Rain: ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಗೂಗಲ್ ಮ್ಯಾಪ್ ತರಬಂತು ವಾಟರ್ ಮ್ಯಾಪ್, ಏನಿದರ ಉಪಯೋಗ ?
Bengaluru Rains: ಗೂಗಲ್ ಮ್ಯಾಪ್‌ನ ಬಗ್ಗೆ ನಿಮಗೆಲ್ಲ ಗೊತ್ತಿದೆ. ಅದೇ ತರ ಮಳೆ ಬಂದಾಗ ಒಂದು ಆ್ಯಪ್ ಇದ್ದು ಎಲ್ಲೆಲ್ಲಿ ಮಳೆ ನೀರಿನ ಹರಿವು ಯಾವ ರೀತಿ ಇದೆ. ಯಾವ ಪ್ರದೇಶದಲ್ಲಿ ಹೋಗಬಹುದು ಹಾಗೂ ಈ ಹಿಂದೆ ಯಾವ ಭಾಗದಲ್ಲಿ ಪ್ರವಾಹವಾಗಿತ್ತು ಎನ್ನುವ ಎಲ್ಲಾ ಮಾಹಿತಿಯನ್ನೂ ಕೊಡುವ ಆ್ಯಪ್ ಇದ್ದರೆ ಮಜವಾಗಿರುತ್ತಲ್ಲ. ಕೇಳುವಾಗಲೇ ಇದು ಕುತೂಹಲ ಕೆರಳಿಸುತ್ತೆ. ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಈಚೆಗೆ ಭಾರೀ ಅನಾಹುತವೇ ಸೃಷ್ಟಿಯಾಗಿತ್ತು. ಅದನ್ನು ತಪ್ಪಿಸುವುದಕ್ಕೆ ಇದೀಗ ಹೊಸ ವಾಟರ್ (Blr water log)ಲಾಗ್ ಎನ್ನುವ ಮ್ಯಾಪ್ ಪರಿಚಯಿಸಲಾಗಿದೆ.
ಬೆಂಗಳೂರಲ್ಲಿ ಸಣ್ಣ ಮಳೆಯಾದರೂ, ರಾಜಕಾಲುವೆಗಳಲ್ಲಿ ನೀರು ತುಂಬಿಕೊಂಡು ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಐಟಿ ಉದ್ಯೋಗಿಗಳು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದು, ಬೆಂಗಳೂರಿಗರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನ ರಾಜಕಾಲುವೆ ಹಾಗೂ ನೀರು ಹರಿಯವ ಪ್ರದೇಶಗಳ ಮ್ಯಾಪ್ ರಚನೆ ಮಾಡಿದ್ದು, ಇದು ಮಳೆಯ ರಚನೆಯನ್ನು ಹಾಗೂ ಯಾವ ಪ್ರದೇಶದಲ್ಲಿ ಮಳೆ ಬಂದರೆ ಪರಿಸ್ಥಿತಿ ಹೇಗೆ ಇರುತ್ತದೆ ಎನ್ನುವುದನ್ನು ತಿಳಿಯಲು ಸಹಕಾರಿಯಾಗಿದೆ. ಏನಿ ಮ್ಯಾಪ್‌ನ ವಿಶೇಷ ಇದು ಯಾವ ರೀತಿ ಬೆಂಗಳೂರಿನಲ್ಲಿ ಮಳೆ ಬಂದಾಗ ಸಹಕಾರಿ ಆಗಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಸಣ್ಣ ಮಳೆ ಬಂದರೂ ಪ್ರವಾಹ ಪರಿಸ್ಥಿತಿಯೇ ಎದುರಾಗುತ್ತದೆ. ಈಚೆಗೆ ಬೆಂಗಳೂರಲ್ಲಿ ಸುರಿದ ಮಳೆಯಿಂದ ಐಟಿ ಉದ್ಯೋಗಿಗಳು ಹೆಚ್ಚಾಗಿ ಇರುವ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ ಈ ಭಾಗದಲ್ಲಿ ರಸ್ತೆಗಳಲ್ಲೇ ಮಳೆ ನೀರು ನಿಂತು ಜನ ಪರದಾಡುವಂತೆ ಆಗಿತ್ತು. ಈ ಬೆನ್ನಲ್ಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಈ ಇಬ್ಬರು ಐಟಿ ಉದ್ಯೋಗಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರು ವಾಟರ್ (Blr water log)ಲಾಗ್ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.
ಬೆಂಗಳೂರಲ್ಲಿ ಭಾರೀ ಮಳೆ ಬರುವುದು ಇರಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಂದರೂ ಜನ ಪರದಾಡುವ ಪರಿಸ್ಥಿತಿ ಇದೆ. ಇದಕ್ಕೆ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಸೇರಿದಂತೆ ಹಲವು ಕಾರಣಗಳು ಇವೆ. ಹೊಸದಾಗಿ ಸಿಟಿಗೆ ಬಂದವರಿಗೆ ಅಥವಾ ಇಲ್ಲೇ ಇರುವವರಿಗೆ ಬೆಂಗಳೂರಿನ ಯಾವ ಭಾಗದಲ್ಲಿ ಮಳೆ ಬಂದರೆ ಯಾವ ರೀತಿ ಇರುತ್ತದೆ ಎನ್ನುವುದು ತಿಳಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಐಟಿ ಉದ್ಯೋಗಿಗಳಾದ ಅಮನ್ ಭಾರ್ಗವ ಮತ್ತು ವಿವೇಕ್ ಮ್ಯಾಥ್ಯೂ ಎನ್ನುವವರು 'Blr ವಾಟರ್ ಲಾಗ್' ಎನ್ನುವ ಹೊಸ ಐಡಿಯಾ ಪರಿಚಯಿಸಿದ್ದಾರೆ. ಈ ಬಗ್ಗೆ diagramchasing.fun ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಷಯ ಇದೀಗ ವೈರಲ್ ಆಗ್ತಿದೆ.
ಇನ್ನು https://diagramchasing.fun/ ಬೆಂಗಳೂರಿನಲ್ಲಿ ಮಳೆ ನೀರಿನಿಂದ ಎಲ್ಲೆಲ್ಲಿ ಹಾಗೂ ಯಾವ ರೀತಿ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಬೆಂಗಳೂರಿನ ಪ್ರಮುಖ ಭಾಗದಲ್ಲಿ ನೀರು ಯಾವ ರೀತಿ ಹರಿಯುತ್ತದೆ ಹಾಗೂ ಎಲ್ಲೆಲ್ಲಿ ಮಳೆ ನೀರು ನಿಲ್ಲುತ್ತದೆ ಎನ್ನುವುದು 'Blr ವಾಟರ್ ಲಾಗ್'ನ ಮೂಲಕ ನಿಮಗೆ ತಿಳಿಯಲಿದೆ. ಅಲ್ಲದೇ ಈ ಹಿಂದೆ ಈ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿತ್ತೇ ಅಥವಾ ಯಾವ ರೀತಿ ಇರುತ್ತದೆ ಎನ್ನುವ ಮಾಹಿತಿಯೂ ಇದರಲ್ಲಿ ನಿಮಗೆ ಸಿಗಲಿದೆ.

Blr water log ಮ್ಯಾಪ್‌ನಲ್ಲಿ ನೀಲಿ ಬಣ್ಣದ ಗುರುತಿನ ಮೂಲಕ ನೀರು ಯಾವುದಾದರೂ ಭಾಗದಲ್ಲಿ ಹೆಚ್ಚು ಸಂಗ್ರಹವಾಗಲಿದೆಯೇ ಎನ್ನುವ ಮಾಹಿತಿಯನ್ನು ತೋರಿಸುತ್ತದೆ. ಬೆಂಗಳೂರಲ್ಲಿ ಅಲ್ಪ ಪ್ರಮಾಣದ ಮಳೆ ಬಂದರೂ ಪ್ರವಾಹ ಎದುರಾಗುವ ಈಜಿಪುರ, ಕೋರಮಂಗಲ ಹಾಗೂ ಮಾನ್ಯತಾ ಟೆಕ್‌ಪಾರ್ಕ್‌ನಂತಹ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿ ಇದರ ಮೂಲಕ ಸಿಗಲಿದೆ.
https://diagramchasing.fun/2024/blr-water-log#12.7/12.9776/77.5777/0/45
ಈ ರೀತಿ ಮ್ಯಾಪ್ ಅನ್ನು ಡಿಜಿಟಲ್ ಎಲಿವೇಶನ್ ಮಾದರಿಯನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. 30 ಮೀಟರ್ ಅಂತರದಲ್ಲಿ ಮಳೆ ನೀರಿನ ಸಂಗ್ರಹದ ಮಾಹಿತಿಯನ್ನು ನೀಡುತ್ತದೆ. ಇನ್ನೊಂದು ವಿಶೇಷವೆಂದರೆ ಬೆಂಗಳೂರಿನ ಭೌಗೋಳಿಕ ರಚನೆ. ಈ ಹಿಂದೆ ಮಳೆಯಾದಾಗ ಆಗಿದ್ದ ಅನಾಹುತಗಳ ಲೇಖನದ ಮಾಹಿತಿಯೂ ನಿಮಗೆ ಇದರಲ್ಲಿ ಸಿಗಲಿದೆ.












Click it and Unblock the Notifications