ಬೆಂಗಳೂರು: ಜೂನ್ ಮೊದಲ ವಾರ ಪೂರ್ತಿ ಮಳೆ ಸಂಭವ
ಬೆಂಗಳೂರು, ಜೂನ್ 1: ದಕ್ಷಿಣ ಒಳನಾಡಿಗೆ ಮುಂಗಾರು ಆಗಮನವಾಗುತ್ತಿದ್ದಂತೆ, ಕೇಂದ್ರಭಾಗದಂತಿರುವ ಬೆಂಗಳೂರಿನಲ್ಲಿ ಮೊದಲ ದಿನವೇ ಸಾಕಷ್ಟು ಮಳೆಯಾಗಿದೆ. ಆದರೆಗುರುವಾರಬಹುತೇಕ ಪ್ರದೇಶಗಳಲ್ಲಿ ಮಳೆ ಕಾಣೆಯಾಗಿದೆ. ಇನ್ನೂ ಜೂನ್ ಮೊದಲ ವಾರದಲ್ಲಿ ಮತ್ತೆ ಮಳೆ ಆರಂಭವಾಗಲಿದೆ.
ಪ್ರತಿ ದಿನ ಸಂಜೆ ಅಲ್ಲಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಬೆಂಗಳೂರಿನ ಅಲ್ಲಲ್ಲಿ ಮಳೆ ಆರಂಭವಾಗಿದೆ. ಇನ್ನು ಕೆಲವೆಡೆ ಗಾಳಿ ಬೀಸುತ್ತಿದ್ದು ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.ಪೂರ್ವ ಮುಂಗಾರು ಹಾಗೂ ಮುಂಗಾರು ಮಾರುತಗಳು ನಗರದಲ್ಲಿ ಅತಿ ಹೆಚ್ಚು ಮಳೆಯನ್ನು ಸುರಿಸಿದೆ. ಮೇ ಅಂತ್ಯದವರೆಗೆ ನಗರದ ಕೇಂದ್ರಭಾಗದಲ್ಲಿ 283 ಮಿ.ಮೀ ಮಳೆ ಸುರಿದಿದೆ.

ನಗರದ ಕೇಂದ್ರಭಾಗದಲ್ಲಿ 1957ರ ಮೇನಲ್ಲಿ 287.1ಮಿ.ಮೀ ಮಳೆಯಾಗಿತ್ತು. ಇದನ್ನು ಸಾರ್ವಕಾಲಿಕ ದಾಖಲೆ ಎಂದು ಹವಾಮಾನ ಇಲಾಖೆಯು ಪರಿಗಣಿಸಿದೆ. ಈಬಾರಿ ಮೇನಲ್ಲಿ 283 ಮಿ.ಮೀ ಮಳೆ ಬಂದಿದ್ದು, ಸಾರ್ವಕಾಲಿಕ ದಾಖಲೆಗೆ ಹತ್ತಿರದಲ್ಲೇ ಇದೆ. ಈ ಬಾರಿಯ ಬೇಸಿಗೆ ದಿನಗಳು ಮಳೆಯಿಂದಲೇ ಆರಂಭವಾಗಿ, ಮಳೆಯಿಂದಲೇ ಮುಕ್ತಾಯಗೊಂಡಿದೆ.












Click it and Unblock the Notifications