Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯುಗಾದಿ ಹಬ್ಬದ ದಿನದಿಂದ ಮಳೆಯಾಗುತ್ತಿದ್ದರೂ ಬೆಂಗಳೂರಿನಲ್ಲಿ ಹನಿ ಮಳೆಯಾಗಿರಲಿಲ್ಲ. ಬಿರು ಬೇಸಿಗೆಯಿಂದ ಕಂಗಾಲಾಗಿದ್ದ ಬೆಂಗಳೂರು ಜನ ಮಳೆ ಯಾವಾಗ ಬರುತ್ತಪ್ಪಾ ಎಂದು ಕಾಯುತ್ತಿದ್ದರು. ಕೊನೆಗೂ ಸುದೀರ್ಘ ಕಾಯುವಿಕೆ ನಂತರ ಬೆಂಗಳೂರಿಗೆ ಮಳೆ ಎಂಟ್ರಿ ಕೊಟ್ಟಿದೆ.
ಬೆಂಗಳೂರಿನ ಯಲಹಂಕ ಭಾಗದಲ್ಲಿ ಮಳೆ ಶುರುವಾಗಿದ್ದು ದಟ್ಟವಾದ ಮೋಡ ಆವರಿಸುತ್ತಿದೆ. ಶುಕ್ರವಾರ ರಾತ್ರಿ ವೇಳೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಬಾಣಾವರ ಪ್ರದೇಶದಲ್ಲಿ ಕೂಡ ಗುಡುಗು, ಮಿಂಚು ಶುರುವಾಗಿದ್ದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿತ್ತು. ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿ ಮಳೆಯಾಗಿತ್ತು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿತ್ತು.
Its Raining in Yelahanka pic.twitter.com/rNYlYoEDJ1
— anurag (@anurag1978) April 19, 2024
ಚಿಕ್ಕಬಾಣಾವರ ಪ್ರದೇಶದಲ್ಲಿ ಕೂಡ ಮಳೆ ಶುರುವಾಗಿದ್ದು, ರಾತ್ರಿ ವೇಳೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಆರ್ದ್ರತೆ ಹೆಚ್ಚಾಗಿದ್ದು ತೀವ್ರ ಸೆಖೆಯಿಂದ ಜನ ಕಂಗಾಲಾಗಿದ್ದಾರೆ, ಉತ್ತಮ ಮಳೆಯಾದರೆ ಸ್ವಲ್ಪ ಕೂಲ್ ಆಗಲಿದೆ ಎನ್ನುವ ನಿರೀಕ್ಷೆ ಇದೆ.
ಕೆಂಗೇರಿ ಭಾಗದಲ್ಲಿ ಕೂಡ ಭಾರಿ ಮಳೆಯಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ 9 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
Rumbling thunders, lightning & intermittent winds with showers currently here in Chikkabanawara (AGB Layout), #Bengaluru
— Karnataka Weather (@Bnglrweatherman) April 19, 2024
The sound of thunder & rain is music to ears ⛈️⚡ 🤩#BengaluruRains #BangaloreRains #KarnatakaRains #Bangalore https://t.co/4jxJhNlhxU pic.twitter.com/FEIbrUVXV9
ಶನಿವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಭಾನುವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಭಾನುವಾರ ಮಾತ್ರ ಮಳೆ ಮುನ್ಸೂಚನೆ ನೀಡಿದ್ದು, ಬಳಿಕ ಮಳೆ ಬ್ರೇಕ್ ನೀಡುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಹಲವು ಜಿಲ್ಲೆಗಳು ವಾಡಿಕೆಗಿಂತ ಹೆಚ್ಚು ಮಳೆಯನ್ನು ಪಡೆದಿರುವುದು, ಮುಂದಿನ ದಿನಗಳಲ್ಲಿ ಉತ್ತಮ ಮುಂಗಾರನ್ನು ನಿರೀಕ್ಷಿಸುವಂತೆ ಮಾಡಿದೆ.
ರಾಜ್ಯಾದ್ಯಂತ ವ್ಯಾಪಕ ಮಳೆ
ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಶುಕ್ರವಾರ ಕೂಡ ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನವೇ ಮಳೆ ಶುರುವಾಗಿದೆ. ಸಂಜೆ ವೇಳೆಗೆ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications