Bengaluru Rent: ಮತ್ತೆ ಮನೆ ಬಾಡಿಗೆ-ಆಸ್ತಿ ದರ ಗಣನೀಯ ಏರಿಕೆ ಕಾರಣಗಳೇನು? ಅಂಕಿ-ಅಂಶಗಳ ಮಾಹಿತಿ,ವಿವರ

ಬೆಂಗಳೂರು, ಜನವರಿ 16: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಆಸ್ತಿ, ಮನೆಯ ಬಾಡಿಗೆಗಳು ಕ್ರಮೇಣ ಏರಿಕೆ ಆಗುತ್ತಲೇ ಇವೆ. ಕೊರೊನಾ ನಂತರದಿಂದ ಈವರೆಗೆ ಕೆಲವು ಬಾರಿ ಬಾಡಿಗೆ ಮನೆ ದರದಲ್ಲಿ ಹೆಚ್ಚಳವಾಗಿವೆ. ನಮ್ಮ ಮೆಟ್ರೋ ನೇರಳೆ ಮಾರ್ಗವು ಐಟಿ ಕಾರಿಡಾರ್‌ಗೆ ವಿಸ್ತರಣೆ ಮತ್ತು ಐಟಿ ಕಂಪನಿಗಳು ಹೈಬ್ರೀಡ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಹ ಮನೆಗಳ ಬಾಡಿಗೆ ದರದ ಮೇಲೆ ಪರಿಣಾಮ ಭೀರಿದೆ ಎನ್ನಲಾಗುತ್ತಿದೆ.

2023ರಲ್ಲಿ ಅಕ್ಟೋಬರ್‌ ತಿಂಗಳಿಂದ ನಮ್ಮ ಮೆಟ್ರೋದ ನೇರಳೆ ಮಾರ್ಗವು ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು. ಇದರ ಬೆನಲ್ಲೆ ಐಟಿ ಉದ್ಯೋಗಿಗಳು ಕಚೇರಿಗೆ ಹಿಂತಿರುಗಲಾರಂಭಿಸಿದರು. ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ಇದೀಗ ಪೂರ್ವ ಬೆಂಗಳೂರಿನ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಸುತ್ತಮುತ್ತಲಿನ ಆಸ್ತಿ ಬೆಲೆಗಳು ಮತ್ತು ಬಾಡಿಗೆಗಳನ್ನು ಏರಿಕೆ ಮಾಡಲಾಗಿದೆ.

Purple Line Complete Operation Has Made Price Hike of Property and Rental House

ಆಸ್ತಿ-ಮನೆ ಬಾಡಿಗೆ ದರ ಹೆಚ್ಚಳ

ವಿವಿಧೆಡೆ ಮನೆಗಳ ಬಾಡಿಗೆಗಳಲ್ಲಿ ಕನಿಷ್ಠ ಶೇಕಡಾ 20ರಷ್ಟು ಹೆಚ್ಚಳ ಮತ್ತು ಆರು ತಿಂಗಳಲ್ಲಿ ಆಸ್ತಿ ಬೆಲೆಗಳಲ್ಲಿ ಶೇಕಡಾ 30ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ವರದಿ ಆಗಿದೆ. ಇತ್ತ ಮನೆಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಪರಿಣಾಮವಾಗಿ ಬೆಲೆಗಳು ಸಹ ಹೆಚ್ಚಾಗಿದೆ. ಕೋವಿಡ್ ನಂತರ, ಆಸ್ತಿ ಬೆಲೆಗಳು ಕ್ರಮೇಣ ಹೆಚ್ಚಾಗುತ್ತಿವೆ. ಮೆಟ್ರೋ ಸಂಪರ್ಕವು ದೊಡ್ಡ ಉತ್ತೇಜನವನ್ನು ನೀಡಿತು.

ಸರ್ಜಾಪುರ ಮುಖ್ಯರಸ್ತೆಯಲ್ಲಿ ಆರು ತಿಂಗಳ ಹಿಂದೆಯಷ್ಟೇ ಆಸ್ತಿಗಳ ಬೆಲೆಯು ಚದರ ಅಡಿಗೆ 7,000 ರೂಪಾಯಿಯಷ್ಟಿತ್ತು. ಇದೀಗ ಅದರ ಬೆಲೆ 11,000 ರೂ.ನಷ್ಟಕ್ಕೆ ಏರಿಕೆ ಆಗಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ತಿಳಿಸಿದರು.

Purple Line Complete Operation Has Made Price Hike of Property and Rental House

ಫ್ಲಾಟ್‌ಗಳಿಗೂ ಬೇಡಿಕೆ ಏರಿಕೆ

ದೊಡ್ಡ ಡೆವಲಪರ್‌ಗಳ ಫ್ಲಾಟ್‌ಗಳು ಮತ್ತು ವಿಲ್ಲಾಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದೆಲ್ಲ ಕಾರಣದಿಂದ ಜನರು ಪ್ರಸಿದ್ಧ ಡೆವಲಪರ್‌ಗಳನ್ನು ನೋಡಿಕೊಂಡು ಅವರ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಡ್ರೀಮ್ಸ್ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ಲೋಕೇಶ್ ಮಾಚಪ್ಪ ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ನಿಲ್ದಾಣ ಸುತ್ತಮುತ್ತ ಸಮೀಪ ವಾಸಿಸುವ ಬಾಡಿಗೆದಾರರು ಬೇಡಿಕೆ ಹೆಚ್ಚಳ ಇರುವ ಕಾರಣ ಮನೆ ಬಾಡಿಗೆ ಹೆಚ್ಚು ಬಾಡಿಗೆ ಕೇಳುತ್ತಿದ್ದಾರೆ. ಮನೆ ಬಾಡಿಗೆ ಮಾಲೀಕರು ವಾರ್ಷಿಕವಾಗಿ ಶೇಕಡಾ 5ರಿಂದ 10ರಷ್ಟು ಬಾಡಿಗೆ ಹೆಚ್ಚಿಸುವುದು ಸಾಮಾನ್ಯವಾಗಿತ್ತು. ಆದರೆ ಈ ವರ್ಷ ದಿಢೀರನೇ ಶೇ 20ರಷ್ಟು ಬೇಡಿಕೆ ಇಡುತ್ತಿದ್ದಾರೆ ಎಂದು ಮೆಟ್ರೋ ನಿಲ್ದಾಣದ ಬಳಿ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಮೆಟ್ರೋ ನಿಲ್ದಾಣದ 2 ಕಿಲೋ ಮೀಟರ್ ವ್ಯಾಪ್ತಿಯ ಸುತ್ತಮುತ್ತ ಹೆಚ್ಚಿನ ಬಾಡಿಗೆ ನೀಡಲು ಜನರು ಸಿದ್ಧರಿದ್ದಾರೆ. ಹೀಗಾಗಿಯೇ ಮಾಲೀಕರು ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಿಂಗಯ್ಯನಪಾಳ್ಯ ಮನೆ ಮಾಲೀಕರೊಬ್ಬರು ಹೇಳಿದರು. ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಇರುವ ಮನೆಗಳ ಬಾಡಿಗೆಯನ್ನು ಮೆಟ್ರೋ ಲೈನ್‌ಗಳು ನಿರ್ಧರಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಅಂದರೆ ಮೆಟ್ರೋ ಲೈನ್/ನಿಲ್ದಾಣ ಅಕ್ಕಪಕ್ಕದ ಮನೆಗಳಿಗೆ ಅತ್ಯಧಿಕ ಬಾಡಿಗೆ ಇವೆ.

ಕೈಗೆಟುಕಲಾಗದ ಪಿಜಿಗಳು

ಕೇವಲ ಮನೆ ಬಾಡಿಗೆ ಮಾತ್ರವಲ್ಲದೇ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳು ಸಹ ತಿಂಗಳ ಬಾಡಿಕಗೆ ಹೆಚ್ಚಾಗಿವೆ. ಡಬಲ್ ಕಾಟ್ ಕೊಠಡಿ ಹಂಚಿಕೆ, ತ್ರಿ ಶೇರಿಂಗ್ ಕೊಠಡಿಗಳಾಗಿ ಪರಿವರ್ತಿಸಿದರೂ ಸಹಿತ ಬಾಡಿಗೆ ಮಾತ್ರ ಕಡಿಮೆ ಇಲ್ಲದಾಗಿದೆ. ಒಬ್ಬರಿಗೆ 6-7 ಸಾವಿರವರೆಗೆ ಇದೆ.

ಈ ಪಿಜಿಯಲ್ಲಿ ಇರಲು ಆರಂಭಿಸಿ ಎರಡು ವರ್ಷಗಳಾಗಿವೆ. ಈ ವರ್ಷ ಮಾಲೀಕರು ಬಾಡಿಗೆ ದುಪ್ಪಟ್ಟು ಮಾಡಿದ್ದಾರೆ ಪಿಜಿಯಲ್ಲಿ ವಾಸವಾಗಿರುವ ಐಟಿ ಉದ್ಯೋಗಿಯೊಬ್ಬರು ಮಾಹಿತಿ ನೀಡಿದರು.

ಅಗತ್ಯ ವಸ್ತುಗಳ ದರ ಏರಿಕೆ ಮಧ್ಯೆ ಬೆಂಗಳೂರಿನಲ್ಲಿ ವಾಸವಿರುವ ಉದ್ಯೋಗಿಗಳಿಗೆ ಇದೀಗ ಬಾಡಿಗೆ ಮನೆ ದರ ಏರಿಕೆಯು ಆರ್ಥಿಕ ತಲೆನೋವಾಗಿ ಪರಿಣಿಸುತ್ತಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+