ಎಲೆಕ್ಟ್ರಾನಿಕ್ ಗೋಡನ್ಗೆ ಕನ್ನ ಹಾಕಿದ್ದ ಪಂಜಾಬ್ ಮೂಲದ ಕಳ್ಳರು ಅಂದರ್

ಬೆಂಗಳೂರು, ಫೆ. 1: ಎಲೆಕ್ಟ್ರಾನಿಕ್ ಗೂಡ್ಸ್ ಗೋದಾಮಿಗೆ ಕನ್ನ ಹಾಕಿ ಸಿಸಿಟಿವಿ ಡಿವಿಆರ್ ಸಮೇತ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಪಂಜಾಬ್ ಮೂಲದ ಮೂವರು ಖದೀಮರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನ ಮಖನ್ ಸಿಂಗ್, ಲಕ್ವೀರ್ ಸಿಂಗ್ ಮತ್ತು ಚಮನ್ ಲಾಲ್ ಬಂಧಿತ ಅರೋಪಿಗಳು. ಇವರಿಂದ 4. 5 ಲಕ್ಷ ರೂ. ಮೌಲ್ಯದ 22 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕೈಗೆ ಸಿಗಬಾರದು ಎಂದು ಕದ್ದಿದ್ದ ಸಿಸಿಟಿವಿಯ ಡಿವಿಅರ್ ಕೂಡ ಪತ್ತೆಯಾಗಿದೆ.

ಅಡಕಮಾರನಹಳ್ಳಿಯಲ್ಲಿದ್ದ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉಪಕರಣಕ್ಕೆ ಸಂಬಧಿಸಿದಂತೆ ಗೋಡನ್ ಗೆ ಪ್ರೋ ಕನೆಕ್ಟ್ ಸಬ್ಲೇ ಚೈನ್ ಸಲ್ಯೂಷನ್ ಪ್ರೆ. ಲಿ. ವೇರ್ ಹೌಸ್ ಮೇಲ್ಚಾವಣಿಯಿಂದ ಒಗೆ ನುಗ್ಗಿದ್ದಾರೆ. ಒಪ್ಪೋ ಕಂಪನಿಗೆ ಸೇರಿದ ಮೊಬೈಲ್ ಕದ್ದಿದ್ದಾರೆ. ಆ ಬಳಿಕ ಪೊಲೀಸರಿಗೆ ಸಿಗದಂತೆ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದರು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸಿಸಿಟಿವಿ ಆಧರಿಸಿ ಮಾದನಾಯಕನಹಳ್ಳಿ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕದ್ದ ಮಾಲು ವಶಪಡಿಸಿಕೊಂಡಿದ್ದಾರೆ.

Bengaluru: Punjab Based Thieves Stolen Electronic Goods From Godown Held, Drug Peddler Arrested

ಕುಡಿದ ಅಮಲಿನಲ್ಲಿ ಕೊಲೆ:

ಕುಡಿದ ಅಮಲಿನಲ್ಲಿ ಒಂದೇ ಮನೆಯಲ್ಲಿದ್ದ ಸ್ನೇಹಿತರ ನಡುವೆ ನಡೆದ ಜಗಳದಲ್ಲಿ ಓರ್ವ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಮಲ್ಲಿಮಾಕಪುರ ಗ್ರಾಮದ ಶಿವಕುಮಾರ್ ಕೊಲೆಯಾದ ವ್ಯಕ್ತಿ. ವೆಸ್ಟ್ ಇಂಡೀಸ್ ಮೂಲದ ಬಾಬಿ ಕೊಲೆ ಮಾಡಿದ ಅರೋಪಿ.

ಗಾರೆಕೆಲಸ ಮಾಡುತ್ತಿದ್ದ ಶಿವಕುಮಾರ್ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಅದೇ ಮನೆಯಲ್ಲಿ ವೆಸ್ಟ್ ಇಂಡೀಸ್ ಮೂಲದ ಬಾಬಿ ಕೂಡ ವಾಸವಾಗಿದ್ದ. ರಾತ್ರಿ ಕುಡಿದ ಅಮಲಿನಲ್ಲಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು ಬಾಬಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್ಪಿ ವಂಶಿಕೃಷ್ಣ ಸಹ ಭೇಟಿ ನೀಡಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತದೆ.

Bengaluru: Punjab Based Thieves Stolen Electronic Goods From Godown Held, Drug Peddler Arrested

ವಿದೇಶಿ ಪೋಸ್ಟ್ ಆಫೀಸ್ ಪಾರ್ಸಲ್ ನಲ್ಲಿತ್ತು ಕೋಟಿ ಮೌಲ್ಯದ ಡ್ರಗ್:

ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಪಾರ್ಸಲ್ ನಲ್ಲಿ 1.89 ಕೋಟಿ ರೂ.ಮೌಲ್ಯದ ಡ್ರಗ್‌ನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಡ್ರಗ್ ಸ್ಮಗ್ಲರ್ ನನ್ನು ಚೇಸ್ ಮಾಡಿ ಬಂಧಿಸಿದ್ದಾರೆ.

Bengaluru: Punjab Based Thieves Stolen Electronic Goods From Godown Held, Drug Peddler Arrested

ವಿದೇಶದಿಂದ ಬಂದಿದ್ದ ಪಾರ್ಸಲ್ ಪಡೆಯಲು ಬಂದಿದ್ದ ನೈಜೀರಿಯಾ ಮೂಲದ ವ್ಯಕ್ತಿಯ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡಿದ್ದಾರೆ. ಪಾರ್ಸಲ್ ಪಡೆಯಲು ಬಂದಿದ್ದ ನೈಜೀರಿಯಾ ಪ್ರಜೆ ಎಸ್ಕೇಪ್ ಆಗಲು ಯತ್ನಿಸಿದ್ದು, ಕಸ್ಟಮ್ಸ್ ಅಧಿಕಾರಿಗಳು ಚೇಸ್ ಮಾಡಿ ಬಂಧಿಸಿದ್ದಾರೆ. ಈ ವೇಳೆ ಸುಮಾರು 1.89 ಕೋಟಿ ರೂ. ಮೌಲ್ಯದ 2.59 ಕೆ.ಜಿ ಎಂಡಿಎಂಎ ಎಕ್ಸೆಟೆಸಿ ಫಿಲ್ ಪತ್ತೆಯಾಗಿದ್ದು, ಡ್ರಗ್ ಸಮೇತ ಅರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+