ಬಿದ್ದಿರುವ ಒಂದು ಮರ ತೆರವಿಗೆ ಬಿಬಿಎಂಪಿ ಮಾಡುತ್ತಿರುವ ವೆಚ್ಚವೆಷ್ಟು?
ಬೆಂಗಳೂರು, ಮೇ 30: ನಗರದಲ್ಲಿ ಗಾಳಿ ಮಳೆಗೆ ಬಿದ್ದಿರುವ ಮರಗಳನ್ನು ತೆರವುಗಳಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.
ವಾಹನಗಳ ಮೇಲೆ, ರಸ್ತೆಯ ಮಧ್ಯೆ, ಮನೆಗಳ ಮೇಲೆ, ಕಾಪೌಂಡ್‌ಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಮರಗಳು ಬಿದ್ದಿವೆ. ಹಾಗಾಗಿ ಅವುಗಳನ್ನು ತೆರವುಗೊಳಿಸಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಮರಗಳ ಅಳತೆಯ ಆಧಾರದ ಮೇಲೆ ಒಂದು ಮರವನ್ನು ತೆರವುಗೊಳಿಸಲು 8 ಸಾವಿರ ರೂನಿಂದ 50 ಸಾವಿರದವರೆಗೂ ವ್ಯಯಿಸಲಾಗುತ್ತಿದೆ.
ನೂರಾರು ಮರಗಳು ಬುಡಮೇಲಾಗಿ ಬಿದ್ದಿವೆ, ಮರಗಳನ್ನು ತಕ್ಷಣವೇ ತೆರವುಗೊಳಿಸುವುದು ಬಿಬಿಎಂಪಿಯ ಜವಾಬ್ದಾರಿಯಾಗಿದೆ. ಖಾಸಗಿಯವರ ಆಸ್ತಿಗಳಿಗೆ ಕೂಡ ತೊಂದರೆಯಾಗಿದೆ.

ಜಯನಗರದಲ್ಲಿ ನರಸಿಂಹ ಎಂಬುವವರ ಮನೆಯ ಕಾಪೌಂಡ್ ಮೇಲೆ ಬಿದ್ದಿರುವ ಗುಲ್‌ಮೋಹರ್ ಮರವನ್ನು ತೆರವುಗೊಳಿಸಲು ಅವರು 23 ಸಾವಿರ ರೂ ನೀಡಬೇಕಾಯಿತು. ಅದು ಸಾಕಷ್ಟು ವರ್ಷಗಳ ಹಿಂದಿನ ಮರವಾಗಿತ್ತು. ಆರೋಗ್ಯವಂತ ಮರವಾಗಿದ್ದರೆ ಅದನ್ನು ಕತ್ತರಿಸಲು ಕಡಿಮೆ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ನಗರಾದ್ಯಂತ 125 ಮರಗಳು ಹಾಗೂ 370 ರೆಂಬೆಗಳು ಮುರಿದುಬಿದ್ದಿವೆ. 15 ಅಡಿ ಎತ್ತರದ ಮರಕ್ಕೆ 8 ಸಾವಿರ ನೀಡಬೇಕು. ಬಿಬಿಎಂಪಿಯು ಸ್ಥಳೀಯರಿಗೆ ಯಾವುದೇ ತೊಂದರೆ ನೀಡದೆ ಅವರಿಂದ ಹಣ ಪಡೆಯದೆ ಕೆಲಸ ಮಾಡಿಕೊಡುತ್ತಿದೆ.
ಆದರೂ ಒಂದು ಕಡೆಯಿಂದ ನಾವು ಎಲ್ಲಾ ಮರಗಳನ್ನು ತೆರವುಗೊಳಿಸುತ್ತಾ ಬರುವಾಗ ಇನ್ನೊಂದು ಕಡೆ ಸ್ಥಳೀಯರೇ ಸೇರಿ ಹಣ ನೀಡಿ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications