Bengaluru Rains : ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ
ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು ಮಾರ್ಚ್ 17: ಉರಿ ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿದು ಹೋಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ತಂಪೆರೆದಿದ್ದಾನೆ. ಕಳೆದ ದಿನ ಮಳೆ ರಾಯ ಬೆಂಗಳೂರಿನ ಜನರಿಗೆ ಬಿಸಿಲಿನ ತಾಪಮಾನವನ್ನು ಕಡಿಮೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಗುರುವಾರ 3.4ಮಿಮೀ ಮಳೆಯಾಗಿದೆ. ಇದು ಮೊದಲ ಮುಂಗಾರು ಪೂರ್ವ ಮಳೆ ಯಾಗಿದ್ದು ಇತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#Bengaluru received 3.4mm rainfall on Thursday. It's first pre-monsoon showers. Other districts experience thunder showers. @IMDWeather @metcentre_bng forecast thunder showers over parts of Karnataka for next 48hours@NewIndianXpress @XpressBengaluru @KannadaPrabha @Cloudnirad pic.twitter.com/mh15PbLkoj
— Bosky Khanna (@BoskyKhanna) March 17, 2023
ಜೊತೆಗೆ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಸಮುದ್ರಮಟ್ಟದಲ್ಲಿ ಸೃಷ್ಟಿಯಾದ ಸುಳಿಗಾಳಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಮುಂದಿನ ಮೂರ್ನಾಲ್ಕು ದಿನ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಮಾರ್ಚ್ 19ರವರೆಗೆ ಮೋಡ ಕವಿದ ವಾತಾವರಣ ಇರಲಿದೆ. ರಾಜಧಾನಿಯಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಗುರುವಾರ ಬೆಂಗಳೂರಿನಲ್ಲಿ ಮಧ್ಯಾಹ್ನ ನಂತರ ಮೋಡ ಕವಿದ ವಾತಾವರಣ ಹಾಗೂ ಮಳೆ ಆರಂಭವಾಯಿತು. ತಡರಾತ್ರಿಯೂ ಗುಡುಗು-ಮಿಂಚು ಸಮೇತ ಮಳೆಯಾಗಿದೆ. ಸಿಲಿಕಾನ್ ಸಿಟಿಯ ಬಸವನಗುಡಿ, ಕಾರ್ಪೋರೇಷನ್, ಹನುಮಂತ ನಗರ, ವಿದ್ಯಾಪೀಠ, ಯಲಹಂಕ, ಶಿವಾಜಿ ನಗರ, ವಿಧಾನಸೌಧ ಸುತ್ತಮುತ್ತ, ಯಲಹಂಕ, ರಾಜಾಜಿ ನಗರ, ಆರ್.ಟಿ.ನಗರದಲ್ಲಿಯೂ ಮಳೆಯಾಗಿದೆ. ಮಾತ್ರವಲ್ಲ ರಾಯಚೂರಿನಲ್ಲಿ ಆನೆಕಲ್ಲು ಮಳೆಗೆ ಎತ್ತು ಬಲಿಯಾಗಿದೆ. ಜೊತೆಗೆ ಬೀದರ್ ಹಾಗೂ ಕೋಲಾರದಲ್ಲೂ ಆನೆಕಲ್ಲು ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಅಂತ್ಯಗೊಂಡಿದೆ. ದಿನೇ ದಿನೆ ತಾಪಮಾನದಲ್ಲಿ ಬದಲಾವಣೆ ಆಗುತ್ತಿದೆ. ಕಳೆದ ತಿಂಗಳು ಈ ಭಾಗದಲ್ಲಿ ಅಸಹಜ ಬಿಸಿಯಿಂದ ತಾತ್ಕಾಲಿಕವಾದ ಶಾಖದ ಅಲೆ ಕಂಡು ಬಂದಿತ್ತು. ಈಗ, ತೇವಾಂಶವು ಹೆಚ್ಚುತ್ತಿದ್ದು, ಅರಬ್ಬಿ ಸಮುದ್ರ ಚಂಡಮಾರುತದಂತಹ ಅಲೆಗಳನ್ನು ಬೀಸುತ್ತಿದೆ. ಈ ಕಾರಣದಿಂದ ಮಳೆ ಮತ್ತು ಗುಡುಗು ಸಹಿತ ಮಳೆಯು ಆಗುತ್ತಿದೆ ಎಂದು ಐಎಂಡಿ ಕರ್ನಾಟಕ ಕೇಂದ್ರದ ವಿಜ್ಞಾನಿ ಪ್ರಸಾದ್ ತಿಳಿಸಿದರು.












Click it and Unblock the Notifications