ಆರ್. ಆರ್. ನಗರ; 27 ಕೋವಿಡ್ ಸೋಂಕಿತರಿಂದ ಮತದಾನ

ಬೆಂಗಳೂರು, ನವೆಂಬರ್ 03: ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭವಾಗಿದೆ. ಕೋವಿಡ್ ಸಂದರ್ಭದಲ್ಲಿ ಮತದಾನ ನಡೆಯುತ್ತಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ 27 ಮತದಾರರು ಮತದಾನ ಮಾಡುವುದಾಗಿ ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ.

ಕೋವಿಡ್ ಸೋಂಕಿತರು ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ಸಂಜೆ 5 ರಿಂದ 6 ಗಂಟೆಯ ತನಕ ಕೋವಿಡ್ ಸೋಂಕಿತರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬಹುದಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಆರ್. ಆರ್. ನಗರ ವ್ಯಾಪ್ತಿಯಲ್ಲಿರುವ 148 ಕೋವಿಡ್ ಸೋಂಕಿತರಿಗೆ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿದ್ದರು. ಇವರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 12, ಹೋಂ ಐಸೋಲೇಷನ್‌ನಲ್ಲಿರುವ 15 ಕೋವಿಡ್ ಸೋಂಕಿತರು ಮತದಾನ ಮಾಡುವುದಾಗಿ ಹೇಳಿದ್ದಾರೆ.

Rajarajeshwari Nagar By Poll 27 COVID Patients To Cast Vote

ಕೋವಿಡ್ ಸೋಂಕಿತ ಮತದಾರರು ಮತಗಟ್ಟೆಗೆ ಬರಲು, ವಾಪಸ್ ಹೋಗಲು ಬಿಬಿಎಂಪಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ಸೋಂಕಿತರಿಗೆ ಪಿಪಿಇ ಕಿಟ್‌ಗಳನ್ನು ಬಿಬಿಎಂಪಿಯೇ ಒದಗಿಸಲಿದೆ.

ಮತದಾನ ಈಗಾಗಲೇ ಆರಂಭವಾಗಿದೆ. ಆದರೂ ಸಹ ಕೋವಿಡ್ ಸೋಂಕಿತರು ಮತದಾನ ಮಾಡಲು ಬಯಸಿದರೆ ಬಿಬಿಎಂಪಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಬಿಬಿಎಂಪಿ ನಿಯಂತ್ರಣ ಕೊಠಡಿ ಸಂಖ್ಯೆ 080-28600954 ಅಥವ ಮೊಬೈಲ್ ನಂಬರ್ 9482224474.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+