ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ

ಕಾಂಗ್ರೆಸ್ ನಾಯಕಿ ರಮ್ಯಾ ಅವರು ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಇತ್ತೀಚೆಗೆ ಭೇಟಿಯಾದರೂ ಗಡಿ ವಿವಾದ ಮಾತಾಡಿಲ್ಲ ಎಂಬುದು ಅವರ ಟೀಕೆ.

ಬೆಂಗಳೂರು, ಜುಲೈ 10: ಮೋಹಕ ನಟಿ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿಯವರತ್ತ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷರಾದ ಜಿನ್ ಪಿಂಗ್ ಅವರನ್ನು ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಭೇಟಿಯಾದಾಗ ಗಡಿಯಲ್ಲಿ ಎರಡೂ ದೇಶಗಳ ಮಧ್ಯೆ ಎದ್ದಿರುವ ತಕರಾರಿನ ಬಗ್ಗೆ ಮಾತಾಡಿಲ್ಲ. ಇದು ಮೋದಿಯವರು ಮಾಡಿದ ತಪ್ಪು ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

Ramya criticises PM Modi for not discussing border issue with Jin Ping

ಕಳೆದೆರಡು ವಾರಗಳಿಂದ ಚೀನಾ-ಭಾರತದ ನಡುವೆ ಸಮರದ ಕಾರ್ಮೋಡ ಕವಿದಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಸರ್ಕಾರ ತನ್ನ ಮಿಲಿಟರಿ ನಿಲ್ಲಿಸಿ ಕಾಲು ಕೆದರಿ ಜಗಳ ಕಾಯಲು ಸಿದ್ಧವಾಗಿದೆ. ಇದಕ್ಕೆ ಭಾರತೀಯ ಸೇನೆಯೂ ಸಡ್ಡು ಹೊಡೆದು ನಿಂತಿದೆ.

ಇಂಥ ಪರಿಸ್ಥಿತಿಯಿದ್ದರೂ, ಉಭಯ ನಾಯಕರು ಪರಸ್ಪರ ಭೇಟಿಯಾಗುವ ಅವಕಾಶದಲ್ಲಿ ಮೋದಿಯವರು ಗಡಿಯಲ್ಲಿನ ಗಂಭೀರ ವಿಚಾರವನ್ನು ಚರ್ಚಿಸಿಯೇ ಇಲ್ಲ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+