ಬೆಂಗಳೂರಿಗೆ ಪ್ರಣಬ್ ಭೇಟಿ : ಎಲ್ಲೆಲ್ಲಿ ವಾಹನ ನಿಲ್ಲಿಸುವಂತಿಲ್ಲ?

ಬೆಂಗಳೂರು, ಡಿಸೆಂಬರ್ 21 : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎರಡು ದಿನದ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಡಿ.22 ಮತ್ತು ಡಿ.23ರಂದು ಪ್ರಣಬ್ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳಲಿದ್ದಾರೆ.

ರಾಷ್ಟ್ರಪತಿಗಳ ಭೇಟಿಯ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ರಸ್ತೆಗಳನ್ನು ಬಳಸುವ ವಾಹನ ಸವಾರ/ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ. [ಡಿ.22ರಂದು ಕಲಬುರಗಿಗೆ ಪ್ರಣಬ್ ಭೇಟಿ]

traffic police

ಕಾರ್ಯಕ್ರಮಗಳು : ಡಿಸೆಂಬರ್ 22ರ ಮಂಗಳವಾರ ಸಂಜೆ ಬೀದರ್‌ನಿಂದ ಬೆಂಗಳೂರಿಗೆ ಆಗಮಿಸುವ ಪ್ರಣಬ್ ಮುಖರ್ಜಿ ಅವರು, ನಿಮ್ಹಾನ್ಸ್ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.[ಪ್ರಣಬ್ ಮುಖರ್ಜಿ ಕಾರ್ಯಕ್ರಮಗಳು]

ಡಿಸೆಂಬರ್ 23ರ ಬುಧವಾರ ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯ 150ನೇ ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಮಧ್ಯಾಹ್ನ ಕಿದ್ವಾಯಿ ಸಂಸ್ಥೆಯಲ್ಲಿ ಕ್ಯಾನ್ಸರ್ ಸಂಸ್ಥೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್‌ಗೆ ತೆರಳಲಿದ್ದಾರೆ.

ಯಾವ ರಸ್ತೆಯಲ್ಲಿ ವಾಹನ ನಿಲ್ಲಿಸುವಂತಿಲ್ಲ

* ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ ಜಂಕ್ಷನ್‌ನಿಂದ ಎ.ಎಸ್.ಸಿ. ವೃತ್ತದ ವರೆಗೆ
* ವಿಕ್ಟೋರಿಯಾ ರಸ್ತೆ : ಎ.ಎಸ್.ಸಿ. ವೃತ್ತದಿಂದ ಡಿಸೋಜಾ ವೃತ್ತದ ವರೆಗೆ
* ರಿಚ್‍ಮಂಡ್ ರಸ್ತೆ : ಡಿಸೋಜಾ ವೃತ್ತದಿಂದ ಅಶೋಕನಗರ ಸಿಗ್ನಲ್ ಲೈಟ್ ವರೆಗೆ
* ಹೊಸೂರು ರಸ್ತೆ : ಅಶೋಕನಗರ ಸಿಗ್ನಲ್‌ಲೈಟ್ ನಿಂದ ಆನೇಪಾಳ್ಯ ಜಂಕ್ಷನ್ ವರೆಗೆ
* ಬನ್ನೇರುಘಟ್ಟ ರಸ್ತೆ : ಆನೇಪಾಳ್ಯ ಜಂಕ್ಷನ್ ನಿಂದ ಡೈರಿ ವೃತ್ತದ ವರೆಗೆ
* ಡಾ: ಮರಿಗೌಡ ರಸ್ತೆ : ಡೈರಿ ವೃತ್ತದಿಂದ ಕೆ.ಎಚ್.ವೃತ್ತದ ವರೆಗೆ
* ಕೆ.ಎಚ್.ರಸ್ತೆ : ಕೆ.ಹೆಚ್.ವೃತ್ತದಿಂದ ರಿಚ್‍ಮಂಡ್ ವೃತ್ತದ ವರೆಗೆ
* ಆರ್.ಅರ್.ಎಂ.ಆರ್. ರಸ್ತೆ : ರಿಚ್‍ಮಂಡ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ
* ಕಸ್ತೂರಿಬಾ ರಸ್ತೆ : ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ
* ಕ್ವೀನ್ಸ್ ರಸ್ತೆ : ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ. ವೃತ್ತದ ವರೆಗೆ
* ರಾಜಭವನ ರಸ್ತೆ : ಸಿ.ಟಿ.ಓ. ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ
* ಅಲಿ ಆಸ್ಕರ್ ರಸ್ತೆ : ರಾಜಭವನ ಜಂಕ್ಷನ್‌ನಿಂದ ಇನ್‍ಫೆಂಟ್ರಿ ರಸ್ತೆ ಜಂಕ್ಷನ್ ವರೆಗೆ
* ಇನ್‍ಫೆಂಟ್ರಿ ರಸ್ತೆ : ಅಲಿ ಆಸ್ಕರ್ ರಸ್ತೆ ಜಂಕ್ಷನ್ ನಿಂದ ಟಿ.ಎಂ.ಸಿ. ಜಂಕ್ಷನ್ ವರೆಗೆ
* ಕ್ವೀನ್ಸ್ ರಸ್ತೆ : ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ
* ಕಸ್ತೂರಿಬಾ ರಸ್ತೆ : ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ
* ಮಲ್ಯ ಆಸ್ಪತ್ರೆ ರಸ್ತೆ : ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತ್ತದ ವರೆಗೆ
* ರಿಚ್‍ಮಂಡ್ ರಸ್ತೆ : ಆರ್.ಆರ್.ಎಂ.ಆರ್. ವೃತ್ತದಿಂದ ಆಪೇರಾ ಜಂಕ್ಷನ್ ವರೆಗೆ
* ಬ್ರಿಗೇಡ್ ರಸ್ತೆ : ಅಪೇರಾ ವೃತ್ತದಿಂದ ಅಶೋಕನಗರ ಸಿಗ್ನಲ್ ಲೈಟ್ ವರೆಗೆ
* ಎಂ.ಜಿ.ರಸ್ತೆ : ಕ್ವೀನ್ಸ್ ವೃತ್ತದಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ
* ಸೆಂಟ್ರಲ್ ಸ್ಟ್ರೀಟ್ : ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್.ವಿ ವೃತ್ತದ ವರೆಗೆ
* ಕಬ್ಬನ್ ರಸ್ತೆ : ಬಿ.ಆರ್.ವಿ. ವೃತ್ತದಿಂದ ಮಣಿಪಾಲ್ ಸೆಂಟರ್ ವರೆಗೆ
* ಡಿಕನ್ಸನ್ ರಸ್ತೆ : ಮಣಿಪಾಲ್ ಸೆಂಟರ್ ನಿಂದ ವೆಬ್ಸ್ ಜಂಕ್ಷನ್ ವರೆಗೆ
* ಎಂ.ಜಿ.ರಸ್ತೆ : ವೆಬ್ಸ್ ಜಂಕ್ಷನ್ ನಿಂದ ಟ್ರಿನಿಟಿ ವೃತ್ತದ ವರೆಗೆ
* ಟ್ರಿನಿಟಿ ಚರ್ಚ್ ರಸ್ತೆ : ಟ್ರಿನಿಟಿ ವೃತ್ತದಿಂದ ಎ.ಎಸ್.ಸಿ. ವೃತ್ತದ ವರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+