಂಬ ಪ್ರಮುಖ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Theatre Company presents Anton Chekhov's "The Cherry Orchard" in Kannada The play is translated and directed by Venkatesh Prasad. The play will be stage Ranga Shankara on 23 July 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more