ಬೆಂಗಳೂರಲ್ಲಿ ಇಂದು ಮಳೆ ಸಾಧ್ಯತೆ, ಒಂದು ಕೊಡೆ ಜೊತೆಗಿರಲಿ
ಬೆಂಗಳೂರು, ಏ.25: ಬೆಂಗಳೂರಲ್ಲಿ ಇಂದು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಒಂದು ಕೊಡೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಒಳಿತು.
ಏ.25ರಿಂದ ಏ.29ರಂದು ಸ್ವಲ್ಪ ಪ್ರಮಾಣದ ಮಳೆಯಾಗಲಿದೆ. ವಾರದ ಹಿಂದೆ ನಗರದಲ್ಲಿ ಎರಡು ದಿನ ಭಾರಿ ಮಳೆಯಾಗಿತ್ತು. ನಂತರ ಟ್ರಫ್ ಪರಿಣಾಮವಿದ್ದರೂ ಮಳೆ ಕಡಿಮೆಯಾಗಿದೆ ಕೇವಲ ಗುಡುಗು, ಮಿಂಚು ಬಂದು ಮರೆಯಾಗಿದೆ.
ಕೆಲವು ಕಡೆ ತುಂತುರು ಮಳೆಯಾಗಿದೆ. ಒಂದು ವಾರಕ್ಕೆ ಹೋಲಿಸಿದರೆ ರಾತ್ರಿಹೊತ್ತು ಸೆಕೆ ಕಡಿಮೆಯಾಗಿದೆ.ಮಳೆ ಬರುವ ಸಮಯದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಸಾರ್ವಜನಿಕರು ಮರದಡಿ ನಿಲ್ಲಿವುದಾಗಲಿ ಅಥವಾ ನಿರ್ಮಾಣ ಹಂತದ ಕಟ್ಟಡದ ಪಕ್ಕ ನಿಲ್ಲುವುದಾಗಲಿ ಖಂಡಿತವಾಗಿಯೂ ಮಾಡಬಾರದು.

ಬೆಂಗಳೂರು ನಗರದಲ್ಲಿ ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ 20.7 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.











Click it and Unblock the Notifications