ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 45 ಲಕ್ಷ ವಶ
ಬೆಂಗಳೂರು, ಏಪ್ರಿಲ್ 02: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ಹಣವನ್ನು ಚುನಾವಣಾ ಅಕ್ರಮ ತಡೆ ತಂಡ ವಶಪಡಿಸಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೆಸಿ ರಸ್ತೆ, ವಿನೋಬಾನಗರ ನಿವಾಸಿ ರಾಹುಲ್ ಎಂಬುವರನ್ನು 45 ಲಕ್ಷ ರೂಪಾಯಿ ಹಣವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದಾರೆ, ಖಚಿತ ಮಾಹಿತಿ ಮೇರೆಗೆ ಮಹಾಲಕ್ಷ್ಮಿಪುರ ಪೊಲೀಸರು ಚುನಾವಣಾ ಸ್ಕ್ವಾಡ್ ಸಹಾಯದೊಂದಿಗೆ ರಾಹುಲ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ರಾಹುಲ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಕಪ್ಪು ಬ್ಯಾಗೊಂದರಲ್ಲಿ 45 ಲಕ್ಷ ಹಣ ಇಟ್ಟುಕೊಂಡಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿದಾಗ ಹಣಕ್ಕೆ ಸೂಕ್ತ ದಾಖಲೆ ನೀಡಲು ಅವರು ವಿಫಲರಾಗಿದ್ದಾರೆ.

ರಾಹುಲ್ ಅವರ ಮೇಲೆ ಚುನಾವಣಾ ಅಕ್ರಮ ತಡೆ ಸ್ಕ್ವಾಡ್‌ನ ಅಧಿಕಾರಿ ಪೊಲೀಸ್ ದೂರು ದಾಖಲಿಸಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications