Power cut: ಸ್ವಾತಂತ್ರ್ಯ ದಿನಾಚರಣೆಯಂದೇ ಬೆಂಗಳೂರಿನ ಈ ಪ್ರದೇಶಗಳಲ್ಲಿ 6 ಗಂಟೆಗಳ ಕಾಲ ಕರೆಂಟ್ ಕಟ್, ಸಮಯ ತಿಳಿಯಿರಿ
ಬೆಂಗಳೂರು, ಆಗಸ್ಟ್, 15: ಇಂದು ದೇಶದೆಲ್ಲೆಡೆ 77ನೇ ಸ್ವಾಂತ್ರತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ನಿರ್ವಹಣಾ ಕಾರ್ಯಗಳಿರುವ ಹಿನ್ನೆಲೆ ಇಂದು ರಾಜ್ಯ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸತತ 6 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ಹಿನ್ಬೆಲೆ ಐಟಿ ಹಬ್‌ನ ಹಲವಾರು ಭಾಗಗಳು ಇಂದು (ಆಗಸ್ಟ್ 15) ದೀರ್ಘಕಾಲದ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿರ್ವಹಣಾ ಕಾರ್ಯಗಳ ಹಿನ್ನೆಲೆ ಸತತ 6 ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ಬೆಂಗಳೂರಿನ ಹಲವು ಪ್ರದೇಶದಲ್ಲಿ ವಿದ್ಯುತ್ ಕಡಿತ ಆಗಬಹುದು ಎಂದು ತಿಳಿಸಿದೆ. ಈ ತ್ರೈಮಾಸಿಕ ನಿರ್ವಹಣೆ, ತಂತಿ ಕೆಲಸ, ನೀರು ಸರಬರಾಜು ಕೆಲಸ, ಸ್ಥಾಪನೆ, ಕಂಬಗಳನ್ನು ನೇರಗೊಳಿಸುವುದು, ಕಾಡು ತೆರವುಗೊಳಿಸುವುದು ಮತ್ತು ಇತರೆ ನಿರ್ವಹಣಾ ಕಾರ್ಯಗಳು ಇರುವುದರಿಂದ ಬೆಳಗ್ಗೆ 10ಯಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗಾನುಡು, ಗೊಲ್ಲರಹಳ್ಳಿ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ಅರಳಿಕಟ್ಟೆ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆಡ್ಡಲಹಟ್ಟಿ, ಮಂಗೇನಹಳ್ಳಿ, ಭೀಮನರೆ, ದೊಡ್ಡೇರಿಕಟ್ಟೆ, ಕುಳೇನೂರು, ಶಿವಕುಳೇನೂರು, ಕೊಂಡದಹಳ್ಳಿ, ಚಿಕ್ಕೋಡ, ಮಾಥೋಡ್ ಗ್ರಾಮ ಪಂಚಾಯತಿ ಐಯುಡಿಪಿ ಲೇಔಟ್ ಪ್ರದೇಶದಲ್ಲಿ ವಿದ್ಯುತ್ ಕಡಿತ ಆಗಲಿದೆ.
ಹಾಗೆಯೇ ಡಿ.ಎಸ್.ಹಳ್ಳಿ, ಕುಂಚಿಗಾನಹಳ್ಳಿ, ಇಂಗಳದಹಳ್ಳಿ, ಕೆನ್ನೆಡೆಲು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳು, ಇನ್ಹಳ್ಳಿ, ಸೀಬಾರ, ಸಿದ್ದವನದುರ್ಗ ಸುತ್ತಮುತ್ತಲಿನ ಪ್ರದೇಶಗಳು, ಮಾದನಾಯಕನಹಳ್ಳಿ ಮತ್ತು ಯಲವರ್ತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ ಆಗಲಿದೆ ಎಂದು ತಿಳಿಸಿದೆ.












Click it and Unblock the Notifications