ಯುರೋಪ್‌ ನಿಷೇಧ: ಮಾವಿನ ಬೆಲೆ ದಿಢೀರ್‌ ಇಳಿಕೆ

ಬೆಂಗಳೂರು, ಮೇ.2:ಯುರೋಪ್‌ ಮಾವಿನ ಹಣ್ಣಿನ ಮೇಲೆ ನಿಷೇಧ ಹೇರಿದ್ದೇ ತಡ ಆಲ್ಫಾನ್ಸೋ ತಳಿಯ ಮಾವಿನ ಹಣ್ಣಿನ ಬೆಲೆ ದಿಢೀರ್‌ ಇಳಿಕೆಯಾಗಿದೆ. ಈ ಹಿಂದೆ ಹೋಲ್‌ ಸೇಲ್‌ನಲ್ಲಿ ಕೆ.ಜಿಗೆ 35-50 ರೂಪಾಯಿಯಲ್ಲಿ ಮಾರಾಟವಾಗುತ್ತಿದ್ದ ಆಲ್ಫಾನ್ಸೋ ಮಾವು ಈಗ ಕೆ.ಜಿಗೆ 25-30 ರೂ.ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಕರ್ನಾಟಕ ಪ್ರತಿ ವರ್ಷ 7 ಸಾವಿರ ಟನ್‌ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿದ್ದು 10 ಕೋಟಿ ರೂ ವಹಿವಾಟು ನಡೆಸುತ್ತಿದೆ. ಕರ್ನಾಟಕದಲ್ಲಿ ವಾರ್ಷಿ‌ಕವಾಗಿ 7 ರಿಂದ10 ಲಕ್ಷ ಟನ್‌‌ ಮಾವಿನ ಹಣ್ಣನ್ನು ಉತ್ಪಾದಿಸುತ್ತದೆ. ಕಳೆದ ವರ್ಷ‌ ಭಾರತ 37,598.64 ಮೆಟ್ರಿಕ್‌ ಟನ್‌‌ ಮಾವಿನಹಣ್ಣನ್ನು ಇಂಗ್ಲೆಂಡ್‌ಗೆ ರಫ್ತು ಮಾಡಿತ್ತು.

ರಾಜ್ಯದಲ್ಲಿ ಕೋಲಾರದಲ್ಲಿ ಅತಿ ಹೆಚ್ಚಿನ ಶೇ.50 ರಷ್ಟು ಪ್ರಮಾಣದಲ್ಲಿ ಆಲ್ಫಾನ್ಸೋ ತಳಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಬಳಿಕ ಬೆಂಗಳೂರು ಗ್ರಾಮಾಂತರ, ಚೆನ್ನಪಟ್ಟಣ, ರಾಮನಗರದಲ್ಲಿ ಮತ್ತು ತುಮಕೂರಿನಲ್ಲಿ ಆಲ್ಫಾನ್ಸೋ ಮಾವನ್ನು ಬೆಳೆಯಲಾಗುತ್ತಿದೆ.[ಮೇ.1ರಿಂದ ಬೆಂಗಳೂರಿನಲ್ಲಿ ಸಾವಯವ ಮಾವು ಮೇಳ]

Post EU ban, alphonso prices slide

ಮಧ್ಯವರ್ತಿ‌ಗಳಿಂದಾಗಿ ನಿಷೇಧ:ಯುರೋಪಿಯನ್‌ ಒಕ್ಕೂಟ ನಿಷೇಧ ಕರ್ನಾಟಕದ ಮೇಲೆ ದೊಡ್ಡ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್‌.ವಿ.ಹಿತ್ತಲಮನಿ ಹೇಳಿದ್ದಾರೆ.

ಒನ್‌ ಇಂಡಿಯಾದೊಂದಿಗೆ ಮಾತನಾಡಿದ ಅವರು 'ವಿದೇಶಕ್ಕೆ ಮಾರಾಟ ಮಾಡುವ ಮಧ್ಯವರ್ತಿ‌‌ಗಳು ಹಣ್ಣಿನ ಮೇಲೆ ರಾಸಾಯನಿಕ ಸಿಂಪಡಿಸುವುದರಿಂದ ಈ ನಿಷೇಧ ಬಂದಿದೆ. ನಿಷೇಧಕ್ಕೂ ನಮ್ಮ ರೈತರಿಗೂ ಯಾವುದೇ ಸಂಬಂಧವಿಲ್ಲ. ನಿಷೇಧಕ್ಕೆ ಮಧ್ಯವರ್ತಿಗಳೇ ನೇರ ಹೊಣೆ, ರೈತರು ಅಮಾಯಕರು' ಎಂದು ಹೇಳಿದ್ದಾರೆ.

ಕರ್ನಾಟಕದ ಮಾವಿನ ಹಣ್ಣುಗಳು ಹೆಚ್ಚಾಗಿ ಮಧ್ಯಪ್ರಾಚ್ಯ ದೇಶ, ಬಾಂಗ್ಲಾದೇಶ, ಅಮೆರಿಕಕ್ಕೆ ರಫ್ತಾಗುತ್ತದೆ. ಹೀಗಾಗಿ ರೈತರು ಈ ನಿಷೇಧಕ್ಕೆ ಭಯಪಡಬೇಕಾಗಿಲ್ಲ ಎಂದು ಹಿತ್ತಲಮನಿ ತಿಳಿಸಿದ್ದಾರೆ.

ಭಾರತದ ಆಲ್ಫಾನ್ಸೊ ಮಾವು ಸೇರಿದಂತೆ ಕೆಸವುಗೆಡ್ಡೆ, ಹಾಗಲಕಾಯಿ, ಪಡುವಲಕಾಯಿ, ಬದನೆ ಆಮದಿಗೆ ಯುರೋಪಿಯನ್‌ ಯುನಿಯನ್‌ ತಾತ್ಕಾಲಿಕ ನಿಷೇಧ ಹಾಕಿದೆ. ನಿಷೇಧ ಮೇ 1ರಿಂದ ಜಾರಿಗೆ ಬಂದಿದ್ದು 2015ರ ಡಿಸೆಂಬರ್‌ 31ರವರೆಗೆ ಈ ನಿಷೇಧ ಜಾರಿಯಲ್ಲಿ ಇರುತ್ತದೆ ಎಂದು ಹೇಳಿದೆ.[ಭಾರತದ ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ]

2013ರಲ್ಲಿ ಭಾರತದಿಂದ ಈ ದೇಶಗಳಿಗೆ ರಫ್ತಾಗಿದ್ದ ಹಣ್ಣು ಮತ್ತು ತರಕಾರಿಗಳ 207 ಮಾದರಿಗಳಲ್ಲಿ ಯುರೋಪಿಯನ್‌ ಯುನಿಯನ್‌‌‌ನ ಸಸ್ಯ ಆರೋಗ್ಯ ಸ್ಥಾಯಿ ಸಮಿತಿ ಕೀಟಗಳು ಪತ್ತೆ ಹಚ್ಚಿತ್ತು. ಈ ಹಿನ್ನೆಲೆಯಲ್ಲಿ 28 ಸದಸ್ಯ ದೇಶಗಳ ಯುರೋಪಿಯನ್‌‌ ಯುನಿಯನ್‌ ತಾತ್ಕಾಲಿಕ ನಿಷೇಧ ಹೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+