ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ
ಬೆಂಗಳೂರು, ಜುಲೈ 09 : ಟ್ಯಾಕ್ಸಿ ಚಾಲಕರ ಬೇಡಿಕೆಗೆ ಸ್ಪಂದಿಸಿರುವ ಸಾರಿಗೆ ಇಲಾಖೆ ಬೆಂಗಳೂರು ರೈಲ್ವೆ ನಿಲ್ದಾಣಗಳ ಬಳಿಯ ಪ್ರೀಪೇಯ್ಡ್ ಟ್ಯಾಕ್ಸಿದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ನೂತನ ದರಗಳು ಈಗಾಗಲೇ ಜಾರಿಗೆ ಬಂದಿವೆ.
ಬೆಂಗಳೂರು ಸೆಂಟ್ರಲ್ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಬಳಿಯ ಪ್ರೀಪೇಯ್ಡ್ ಟ್ಯಾಕ್ಸಿದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ನೂತನ ದರದ ಅನ್ವಯ 4 ಕಿ.ಮೀ.ಗಳ ವರೆಗೆ ಕನಿಷ್ಠ ಪ್ರಯಾಣದರ 65 ರೂ.ಗಳು. 2013ರಲ್ಲಿಯೇ ಪ್ರಯಾಣ ದರ ಹೆಚ್ಚಳ ಮಾಡುವಂತೆ ಟ್ಯಾಕ್ಸಿ ಚಾಲಕರು ಬೇಡಿಕೆ ಇಟ್ಟಿದ್ದರು. [ಬೆಂಗಳೂರಿನಲ್ಲಿ ಟ್ಯಾಕ್ಸಿ ಆಲ್ವೇಸ್ ಸೇವೆ ಆರಂಭ]

ಪ್ರಯಾಣ ದರಗಳು : ಸಾರಿಗೆ ಇಲಾಖೆ ಪ್ರಯಾಣದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ನೂತನ ದರಗಳು ಹೀಗಿವೆ. 4 ಕಿ.ಮೀ.ತನಕ 65 ರೂ., 4-6 ಕಿ.ಮೀ. 105 ರೂ., 6-7 120 ರೂ., 7-8 ಕಿ.ಮೀ. 135 ರೂ.ಗಳು, 8-9 155 ರೂ., 9-10 170 ರೂ., 10-11 190 ರೂ., 11-12 205 ರೂ.ಗಳು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
ದರ ಪಟ್ಟಿ - (ಕಿ.ಮೀ., ದರಗಳು)
* 12 ರಿಂದ 13 : 220 ರೂ.
* 13 ರಿಂದ 14 : 240 ರೂ.
* 14 ರಿಂದ 15 : 255 ರೂ.
* 15 ರಿಂದ 16 : 270 ರೂ.
* 16 ರಿಂದ 17 : 290 ರೂ.
* 17 ರಿಂದ 18 : 305 ರೂ.
* 18 ರಿಂದ 19 : 325 ರೂ.
* 19 ರಿಂದ 20 : 340 ರೂ.
* 20 ರಿಂದ 21 : 360 ರೂ.
* 21 ರಿಂದ 22 : 375 ರೂ.
* 22 ರಿಂದ 23 : 390 ರೂ.
* 23 ರಿಂದ 24 : 410 ರೂ.












Click it and Unblock the Notifications