ಜಯನಗರದ ಪ್ರೊಜೆಕ್ಟ್ ಈವ್ ನಲ್ಲಿ ಡೆಕೋಪೇಜ್ ಕಾರ್ಯಾಗಾರ

ಬೆಂಗಳೂರು, ಜೂನ್ 08: ಪ್ರೊಜೆಕ್ಟ್ ಈವ್ ತನ್ನ ದಿ ಶಿ ಸೆಶನ್ಸ್ ಸರಣಿಯಲ್ಲಿ ಡೆಕೋಪೇಜ್ ಕಾರ್ಯಾಗಾರವನ್ನು ಶನಿವಾರದಂದು ಜಯನಗರದ ತನ್ನ ಮಳಿಗೆಯಲ್ಲಿ ಆಯೋಜಿಸಲಾಗಿದೆ.

ಜೂನ್ 09, 2018ರ ಶನಿವಾರದಂದು ಜಯನಗರದ ಪ್ರೊಜೆಕ್ಟ್ ಈವ್ ನಲ್ಲಿ ಡೆಕೋಪೇಜ್ ಕಾರ್ಯಾಗಾರ ನಡೆಯಲಿದೆ.

ಪೇಪರ್ ಅನ್ನು ಕತ್ತರಿಸಿ ಅಂಟಿಸುವ ಸರಳ ಕಲೆಯ ಮೂಲಕ ಅವುಗಳನ್ನು ಸುಂದರ ಉತ್ಪನ್ನವಾಗಿಸುವುದನ್ನು ಕಲಿಯಿರಿ.

ಕಲಾವಿದೆ ಮತ್ತು ಡೆಕೋಪೇಜ್ ತಜ್ಞೆ ನರ್ಗಿಸ್ ಖಾನ್ ಅವರೊಂದಿಗೆ ನೀವೂ ಭಾಗಿಯಾಗಿ, ನಿಮ್ಮ ಮನೆಯಲ್ಲಿ ನಿಮ್ಮ ಆಯ್ಕೆಯ ವಿನ್ಯಾಸವನ್ನು ಮಾಡಿಕೊಳ್ಳುವ ಬಗ್ಗೆ ಅವರು ವೈಯಕ್ತಿಕವಾಗಿ ಕಲಿಸಿಕೊಡಲಿದ್ದಾರೆ.

Project Eve The She Sessions: Decoupage Workshop at its Jayanagar

ಡೆಕೋಪೇಜ್ ಕ್ರಾಫ್ಟ್ ಕಲಿಯಲು ಆಸಕ್ತಿಯುಳ್ಳವರು ಪ್ರೊಜೆಕ್ಟ್ ಈವ್ ಗೆ ಭೇಟಿ ನೀಡಿ!

ದಿನಾಂಕ: ಶನಿವಾರ, 09ನೇ ಜೂನ್, 2018

ಸಮಯ: ಬೆಳಗ್ಗೆ 11

ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

ಪ್ರಾಜೆಕ್ಟ್ ಈವ್ : ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ. ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+