• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಶಂಕರ್ ಗೌಡ ಬಂಧನ

|

ಬೆಂಗಳೂರು, ಮಾರ್ಚ್ 23: ಗೋವಿಂದಪುರ ಪಿಎಸ್ ಡ್ರಗ್ಸ್ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಶಂಕರ್ ಗೌಡ ಅವರನ್ನು ಬಂಧಿಸಲಾಗಿದೆ.

ಡ್ರಗ್ಸ್ ಪ್ರಕರಣದ ತನಿಖೆಯಲ್ಲಿನ ಸಂಶೋಧನೆಗಳ ಆಧಾರದ ಮೇಲೆ ನಿರ್ಮಾಪಕ ಶಂಕರ್ ಗೌಡ ಅವರನ್ನು ಬಂಧಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 25, 27ಎ, 29ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಪೊಲೀಸರು ಶಂಕರ್ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಕಾರ್ಯ ಮುಂದುವರೆದಿದೆ. ಕೆಂಪೇಗೌಡ ಚಿತ್ರದ ನಿರ್ಮಾಪಕರಾಗಿರುವ ಶಂಕರ್ ಗೌಡ ನಿವಾಸ ಹಾಗೂ ಕಚೇರಿ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಖಾಸಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

   ಡ್ರಗ್ಸ್‌ ಕೇಸ್‌, ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ ಶಂಕರ್‌ ಗೌಡ ಅರೆಸ್ಟ್ | Oneindia Kannada‌

   ಈ ಕೇಸ್‌ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರ ಸೂಚನೆ ಹಿನ್ನೆಲೆ ಇನ್ಸ್ ಪೆಕ್ಟರ್ ಪ್ರಕಾಶ್, ಎಸಿಪಿ ಸಕ್ರಿ ಅವರ ಮುಂದೆ ಶಂಕರ್ ಗೌಡ ವಿಚಾರಣೆ ಎದುರಿಸಿದ್ದರು.

   English summary
   Film Producer Shankar Gowda has been arrested in connection with the ongoing investigation into the Govindpura PS Drugs case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X