ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಗಳಿಗೆ ಎಂಎನ್ ರೆಡ್ಡಿರಿಂದ 'ಖಡಕ್' ಮಾರ್ಗ ಸೂಚಿ

By Mahesh
|
Google Oneindia Kannada News

ಬೆಂಗಳೂರು, ಜು.27: ಮಾರತ್ ಹಳ್ಳಿ ಸಮೀಪದ ವಿಬ್ ಗಯಾರ್ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಹೊಸ ಮಾರ್ಗಸೂಚಿಗಳನ್ನು ಅಳವಡಿಸಲು ಆ.31ರ ಗಡುವು ನೀಡಲಾಗಿದೆ ಎಂದು ನೂತನ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಹೇಳಿದ್ದಾರೆ.

‘ಕಮಿಷನರೇಟ್‌ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಪ್ರಿ-ನರ್ಸರಿಯಿಂದ ಪ್ರೌಢ ಶಾಲೆ ಹಂತದವರೆಗೆ ಆ.31ರೊಳಗೆ ಕಡ್ಡಾಯವಾಗಿ ಸುರಕ್ಷತಾ ಮಾರ್ಗ­ಸೂಚಿ ಅಳವಡಿಸಿಕೊಳ್ಳಬೇಕು. ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ' ಎಂದು ಹೇಳಿದರು.

'ನಿಗದಿತ ಗಡುವಿನೊಳಗೆ ಮಾರ್ಗಸೂಚಿ ಅಳವಡಿಸಿಕೊಳ್ಳದ ಶಾಲಾ ಆಡಳಿತ ಮಂಡಳಿ ವಿರುದ್ಧ ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದ (ಐಪಿಸಿ-188) ಆರೋಪದ ಮೇಲೆ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಲಾಗುತ್ತದೆ' ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.­ರೆಡ್ಡಿ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾ­ಗದ ಹೆಚ್ಚುವರಿ ಪೊಲೀಸ್‌ ಕಮಿ­ಷನರ್‌ ಅಲೋಕ್‌ಕುಮಾರ್‌, ಜಂಟಿ ಪೊಲೀಸ್‌ ಕಮಿಷನರ್‌ ಕೆ.ವಿ.­ಶರತ್‌ಚಂದ್ರ, ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್‌.­ರವಿಕಾಂತೇ­ಗೌಡ ಪತ್ರಿಕಾ­ಗೋಷ್ಠಿ­ಯಲ್ಲಿ ಇದ್ದರು.

ವಿಬ್ ಗಯಾರ್ ಶಾಲೆಗೆ ಗಡುವು: ಶಾಲೆಯಲ್ಲಿ ಮಾರ್ಗ­ಸೂಚಿ ಅಳವಡಿಕೆಗೆ ಆ.14ರ ಗಡುವು ನೀಡಲಾಗಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 2, ಮಧ್ಯಾಹ್ನ 2ರಿಂದ ರಾತ್ರಿ 8 ಮತ್ತು ರಾತ್ರಿ 8ರ ನಂತರ, ಹೀಗೆ ಮೂರು ಪಾಳಿಗಳಲ್ಲಿ 66 ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿ­ಕೊಳ್ಳ­ಬೇಕು. ಅವರಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯೂ ಇರಬೇಕು.

ಶಾಲೆಯ ಪ್ರವೇಶ ದ್ವಾರದಲ್ಲಿ 10, ಪ್ರತಿ ಅಂತಸ್ತಿಗೆ ಇಬ್ಬರಂತೆ ನಾಲ್ಕು ಅಂತಸ್ತಿಗೆ ಎಂಟು ಮಂದಿ ಮತ್ತು 10 ಮಂದಿ ಮಹಿಳಾ ಭದ್ರತಾ ಸಿಬ್ಬಂದಿ ಕ್ರಮವಾಗಿ ಮೊದಲ ಎರಡು ಪಾಳಿಗಳಲ್ಲಿ ಕೆಲಸ ನಿರ್ವ­ಹಿಸಬೇಕು. ರಾತ್ರಿ ಪಾಳಿಯಲ್ಲಿ 10 ಮಂದಿ ಭದ್ರತಾ ಸಿಬ್ಬಂದಿ ಇರಬೇಕು. ಉಳಿದಂತೆ ಇತರೆ ಶಾಲೆಗಳಿಗೆ ನಿಗದಿಪಡಿಸಿರುವ ಮಾರ್ಗ­ಸೂಚಿ ಅಂಶಗಳೇ ವಿಬ್ ಗಯಾರ್ ಶಾಲೆಗೂ ಅನ್ವಯವಾಗುತ್ತವೆ.

MN Reddi


ಮಾರ್ಗ­ಸೂಚಿ ಮುಖ್ಯಾಂಶಗಳು
:
* ಶಾಲಾ ವಾಹನಗಳಿಗೆ ಚಾಲಕನ ಜತೆಗೆ ಕಡ್ಡಾಯ­ವಾಗಿ ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬೇಕು.
* ವಾಹನದಲ್ಲಿ ಕಡ್ಡಾಯವಾಗಿ ಜಿಪಿಎಸ್‌ ವ್ಯವಸ್ಥೆ, ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಜಿಪಿಎಸ್‌ ಸಾಧನ ಹಾಗೂ ಸಿ.ಸಿ ಕ್ಯಾಮೆರಾವನ್ನು ಸದಾ ಸುಸ್ಥಿತಿಯಲ್ಲಿ ಇಡಬೇಕು.
* ಶಾಲೆಯ ಪ್ರವೇಶದ್ವಾರ ಮತ್ತು ಪ್ರತಿ ಅಂತಸ್ತಿಗೆ ಮೂರು ಪಾಳಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಭದ್ರತಾ ಸಿಬ್ಬಂದಿ ಪ್ರತಿ ಎರಡು ತಾಸಿಗೊಮ್ಮೆ ಭದ್ರತಾ ವಿಭಾಗದ ಮುಖ್ಯಸ್ಥರಿಗೆ ವರದಿ ನೀಡಬೇಕು. ಭದ್ರತೆಯ ಉಸ್ತುವಾರಿಗೆ ಮುಖ್ಯ ಮೇಲ್ವಿಚಾರಕ ಮತ್ತು ಮೂವರು ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು.
* ಪೋಷಕರಿಗೆ ಗುರುತಿನ ಚೀಟಿ ನೀಡಬೇಕು. ಆ ಚೀಟಿಯಲ್ಲಿ ಅವರ ಮಗುವಿನ ಭಾವಚಿತ್ರ ಇರಬೇಕು.
* ಶಿಕ್ಷಕರು, ಆಡಳಿತ ಮತ್ತು ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕೆಲಸ ನಿರ್ವಹಿಸುವವರ ವೈಯಕ್ತಿಕ ವಿವರ ಸಂಗ್ರಹಿಸಿ, ಅವರ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೇ, ಅವರೆಲ್ಲರಿಗೂ ಗುರುತಿನ ಚೀಟಿ ನೀಡಬೇಕು.
* ಶಾಲಾ ಆವರಣದಲ್ಲಿ ಅಪರಾಧ ಅಥವಾ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಆ ಬಗ್ಗೆ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.
* ಶಾಲೆಯ ಆಟದ ಮೈದಾನ, ಈಜುಕೊಳ, ಪ್ರಯೋಗಾಲಯ, ಗ್ರಂಥಾಲಯ, ವ್ಯಾಯಾಮ ಕೊಠಡಿಗೆ ಹೊರಗಿನವರ ಪ್ರವೇಶ ನಿರ್ಬಂಧಿಸಬೇಕು.
* ಕಟ್ಟಡದ ಪ್ರತಿ ಅಂತಸ್ತಿಗೂ ವಿಚಕ್ಷಣಾಧಿಕಾರಿಯನ್ನು ನೇಮಿಸಬೇಕು. ಅವರಿಗೆ ಶಾಲಾ ಆವರಣದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಾಧ್ಯವಾಗುವಂತೆ ಪಾರದರ್ಶಕವಾದ ಗಾಜಿನ ಚೌಕಿ ನಿರ್ಮಿಸಿಕೊಡಬೇಕು.

* ಚಾಲಕನ ಪೂರ್ವಾಪರ, ಚಾಲನಾ ಪರವಾನಗಿ ಬಗ್ಗೆ ಆಡಳಿತ ಮಂಡಳಿಯು ಪೊಲೀಸ್‌ ಠಾಣೆಯಿಂದ ಮಾಹಿತಿ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳಬೇಕು.
* ಚಾಲಕರ ಯಾವುದೇ ತಪ್ಪಿಗೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ವಾಹನ ಮಾಲೀಕರೇ ಸಂಪೂರ್ಣ ಜವಾಬ್ದಾರರು. ಆ ಬಗ್ಗೆ ಆಡಳಿತ ಮಂಡಳಿಯು ವಾಹನ ಮಾಲೀಕರಿಂದ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ವಾಹನದ ಅರ್ಹತಾ ಪ್ರಮಾಣಪತ್ರ, ನೋಂದಣಿ, ತೆರಿಗೆಗೆ ಸಂಬಂಧಿಸಿದ ದಾಖಲೆಪತ್ರಗಳು ಇರಬೇಕು.
* ಸಾರಿಗೆ ಇಲಾಖೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆದೊಯ್ಯಬಾರದು.
* ಶಿಕ್ಷಕರು, ಆಡಳಿತ ಮತ್ತು ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕೆಲಸ ನಿರ್ವಹಿಸುವವರ ವೈಯಕ್ತಿಕ ವಿವರ ಸಂಗ್ರಹಿಸಿ, ಅವರ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೇ, ಅವರೆಲ್ಲರಿಗೂ ಗುರುತಿನ ಚೀಟಿ ನೀಡಬೇಕು.

English summary
In the fallout of alleged rape of a six-year old girl at a public school that triggered public outrage, police on Saturday issued tough guidelines to schools here for safety of children and warned of prosecution in the event of its non-compliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X