ಪೇದೆ ರಜೆಗಾಗಿ ಬರೆದ ಪತ್ರ ವೈರಲ್: ಹೊಸ ಮದ್ವೆ ಗಂಡಿಗೆ ರಜೆ ಕೊಡಿ ಎಂದ ನೆಟ್ಟಿಗರು

ಬೆಂಗಳೂರು, ಜನವರಿ 18: ಇತ್ತೀಚೆಗಷ್ಟೇ ಮದುವೆಯಾಗಿದ್ದ ಪೊಲೀಸ್ ಪೇದೆ ರಜೆಗಾಗಿ ಹಿರಿಯ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದಾರೆ. ಹಾಗಾದರೆ ಆ ಪತ್ರದಲ್ಲೇನಿದೆ.

ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ. ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಬೇಗೂರು ಪೊಲೀಸ್​ ಠಾಣೆ ಪೇದೆ ಮಾರುತಿ ಎಚ್​.ಬಿ. ಅವರು, ತಮ್ಮ ಇನ್​ಸ್ಪೆ​ಕ್ಟರ್​ಗೆ 10 ದಿನ ರಜೆ ಕೋರಿ ಬರೆದಿರುವ ಪತ್ರದಲ್ಲಿ ಸ್ವಲ್ಪ ಹಾಸ್ಯ ಚಟಾಕಿ ಸಿಡಿಸಿದ್ದಾರೆ.

ಹೊಸದಾಗಿ ಮದುವೆ ಆಗಿದ್ದೀನಿ, ಹೊಸ ಹುರುಪಿನಲ್ಲಿ ಇದ್ದೀನಿ. ನಮ್ಮ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಮಾರುತಿ, ಇವೆಲ್ಲವನ್ನೂ ಪರಿಗಣಿಸಿ ಹತ್ತು ದಿನ ರಜೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Police writes different leave letter to senior officer is Viral now

ಪತ್ರ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರು ಹೊಸ ಮದ್ವೆ ಗಂಡಿಗೆ ರಜೆ ಕೊಡಿ ಎಂದು ತಾವೂ ಇನ್​ಸ್ಪೆಕ್ಟರ್​ನ್ನು ಕೇಳಿಕೊಂಡು ಹಾಸ್ಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+