Bengaluru Property: ಎಲ್ಲಾ ಮೂಲಭೂತ ಸೌಕರ್ಯಗಳಿದ್ದರೂ ಬೆಂಗಳೂರಿನ ಈ ಭಾಗದಲ್ಲಿ ಮನೆ ಬಾಡಿಗೆ, ಆಸ್ತಿ ದರ ತುಂಬಾ ಕಡಿಮೆ

Bengaluru Real Estate: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏನೂ ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿಯೇ ಕಡಿಮೆ ದರಕ್ಕೆ ಬಾಡಿಗೆ ಮನೆಗಳು ಸಿಗೋದೇ ಅಪರೂಪ. ಅಂತಹದ್ದರಲ್ಲಿ ನಗರದ ಈ ಭಾಗದಲ್ಲಿ ಎಲ್ಲಾ ರೀತಿಯ ಮೂಲಸೌಲಭ್ಯಗಳಿದ್ದರೂ ಕೂಡ ನಿವೇಶನಗಳ ದರ, ಮನೆ ಬಾಡಿಗೆ ಮಾತ್ರ ಕಡಿಮೆ. ಆದ್ದರಿಂದ ಇದೀಗ ಇಲ್ಲಿ ಉದ್ಯಮಿಗಳು ಕೋಟಿ ಕೋಟಿ ಹಣ ಸುರಿದು ಜಾಗ ಖರೀದಿಸಲು ಮುಂದಾಗಿದ್ದಾರೆ.

ಬೆಂಗಳೂರು ರಿಯಲ್‌ ಎಸ್ಟೇಟ್‌ ಅಡ್ಡೆಯಾಗಿದೆ. ಇಲ್ಲಿ ಎಲ್ಲಾ ಮೂಲಸೌಕರ್ಯಗಳಿರುವ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಕ್ಕರೆ ಸಾಕು ಹೂಡಿಕೆದಾರರು ಹೂಡಿಕೆ ಮಾಡಲು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಹಾಗೆಯೇ ಇದೀಗ ಉತ್ತಮ ಮೂಲಸೌಕರ್ಯಗಳನ್ನು ಒಳಗೊಂಡಿರುವ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕಂಪನಿಯೊಂದು ಭಾರೀ ಮೊತ್ತದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

Property Price and House Rent are Very Low in Bengaluru s This Area Know detail

ಬೆಂಗಳೂರು ಮೂಲದ ಪುರವಂಕರ ಲಿಮಿಟೆಡ್ ಕಂಪನಿಯು ಕನಕಪುರ ರಸ್ತೆಯ ವಾಜರಹಳ್ಳಿಯಲ್ಲಿ 3.63 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇದರ ಒಟ್ಟು ಅಭಿವೃದ್ಧಿ ಮೌಲ್ಯ ₹700 ಕೋಟಿ ಎಂದು ಕಂಪನಿ ಗುರುವಾರ (ಜನವರಿ 9) ತಿಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಸ್ವಾಧೀನಪಡಿಸಿಕೊಂಡಿರುವ ಜಾಗವು ಕನಕಪುರ ರಸ್ತೆಯಲ್ಲಿ ಒಂದು ಪ್ರಮುಖ ಸ್ಥಳದಲ್ಲಿದೆ. ಇದು ನಗರದ ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುವ ತಡೆರಹಿತ ರಸ್ತೆಯಾಗಿದೆ. ಇದು ಜೆಪಿ ನಗರದ ಬಳಿಯಿರುವ ಹಸಿರು ಮಾರ್ಗದ ತಲಘಟ್ಟಪುರ ಮೆಟ್ರೋ ನಿಲ್ದಾಣದಿಂದ ಕಿಲೋ ಮೀಟರ್ ದೂರದಲ್ಲಿದೆ. ಈ ಮೂಲಕ ಮೆಟ್ರೋ ಸಂಪರ್ಕವನ್ನು ಹೊಂದಿದೆ.

ಈ ಜಾಗಕ್ಕೆ ಭಾರೀ ಬೇಡಿಕೆಯಿದ್ದು, ಇದು ಅತ್ಯುತ್ತಮ ಸಾರಿಗೆ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೊಂದಿದೆ. ಐಷಾರಾಮಿ ವಸತಿಗಳ ನಿರ್ಮಾಣಕ್ಕೆ ಹೇಳಿ ಮಾಡಿಸಿದ ಜಾಗ ಇದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ನಮ್ಮ ಗಮನವನ್ನು ವ್ಯಾಪಾರ ಅಭಿವೃದ್ಧಿಯತ್ತ ಹರಿಸಿದ್ದೇವೆ. ಅನುಕೂಲತೆಗೆ ತಕ್ಕಂತೆ ಬೇಡಿಕೆಗಳನ್ನು ಪೂರೈಸುವಂತೆ ಇಲ್ಲಿನ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪುರವಂಕರ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಅವರು ಹೇಳಿದರು.

2026ರ ವೇಳೆಗೆ ಒಟ್ಟು 45 ಮಿಲಿಯನ್ ಚದರ ಅಡಿಗಳಷ್ಟು ಭೂಸ್ವಾಧೀನ ಮಾಡಿಕೊಳ್ಳುವ ಮೂಲಕ ಪುರವಂಕರ ಲಿಮಿಟೆಡ್ ಕಂಪನಿಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಭಿಷೇಕ್ ಕಪೂರ್ ಈ ಹಿಂದೆ ತಿಳಿಸಿದ್ದರು. ಅಲ್ಲದೆ, ಮುಂದಿನ ದಿನಗಳಲ್ಲಿ ಕಂಪನಿಯು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ದೆಹಲಿಯವರೆಗೂ ನಮ್ಮ ಯೋಜನೆಗಳನ್ನು ವಿಸ್ತರಿಸಲಿದ್ದೇವೆ ಎಂದು ಹೇಳಿದರು.

ಕನಕಪುರ ರಸ್ತೆಯುದ್ದಕ್ಕೂ ರಿಯಲ್ ಎಸ್ಟೇಟ್ ಯೋಜನೆಗಳು: ದಕ್ಷಿಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಾರಿಡಾರ್‌ನಿಂದ ಕನಕಪುರ ರಸ್ತೆಗೆ ಪ್ರಯಾಣ ಸಮಯ ಸುಮಾರು 30 ನಿಮಿಷಗಳು ಆಗುತ್ತದೆ. ಹೀಗೆ ಕನಕಪುರ ರಸ್ತೆಯು ಪ್ರಮುಖ ಪ್ರದೇಶಗಳು ಹಾಗೂ ನಗರದ ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಈ ರಸ್ತೆಯಲ್ಲಿ ದೇಶದ ದೈತ್ಯ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಕಚೇರಿಗಳು ಕೂಡ ಇವೆ.

ಕನಕಪುರ ರಸ್ತೆಯು ಹೂಡಿಕೆದಾರರನ್ನು ಆಕರ್ಷಿಸಲು ಪ್ರಮುಖ ಕಾರಣವೇ ಬೆಂಗಳೂರಿನ ಬಹುತೇಕ ಪ್ರದೇಶಗಳಿಗಿಂತ ಇಲ್ಲಿ ವೆಚ್ಚ ಕಡಿಮೆ. ಅಲ್ಲದೆ, ಹೆಚ್ಚು ಮೂಲಸೌಕರ್ಯಗಳನ್ನು ಹೊಂದಿರುವ ಹಿನ್ನೆಲೆ ಈ ಪ್ರದೇಶಗಲ್ಲಿ ಉದ್ಯಮಿಗಳಲ್ಲದೆ, ಹೆಚ್ಚೆಚ್ಚು ಜನರು ಮನೆ, ಆಸ್ತಿ ಖರೀದಿಗೆ ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕನಕಪುರ ರಸ್ತೆಯಲ್ಲಿನ ರಿಯಲ್ ಎಸ್ಟೇಟ್ ದರಗಳು ನಗರದ ಇತರ ಭಾಗಗಳಿಗಿಂತ ಅಗ್ಗವಾಗಿದ್ದು, ಹೂಡಿಕೆಗೆ ಹೇಳಿ ಮಾಡಿಸಿದ ಜಾಗವಾಗಿದೆ. ಈ ಪ್ರದೇಶದಲ್ಲಿ ತಿಂಗಳ ಮನೆ ಬಾಡಿಗೆ ದರ ₹25,000ರಿಂದ ₹30,000-35,000 ವರೆಗೆ ಇದೆ. ಆದರೆ ಬೇರೆ ಭಾಗಗಳಲ್ಲಿ ಬಾಡಿಗೆ ದರ ಇದಕ್ಕಿಂತ ದುಪ್ಪಟ್ಟಾಗಿದೆ. ಆದ್ದರಿಂದ ಹೆಚ್ಚಿನ ಜನ ಈ ಭಾಗದಲ್ಲಿ ಮನೆ ಖರೀದಿಗೆ ಮುಂದಾಗುತ್ತಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+