ಜಯನಗರದಲ್ಲಿ ಬಾಟಲ್ ಅಲಂಕಾರದ ಉಚಿತ ವರ್ಕ್‌ಶಾಪ್

ಬೆಂಗಳೂರು, ಮಾರ್ಚ್ 28: ಪ್ರಾಜೆಕ್ಟ್ ಈವ್ ಅವರು ವಿಶೇಷವಾಗಿ ಶೀ ಸೆಷನ್ಸ್: ಬಾಟಲ್ ಅಲಂಕಾರದ ವರ್ಕ್‌ಶಾಪ್ ಅನ್ನು ಜಯನಗರದ ಔಟ್ಲೆಟ್‌ನಲ್ಲಿ ಶುಕ್ರವಾರ, ಮಾರ್ಚ್ 29, 2019 ರಂದು ಆಯೋಜಿಸಿದ್ದಾರೆ

ಬೆಂಗಳೂರಿಗರೆ..! ತಜ್ಞರ ಮೂಲಕ ವಿಶೇಷ ಬಾಟಲ್ ಅಲಂಕಾರ ಕಲೆ ಕಾರ್ಯಾಗಾರದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹೊಸ ಕಲೆಯನ್ನು ಕಲಿತುಕೊಳ್ಳಿ.

ಮನೆಯ ಅಲಂಕಾರವನ್ನು ಹೆಚ್ಚು ಮಾಡಲು ಗ್ಲಾಸ್ ಬಾಟಲ್‌ಗಳನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ, ನಿಮ್ಮದೇ ಕೈನಿಂದ ರಚಿತವಾಗುವ ಬಾಟಲ್ ಅಲಂಕಾರವನ್ನು ಎಲ್ಲರಿಗೂ ತೋರಿಸಿ. ನಿಮಗೂ ಸುವರ್ಣ ಅವಕಾಶ ತಜ್ಞರಿಂದ ಕಲೆಯ ಬಗ್ಗೆ ಅರಿತುಕೊಳ್ಳಿ,

Project Eve : She Sessions: Bottle Decor workshop at its Jayanagar

ನಿಮ್ಮದೆ ಕೈಚಳಕದಿಂದ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಿ, ಮನೆಗೆ ಬರುವ ಅಥಿತಿಗಳಿಗೆ ತೋರಿಸಿ ಸಂತಸಪಡಿ.

ನಿಮ್ಮ ಸ್ವಂತ ಸುಂದರವಾದ ಬಾಟಲಿಗಳನ್ನು ರಚಿಸಲು ಉತ್ಸುಕರಾಗಿದ್ದೀರಾ !!! ಪ್ರಾಜೆಕ್ಟ್ ಈವ್ ಗೆ ಭೇಟಿ ನೀಡಿ.ಪ್ರವೇಶ ಶುಲ್ಕ ಇಲ್ಲ.......ಸೀಮಿತ ಸಾಮಥ್ರ್ಯದ ಕಾರ್ಯಕ್ರಮ......ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.

ದಿನಾಂಕ: ಶುಕ್ರವಾರ, ಮಾರ್ಚ್ 29th, 2019
ಸಮಯ: ಸಂಜೆ 3
ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

''ಪ್ರಾಜೆಕ್ಟ್ ಈವ್ ಬಗ್ಗೆ": ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಮಹಿಳೆಯರು ತಮ್ಮನ್ನು ತಾವು ಸಂಭ್ರಮಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ. ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು!

ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್‍ಪ್ರೆಸ್ ಚೆಕ್‍ಔಟ್‍ನ ಸೌಲಭ್ಯಗಳೂ ಇಲ್ಲಿ ಲಭ್ಯ! ಇವೆಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ, ಮಾನಿನಿಯರ ಕಣ್ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಇವುಗಳ ಜೊತೆಗೆ ಲೋಕಾಭಿರಾಮವಾದ ಮಾತುಕತೆಗಳನ್ನು ನಡೆಸಲು ಸೈಡ್ ಟೇಬಲ್‍ಗಳು, ಆರಾಮವಾಗಿ ಕೂರಲು ನೆರವಾಗುವಂಥ ಆಸನಗಳು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸರಿಯಾಗಿ ಬೆಳಕು ಸೂಸುವಂಥ ಬಗೆಬಗೆಯ ವಿದ್ಯುದ್ದೀಪಗಳು ಕೂಡ ಇಲ್ಲಿವೆ. ಪ್ರಾಜೆಕ್ಟ್ ಈವ್‍ನ ಸ್ವಂತ ಬ್ರ್ಯಾಂಡ್‍ಗಳ ಜೊತೆಗೆ ಈ ಮಳಿಗೆಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಜಗತ್ತಿನ ಕಣ್ಣು ಕೋರೈಸುವ ಉಡುಪುಗಳು ಇಲ್ಲಿ ಸದಾ ಸಿಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+