AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ

ನವದೆಹಲಿ: ದೇಶದಾದ್ಯಂತ ಐಟಿ ಕಂಪನಿಗಳು, ಕಾರ್ಪೋರೇಟ್ ಆಫೀಸ್‌ಗಳಲ್ಲಿ ನೌಕರರ ಸಾಮೂಹಿಕ ವಜಾ ಕ್ರಮಗಳು 2026ರಲ್ಲೂ ಮುಂದುವರಿದಿವೆ. ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಅನಿವಾರ್ಯ ಎನ್ನುವ ವಾತಾವರಣ ಇತ್ತು. ಆದರೆ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ, ಕೆಲಸ-ನೌಕರರ ಬದಲಾವಣೆ, ಅಧಿಕ ನಿರ್ವಹಣಾ ವೆಚ್ಚ, ನಷ್ಟದ ಹೆಸರಿನಲ್ಲಿ ಉದ್ಯೋಗಿಗಳನ್ನು ಅನೇಕ ಕಂಪನಿಗಳಿಗೆ ಮನೆಗೆ ಕಳುಹಿಸುತ್ತಿದೆ. ಇತ್ತೀಚೆಗಷ್ಟೆ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾಗಿರುವ ಒರಾಕಲ್ ಕಂಪನಿಯು ತನ್ನ ಸಾವಿರಾರು ನೌಕರರಿಗೆ ಬೆಳ್ಳಂಬೆಳಗ್ಗೆ ಉದ್ಯೋಗ ಬೃಹತ್ ವಜಾ ನಿರ್ಧಾರ ಮೂಲಕ ಶಾಕ್ ನೀಡಿತ್ತು. ಸದ್ಯ ಕಳೆದ ಒಂದು ವರ್ಷದಿಂದ ಈವರೆಗೆ ಯಾವೆಲ್ಲ ಕಂಪನಿಗಳಲ್ಲಿ ಎಷ್ಟೆಷ್ಟು ನೌಕರರ ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಅಮೆರಿಕಾ ಮೂಲಕ ಮಾಹಿತಿ ತಂತ್ರಜ್ಞಾನ ಕಂಪನಿ ಒರಾಕಲ್ ಮೊನ್ನೆಯಷ್ಟೆ ಸುಮಾರು 30,000 ಸಾವಿರ ಮಂದಿಯನ್ನು ವಜಾಗೊಳಿಸಿದೆ. ಇದರಲ್ಲಿ ಕ್ಯಾನ್ಸರ್ ರೋಗಿಯೊಬ್ಬರು ಇದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅಮೆಜಾನ್ ಕಂಪನಿ ಸಹ ಸುಮಾರು ಜನರನ್ನು ಮನೆಗೆ ಕಳುಹಿಸಿತ್ತು. ಉದ್ಯೋಗದಲ್ಲಿ ಹೀಗೆ ಮುಂದುವರಿಯುತ್ತೇವೆ ಎಂದುಕೊಂಡು ಒಂದಷ್ಟು ಕಮೀಟ್‌ಮೆಂಟ್ ಮಾಡಿಕೊಂಡವರು, ಭರವಸೆ ಇಟ್ಟುಕೊಂಡವರಿಗೆ ಕಂಪನಿಗಳ ಉದ್ಯೋಗ ವಜಾ ನಿರ್ಧಾರ ಸಾಕಷ್ಟು ಪರಿಣಾಮ ಉಂಟು ಮಾಡಿದೆ.

Global IT Layoffs 2026

2025-2026 ಏಪ್ರಿಲ್‌ವರೆಗೆ ನೌಕರರ ವಜಾ ಮಾಹಿತಿ

* ಅಮೆಜಾನ್ - 30,184

* ಎಚ್‌ಪಿ - 8,000

* ಮೆಟಾ - 5,800

* ಇಂಟೆಲ್ - 27,058

* ಮೈಕ್ರೋಸಾಫ್ಟ್ - 15,347

* ಸೇಲ್ಸ್‌ಫೋರ್ಸ್ - 5,385

* ಬ್ಲಾಕ್ - 4,931

* ಕೆಲಸದ ದಿನ - 2,150

* ಸಾರಾಂಶಗಳು - 2,000

* ವೈಸ್‌ಟೆಕ್ - 2,000

* ಅಟ್ಲಾಸಿಯನ್ - 1,950

* ನಾರ್ತ್‌ವೋಲ್ಟ್ - 2,800

* ಹೆವ್ಲೆಟ್ ಪ್ಯಾಕರ್ಡ್ - 2,552

* ಆಟೋಡೆಸ್ಕ್ - 2,350

* ಎಎಸ್‌ಎಂಎಲ್ - 1,700

ಕೃತಿಕ ಬುದ್ಧಿಮತ್ತೆ ಎಫೆಕ್ಟ್!

ಹೌದು ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ (ಎಐ) ಕಾಲಿಟ್ಟಿದೆ. ಐಟಿ ಕಂಪನಿಗಳಲ್ಲಿ ಕಾಲಿಟ್ಟು ವರ್ಷಗಳೇ ಕಳೆದಿವೆ. ಅಲ್ಲೀಗ ಮಾರುಕಟ್ಟೆ ವಿಭಾಗ, ಎಚ್‌ಆರ್‌, ಸೇಲ್ಸ್, ಸಾಫ್ಟವೇರ್ ಡೆವಲಪಿಂಗ್, ಕೋಡ್ ಜನರೇಟಿಂಗ್ ಹೀಗೆ ನಾನಾ ವಿಭಾಗಗಳಲ್ಲಿ ಎಐ ಅಳವಡಿಕೆ ಆಗುತ್ತಿದೆ. ಇದರ ಪರಿಣಾಮವಾಗಿ ಭಾರತ ಸೇರಿ ಜಾಗತಿಕವಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ.

ಕೆಲಸದಿಂದ ವಜಾ: ಮ್ಯಾನೇಜರ್‌ಗೆ ಚಾಕಿವಿನಿಂದ ಚುಚ್ಚಿದ ನೌಕರರ

ಕರ್ನಾಟಕದ ಬೆಂಗಳೂರಿನಲ್ಲಿ ಫ್ಯಾಕ್ಟರಿಯೊಂದರಿಂದ ಕೆಲಸದಿಂದ ತೆಗೆದು (ಉದ್ಯೋಗ ವಜಾ) ಹಾಕಿದ್ದಕ್ಕೆ ಆಕ್ರೋಶಗೊಂಡಿದ್ದ ನೌಕರನೊಬ್ಬ ಫ್ಯಾಕ್ಟರಿ ಮ್ಯಾನೇಜರ್ ರಾಹುಲ್ ಅವರಿಗೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಮ್ಯಾನೇಜರ್ ಬುದುಕುಳಿಯಲಿಲ್ಲ.

ಘಟನೆಯು ಬೆಂಗಳೂರಿನ ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೇಟ್‌ ಲಿಮಿಟೆಡ್ ನಲ್ಲಿ ನಡೆದಿದೆ. ಚಾಕುವಿನಿಂದ ಚುಚ್ಚಿ ಪೊಲೀಸರ ವಶದಲ್ಲಿರುವ ನೌಕರರನನ್ನು ಯಾದಿಗಿರಿ ಮೂಲದ ಹನುಮಂತಪ್ಪ ಎನ್ನಲಾಗಿದೆ.

ಒರಾಕಲ್ ಮೇಲೆ ಇರಾನ್ ದಾಳಿ

ಅಮೆರಿಕ ಮೂಲದ ಒರಾಕಲ್ ಕಂಪನಿಯ ಮೇಲೆ ದಾಳಿ ಆಗಿದೆ. ಇರಾನ್‌-ಅಮೆರಿಕಾ ಮತ್ತು ಇಸ್ರೇಲ್ ಮಧ್ಯೆ ಯುದ್ಧ ನಡೆಯುತ್ತಿದೆ. ದುಬೈನಲ್ಲಿರುವ ಒರಾಕಲ್ ಕಂಪನಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎನ್ನಲಾಗಿದೆ. ಭಾರತದ 12,000 ಉದ್ಯೋಗಿಗಳು ಒಳಗೊಂಡಂತೆ ಜಾಗತಿಕವಾಗಿ 30,000 ನೌಕರರನ್ನು ವಜಾಗೊಳಿಸಿದ ಬೆನ್ನಲ್ಲೆ ಆ ಕಂಪನಿ ಮೇಲೆ ದಾಳಿ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+