ಕೆಲಸ ಕೊಡಿಸುವುದಾಗಿ ಮಹಿಳೆಯ ಕರೆದೊಯ್ದು ಸ್ನೇಹಿತನಿಂದ ಅತ್ಯಾಚಾರ

ಬೆಂಗಳೂರು, ಜುಲೈ 2: ಕೆಲಸ ಕೊಡಿಸುವುದಾಗಿ ನಂಬಿಸಿ ಹೋಟೆಲ್‌ಗೆ ಕರೆದೊಯ್ದು ಸ್ನೇಹಿತನೇ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ನೇಪಾಳ ಮೂಲದ ಮಹಿಳೆ ಬೆಂಗಳೂರಿನಲ್ಲಿ ಮನೆಗೆಲಸಕ್ಕಾಗಿ ಬಂದಿದ್ದಳು, ಏರ್‌ಪೋರ್ಟ್‌ನಲ್ಲಿ ಆಕೆಯನ್ನು ಭೇಟಿಯಾಗಿದ್ದ ಆತ ಆಕೆಯನ್ನು ತನ್ನ ತಂಗಿಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದ.

ಮರುದಿನ ಬೆಳಗ್ಗೆ ಆಕೆಯನ್ನು ಭೇಟಿಯಾಗಿ ಪಾರ್ಟಿಗೆ ಆಹ್ವಾನಿಸಿದ್ದ. ಬಳಿಕ ಆತನ ಜೊತೆಗೆ ಹೋದರೆ ಅಲ್ಲಿ ಯಾವ ಪಾರ್ಟಿಯೂ ನಡೆಯುತ್ತಿರುವಂತೆ ಕಾಣಿಸಿರಲಿಲ್ಲ. ಬಳಿಕ ಆಕೆಗೆ ಮತ್ತು ಬರುವ ಔಷಧ ಬೆರೆಸಿ ಜ್ಯೂಸ್ ಕುಡಿಸಿ, ಎಚ್ಚರ ತಪ್ಪಿದಾಗ ಅತ್ಯಾಚಾರವೆಸಗಿದ್ದ.

Police searching for who allegedly raped Home maker

ಸಂತ್ರಸ್ತೆಗೆ ಎಚ್ಚರವಾದ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಆತನ ಬಳಿ ಹೋಗಿ ಯಾಕೆ ಹೀಗೆ ಮಾಡಿದೆ ತನ್ನ ನಂಬಿಕೆಗೆ ಮೋಸ ಮಾಡಿದ್ದೀಯ ಎಂದು ಹೇಳಿದಾಗ, ಈ ವಿಚಾರವನ್ನು ಎಲ್ಲಿಯಾದರೂ ಹೇಳಿದರೆ ನಿನ್ನ ಜೀವಕ್ಕೆ ಅಪಾಯ ಎಂದು ಬೆದರಿಸಿ ಮತ್ತೆ ತನ್ನ ತಂಗಿಯ ಮನೆಗೆ ಕರೆದೊಯ್ದಿದ್ದ.

ಸಂತ್ರಸ್ತೆ ನೇಪಾಳದಲ್ಲಿರುವ ಪತಿಗೆ ಕರೆ ಮಾಡಿ ನಡೆದಿರುವ ವಿಚಾರವೆಲ್ಲಾ ತಿಳಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+