Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜನವರಿ 25, 27, 28ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜನವರಿ 25, 27, 28ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಿರುವ ಹಿನ್ನೆಲೆ ನಗರದ ಹಲವೆಡೆ ಮೂರು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಜನವರಿ 25ರಂದು ಎಲ್ಲಲ್ಲಿ ವಿದ್ಯುತ್ ವ್ಯತ್ಯಯ?: ಬೆಂಗಳೂರು ವ್ಯಾಪ್ತಿಯಲ್ಲಿ ಗ್ಲೋಬಲ್ ಟೆಕ್ ಪಾರ್ಕ್‌ನ 66/11ಕೆವಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು (ಜನವರಿ 25) ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಕೊವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ಮೆಂಟ್, ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಜೆ.ವಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಜನವರಿ 27ರಂದು ಎಲ್ಲೆಲ್ಲಿ ಕರೆಂಟ್ ಕಟ್?: ಬೆಂಗಳೂರು ವ್ಯಾಪ್ತಿಯಲ್ಲಿ ಸೇಂಟ್‌ಜಾನ್‌ವುಡ್ 66/11ಕೆವಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಸೋಮವಾರ (ಜನವರಿ 27) ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸೇಂಟ್‌ಜಾನ್‌ವುಡ್ ಅಪಾರ್ಟ್ಮೆಂಟ್ & ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಚರಿಸ್ಟ್ ಕಾಲೇಜು ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಆಕ್ಷಿಸ್ ಭವನ, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ಬಿಜಿ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್.
ಜನವರಿ 28ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ಬಿಎಂಟಿಸಿ ಸ್ಟೇಷನ್ 66/11ಕೆವಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಮಂಗಳವಾರ (ಜನವರಿ 28) ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯು.ಬಿ ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ.
ಹೊಂಬೇಗೌಡ ನಗರ, ಸಂಪಗಿ ನಗರ, ಜೆ.ಸಿ ರೋಟ್, ಶಾಂತಿನಗರ, ಬಿಟಿಎಸ್ ರೋಡ್, ರಿಚ್ಮಂಡ್ ಸರ್ಕಲ್, ರೆಸಿಡೆನೆಸ್ಸಿ ರೋಡ್, ಸುಧಾಮನಗರ, ಕೆ.ಎಚ್ ರೋಡ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಬೆಂಗಳೂರಿನ ಶೋಭಾ ಅಪಾರ್ಟ್ ಮೆಂಟ್ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ನಿನ್ನೆ (ಜನವರಿ 24) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಎ ವಿದ್ಯುತ್ ಪೂರೈಕೆ ಇರಲಿಲ್ಲ. ಬೆಂಗಳೂರಿನ ಸರ್ಜಾಪುರ, ಸೆಸ್ಸಾನ ಗಾರ್ಡನ್, ಔಟರ್ ರಿಂಗ್ ರೋಡ್, ಸೆಂಟ್ರಲ್ ಮಾಲ್ ಎಕ್ಸೋರಾ ಬಿಸಿನೆಸ್ ಪಾರ್ಕ್, ಶೋಭಾ ಅಪಾರ್ಟ್ ಮೆಂಟ್, ಸರ್ಜಾಪುರ ಸಾಫ್ಟ್ ಜೋನ್, ತಕ್ಷಶಿಲಾ ಹೆಲ್ತ್ ಕೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ತಿಳಿದುಬಂದಿತ್ತು.












Click it and Unblock the Notifications