Bengaluru Power Cut: ಸೋಮವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಇನ್ನು ಸೋಮವಾರ (ಡಿಸೆಂಬರ್ 23) ನಗರ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ 66/11ಕೆವಿ ಇಸ್ರೋ ಉಪಕೇಂದ್ರದಲ್ಲಿನ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 23ರಂದು ವಿದ್ಯುತ್ ವ್ಯತ್ಯಯ ಬೆಳಗ್ಗೆ 10ರಿಂದ ಸಂಜೆ 03 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್ ಕಟ್?: ಇಸ್ರೋ ಉಪಕೇಂದ್ರದ ವ್ಯಾಪ್ತಿಯಲ್ಲಿರುವ ಇಸ್ರೋ ಲೇಔಟ್ ಇಂಡಸ್ಟ್ರಿಯಲ್ ಪ್ರದೇಶ, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ ಇಲಿಯಾಸ್ ನಗರ, ಗಂಗಾಧರನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆಪಾಳ್ಯ, ಪ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರಿಮ್ ಲೇದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, ಜೆ.ಹೆಚ್.ಬಿ.ಸಿ.ಎಸ್. ಲೇಔಟ್, ಬೇಂದ್ರೇನಗರ, ಈಶ್ವರನಗರ, ಮಿನಾಜ್ ನಗರ, ಕನಕ ಲೇಔಟ್, ಕನಕನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.
ಈಗಾಗಲೇ ಡಿಸೆಂಬರ್ 21, 2024ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಸಹಕಾರ ನಗರದ ಎಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ ಬೈತರಾಯನಪುರ, ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್.
ಯೋಷಾದ ನಗರಾಮೃತಹಳ್ಳಿ, ಡಿ ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯೂಎಎಲ್ ಲೇಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು.
ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ ಎಸ್ ಲೇಔಟ್, ಸುರ್ಯೋದಯ ನಗರ.2, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್ ಲ್ ರಸ್ತೆ ( ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
66/11 ಕೆವಿಎ ಎಲೆಕ್ಟ್ರಾನಿಕ್ ಸಿಟಿ ಫೇಸ್-2 ಕೇಂದ್ರದಲ್ಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಫೇಸ್-2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹೀಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ ಸೋಲಾರ್, 12ನೇ ಹಂತ, 7ನೇ ಹಂತ, 11ನೇ ಹಂತ.
ಬನಶಂಕರಿ ಸುತ್ತಮುತ್ತಲಿನ ಪ್ರದೇಶಗಳಗಳಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಬದ್ರನಗರ, ಬ್ಯಾಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ ಗಿರಿನಗರ 4ನೇ ಹಂತ, ಟಿಐ ಲೇಔಟ್, 100 ರಿಂಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಕೋರಮಂಗಲ ವಿಭಾಗದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಐಬಿಮಂ, ಅಸ್ಸೆಂಚರ್, ಐಬಿಎಂ ಡಿ ಬ್ಲಾಕ್, ಗುರಪ್ಪನ ಪಾಳ್ಯ, ಬಿ.ಜಿ.ರಸ್ತೆ, ಬಿ.ಟಿ.ಎಂ 1ನೇ ಹಂತ, ಮಡಿವಾಳ ಮಾರುತಿ ನಗರ, ಭಿಸ್ಮಿಲ್ಲಾ ನಗರ, ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.












Click it and Unblock the Notifications