ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 23 : ನೈಋತ್ಯ ರೈಲ್ವೆ ಯಶವಂತರಪುರ ಮತ್ತು ಪ್ರಯಾಗ್ ರಾಜ್ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಿದೆ. ದಸರಾ, ದೀಪಾವಳಿ ಅಂಗವಾಗಿ ವಾರಕ್ಕೊಮ್ಮೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಓಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲು ನಂಬರ್ 04133/04134 ನಂಬರ್ ರೈಲು ಯಶವಂತಪುರ-ಪ್ರಯಾಗ್ ರಾಜ್ ನಡುವೆ ಸಂಚಾರ ನಡೆಸಲಿದೆ. ಪ್ರತಿ ಭಾನುವಾರ ಪ್ರಯಾಗ್‌ ರಾಜ್‌ನಿಂದ 04133 ರೈಲು 11.30ಕ್ಕೆ ಹೊರಡಲಿದ್ದು, ಮಂಗಳವಾರ 6.30ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಪ್ರಯಾಗ್ ರಾಜ್-ಯಶವಂತಪುರ ನಡುವಿನ ರೈಲು ಅಕ್ಟೋಬರ್ 25 ರಿಂದ ನವೆಂಬರ್ 29ರ ತನಕ 6 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

Prayagraj Yesvantpur Festival Special Train Schedule

ರೈಲು ನಂಬರ್ 04134 ಯಶವಂತಪುರ-ಪ್ರಯಾಗ್ ರಾಜ್ ನಡುವಿನ ರೈಲು ಯಶವಂತಪುರದಿಂದ ಪ್ರತಿ ಬುಧವಾರ 7.10ಕ್ಕೆ ಹೊರಡಲಿದೆ. ಗುರುವಾರ 10.40ಕ್ಕೆ ಪ್ರಯಾಗ್‌ ರಾಜ್‌ ತಲುಪಲಿದೆ.

ಅಕ್ಟೋಬರ್ 28ರಿಂದ ಡಿಸೆಂಬರ್ 2ರ ತನಕ ಒಟ್ಟು 6 ಟ್ರಿಪ್‌ಗಳಲ್ಲಿ ಈ ಹಬ್ಬದ ವಿಶೇಷ ರೈಲು ಸಂಚಾರ ನಡೆಸಲಿದೆ. ಕೆ. ಆರ್. ಪುರ, ಎಂಜಿಆರ್ ಸೆಂಟ್ರಲ್ ಚೆನ್ನೈ, ವಿಜಯವಾಡ, ವಾರಂಗಲ್, ನಾಗ್ಪುರ ಮಾರ್ಗವಾಗಿ ರೈಲು ಸಂಚಾರ ನಡೆಸಲಿದೆ.

ಹಬ್ಬದ ವಿಶೇಷ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ 24 ಬೋಗಿಗಳಿವೆ. 2 ಎಸಿ 2 ಟೈರ್ ಕೋಚ್, 1 ಎಸಿ 2 ಟೈರ್ ಕಮ್ ಎಸಿ 3 ಟೈರ್ ಕೋಚ್, 8 ಸೆಕೆಂಡ್ ಕ್ಲಾಸ್ ಸ್ಲೀಪರ್, 4 ಸಾಮಾನ್ಯ ಬೋಗಿ, 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿದೆ.

ಕೋವಿಡ್ ಸಂದರ್ಭದಲ್ಲಿ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ನವರಾತ್ರಿ, ದೀಪಾವಳಿ ಹಬ್ಬದ ಅಂಗವಾಗಿ ಭಾರತೀಯ ರೈಲ್ವೆ 300ಕ್ಕೂ ಅಧಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+