ಕೆರೆಗಳನ್ನು ಮುಚ್ಚಿಸಿದ್ದೇ ಬೆಂಗಳೂರಿನ ಈ ದೈನೇಸಿ ಸ್ಥಿತಿಗೆ ಕಾರಣ!
ಬೆಂಗಳೂರಿನಲ್ಲಿ ಮಳೆ ನೀರಿನ ಅವಾಂತರ. ಕೆರೆಗಳನ್ನು ಕಾಲೋನಿಗಲಾಗಿ ಪರಿವರ್ತಿಸಿದ್ದೇ ಬೆಂಗಳೂರು ಮುಳುಗಡೆಗೆ ಕಾರಣ ಎನ್ನುವ ನಾಗರಿಕರು.
ಬೆಂಗಳೂರು, ಆಗಸ್ಟ್ 15: ಬೆಂಗಳೂರಿನಲ್ಲಿ ಆಯಾ ಕಾಲಘಟ್ಟದಲ್ಲಿ ಹಲವಾರು ಕೆರೆಗಳನ್ನು ಮುಚ್ಚಿಸಿದ್ದರಿಂದಲೇ ಬೆಂಗಳೂರಿನಲ್ಲಿ ದೊಡ್ಡ ಮಳೆ ಬಂದರೆ ಇಡೀ ನಗರವೇ ನೀರಿನಲ್ಲಿ ಮುಳುಗಲಿರುವ ದೋಣಿಯಂತಾಗಲು ಕಾರಣ ಎಂದು ಹಲವಾರು ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ಜವಾಬ್ದಾರಿಯುತ ಸಂಸ್ಥೆಯಾದ ಬಿಡಿಎ, ಇತ್ತೀಚಿನ ವರ್ಷಗಳಲ್ಲಿ ಸುಮಾರು 26 ಕೆರೆಗಳನ್ನು ಮುಚ್ಚಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸಿದೆ ಎಂದು ಕೆಲ ಮೂಲಗಳು ಹೇಳುತ್ತವೆ.

ಕಾಚರಕನಹಳ್ಳಿ ಕೆರೆ, ಮಿಲ್ಲರ್ಸ್ ಟ್ಯಾಂಕ್ ಬಂಡ್, ಚೆನ್ನಮ್ಮ ಕೆರೆ ಅಚ್ಚುಕಟ್ಟು, ಡಾಲರ್ಸ್ ಕಾಲೋನಿ, ಜೆಪಿ ನಗರ, ವೆಂಕಟರಾಯನ ಕೆರೆ, ಚಿಕ್ಕಲ್ಲಸಂದ್ರ, ವಸಂತಪುರ ಜನಾರ್ದನ ಕೆರೆ, ಕೋಣನಕುಂಟೆ, ಹಲಗೆವಡೇರ ಹಳ್ಳಿಯ ಕೆರೆ ಸೇರಿದಂತೆ ಅನೇಕ ಕೆರೆಗಳನ್ನು ಮುಚ್ಚಿಸಿ ಅಲ್ಲೆಲ್ಲಾ ಜನ ವಸತಿ ಪ್ರದೇಶಗಳಾಗಿ ಪರಿವರ್ತಿಸಲಾಗಿದೆ.

ಇದರ ಜತೆಯಲ್ಲೇ, ರಾಜಕಾಲುವೆಗಳ ಒತ್ತುವರಿ ಆಗಿರುವುದು ಮಳೆ ಬಂದಾಗ ಹೀಗೆ ನೀರು ನುಗ್ಗಲು ಮತ್ತೊಂದು ಪ್ರಮುಖ ಕಾರಣ. ನಗರದ ಹಲವಾರು ಪ್ರದೇಶಗಳ ರಾಜಾ ಕಾಲುವೆಗಳ ಒತ್ತುವರಿ ಜತೆಗೆ, ಹಲವಾರು ರಾಜಾಕಾಲುಗಳ ಸಂಪರ್ಕ ಕಡಿದು ಹೋಗಿರುವುದು ಹೀಗೆ ನೀರು ಎಲ್ಲೆಂದರಲ್ಲಿ ಹರಿದಾಡಲು ಕಾರಣ ಎನ್ನಲಾಗಿದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
GBA: ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ರೆ ಬೀಳುತ್ತೆ ದಂಡ: ನಗರದಲ್ಲಿ ಬಿರುಸಿನ ಕಾರ್ಯಾಚರಣೆ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications