ಪೋಷಕರೇ ಶಾಲೆಗೆ ಹೆಚ್ಚು ಶುಲ್ಕ ನೀಡಲು ರೆಡಿಯಾಗಿ

ಬೆಂಗಳೂರು, ಆ.1: ವಿಬ್‌ಗಯಾರ್‌ ಪ್ರಕರಣದ ಬಳಿಕ ಗೃಹ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಖಾಸಗಿ ಶಾಲೆಗಳು ಹಕ್ಕೊತ್ತಾಯ ಮಂಡಿಸಿವೆ.

ಮಾರತ್ ಹಳ್ಳಿ ಸಮೀಪದ ವಿಬ್‌ಗಯಾರ್‌ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಗಳನ್ನು ಒಂದು ತಿಂಗಳಲ್ಲಿ ಜಾರಿಗೊಳಿಸುವುದು ಕಷ್ಟದ ಕೆಲಸ ಎಂದು ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ.[ಶಾಲೆಗಳಿಗೆ 'ಖಡಕ್' ಮಾರ್ಗ ಸೂಚಿ]

school rape

ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಜಿಪಿಆರ್‌ಎಸ್‌ ಅಳವಡಿಸಬೇಕು ಎಂದು ಮಾರ್ಗ‌ಸೂಚಿಯಲ್ಲಿ ಸೂಚಿಸಲಾಗಿದೆ. ಇವುಗಳನ್ನು ಅಳವಡಿಸಲು ಪ್ರತಿ ವಾಹನಕ್ಕೆ 20 ಸಾವಿರ ರೂ. ಖರ್ಚಾ‌ಗುತ್ತದೆ. ಹೆಚ್ಚುವರಿ ನಿರ್ಗಮನ ದ್ವಾರ ಅಳವಡಿಸಲು 20 ಸಾವಿರ ರೂ. ಅಗತ್ಯ ಇದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇವುಗಳನ್ನು ಅಳವಡಿಸಲು ಸಾಧ್ಯವಿಲ್ಲ. ಪೋಷಕರು ಶೇ 50ರಷ್ಟು ಮೊತ್ತವನ್ನು ಭರಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಲ್‌.ಆರ್‌.ಶಿವರಾಮೇಗೌಡ ಹೇಳಿದ್ದಾರೆ.

ವಿಬ್‌‌ಗಯಾರ್‌ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಎಲ್ಲಾ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದು ಸರಿಯಲ್ಲ. ಶಾಲೆಯ ಮುಖ್ಯದ್ವಾರದಲ್ಲಿ, ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬಹುದು. ಆದರೆ ಪ್ರತಿಯೊಂದು ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವುದು ಕಷ್ಟ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅಭಿಪ್ರಾಯ ಪಟ್ಟಿದ್ದಾರೆ.[ಸರ್ಕಾರದ ಮಾರ್ಗಸೂಚಿಗಳಿಗೆ ಖಾಸಗಿ ಶಾಲೆಗಳ ಸಡ್ಡು]

ಎಲ್ಲಾ ಶಾಲೆಗಳ ಆರ್ಥಿ‌ಕ ಸ್ಥಿತಿ ಉತ್ತಮವಾಗಿಲ್ಲ. ಒಂದು ವೇಳೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲೇಬೇಕಾದರೆ ಹೆಚ್ಚಿನ ಶುಲ್ಕವನ್ನು ಭರಿಸುವವರು ಯಾರು? ಬೇರೆ ಉಪಾಯವಿಲ್ಲದೇ ಅನಿವಾರ್ಯವಾಗಿ ಇದನ್ನು ಪೋಷಕರಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಹೊಸ ಮಾರ್ಗಸೂಚಿಗಳನ್ನು ಅಳವಡಿಸಲು ಆ.31ರವರೆಗೆ ಗಡುವು ನೀಡಲಾಗಿದೆ. ಈ ಸಮಯದೊಳಗೆ ಎಲ್ಲಾ ಮಾರ್ಗಸೂಚಿಗಳನ್ನು ಅಳವಡಿಸುವುದು ಕಷ್ಟ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಗಳ ಒಕ್ಕೂಟ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+