Bengaluru Power Cut: ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಟ್, ಯಾವಾಗ? ಎಲ್ಲೆಲ್ಲಿ?

ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದೆ. ಈ ಕಾರಣದಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಅಕ್ಟೋಬರ್ 30 ರಂದು ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ ಇಲ್ಲಿದೆ..

ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, 66/11 ಕೆವಿ ಪಾಟರಿ ಸಬ್‌ಸ್ಟೇಷನ್ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 11:00 ರಿಂದ ಸಂಜೆ 4:00 ರವರೆಗೆ 5 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ನಗರದಾದ್ಯಂತ ಸ್ಥಿರ ಮತ್ತು ಸುರಕ್ಷಿತ ವಿದ್ಯುತ್ ಜಾಲ ಖಚಿತಪಡಿಸಿಕೊಳ್ಳಲು ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳಲು ಈ ಸ್ಥಗಿತಗೊಳಿಸುವಿಕೆ ಅವಶ್ಯಕತವಾಗಿದೆ ಎಂದು ತಿಳಿಸಿದೆ.

Power Cut in Bengaluru Many Areas on October 30th Check Affected Areas Details here

ಅಕ್ಟೋಬರ್ 30 ರಂದು ವಿದ್ಯುತ್ ಕಡಿತದ ಪ್ರಭಾವವು ಸುಮಾರು100 ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಆಗಲಿದೆ. ಇಲ್ಲಿನ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 05 ಗಂಟೆಗಳ ಕಾಲ ತಾತ್ಕಾಲಿಕ ವಿದ್ಯುತ್ ಕಡಿತವನ್ನು ಸಮಸ್ಯೆ ಎದುರಿಸಲಿದ್ದಾರೆ. ಬಾಧಿತ ಸ್ಥಳಗಳ ವಿವರ ಇಲ್ಲಿದೆ.

ವಿದ್ಯುತ್ ಕಡಿತದ ಪ್ರದೇಶಗಳು

ಹಳೆಯ ಬೈಯಪ್ಪನಹಳ್ಳಿ, ನಾಗೇನ್‌ಪಾಳ್ಯ,ಸತ್ಯನಗರ, ಗಜೇಂದ್ರನಗರ, ಎಸ್. ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಕಾಮನಹಳ್ಳಿ ಮುಖ್ಯ ರಸ್ತೆ, ಕೆಎಚ್‌ಬಿ ಕಾಲೋನಿ, ಜೈಭಾರತ್ ನಗರ, ಸಿಕೆ ಗಾರ್ಡನ್, ಹಚಿನ್ಸ್ ರಸ್ತೆ, ವೀಲರ್ ರಸ್ತೆ, ಬನಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಲಾಜರ್ ಲೇಔಟ್, ವಿವೇಕಾನಂದ ನಗರ, ಜೀವನಹಳ್ಳಿ, ಫ್ರೇಸರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಟ್ಯಾನರಿ ರಸ್ತೆ, ಕೋಲ್ಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಈ ಮೇಲಿನ ಪ್ರದೇಶಗಳ ನಿವಾಸಿಗಳು ವಿದ್ಯುತ್ ಪೂರೈಕೆ ನೋಡಿಕೊಂಡು ನಿಮ್ಮ ದೈನಂದಿನ ಚಟುವಟಿಕೆ ಯೋಜಿಸುವುದು ಒಳ್ಳೆಯದು. ಕಡಿತದ ಸಮಯಕ್ಕೆ ಮುಂಚಿತವಾಗಿ ಅಗತ್ಯ ವಿದ್ಯುತ್ ಕೆಲಸವನ್ನು ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ನಿರ್ವಹಣಾ ಚಟುವಟಿಕೆಗಳು ಪೂರ್ಣಗೊಂಡ ನಂತರ ವಿದ್ಯುತ್ ಅನ್ನು ಪುನರ್ ಸ್ಥಾಪನೆಯಾಗಲಿದೆ.

ವಿದ್ಯುತ್ ಪುನರ್ ಪೂರೈಕೆಯ ನಂತರ ಅಥವಾ ದೈನಂದಿನ ವಿದ್ಯುತ್ ಸರಬರಾಜಿನಲ್ಲಿನ ಸಮಸ್ಯೆಗಳು, ಇತರ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಬಹುದು.ಇಲ್ಲವೇ ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡುವಂತೆ ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+