ಸೆಲೆಬ್ರಿಟಿ ರಿಕ್ರಿಯೇಷನ್ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: 17 ಮಂದಿ ಬಂಧನ
ಬೆಂಗಳೂರು, ಜನವರಿ 5: ಸೆಲೆಬ್ರಿಟಿ ರಿಕ್ರಿಯೇಷನ್ ಅಸೋಸಿಯೇಷನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 17 ಮಂದಿಯನ್ನು ಬಂಧಿಸಿದ್ದು, 2,33,200 ರೂ ನಗದು ವಶಪಡಿಸಿಕೊಂಡಿದ್ದಾರೆ.
ಮಾರತ್ತಹಳ್ಳಿಯ ಭಾರತ್ ಗ್ಯಾಸ್ ಏಜೆನ್ಸಿ ಹತ್ತಿರವಿರುವ ಸೆಲೆಬ್ರಿಟಿ ರಿಕ್ರಿಯೇಷನ್ ಅಸೋಸಿಯೇಷನ್ ಸದಸ್ಯರಲ್ಲದ ಸುಮಾರು 15-20 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದಾರೆ ಎಂಬ ಮಾಹಿತಿ ಸಂಸಗರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಂದರ್ಭದಲ್ಲಿ 2 ಲಕ್ಷ ನಗದು ಹಾಗೂ 7 ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷ್ಣಕುಮಾರ್, ಅಪ್ರೋಜ್, ರಾಜ್ ಪ್ರಕಾಶ್ ರೆಡ್ಡಿ, ಅಶೋಕ್ ಕುಮಾರ್, ಮೊಹಮದ್ ಯೂಸುಫ್, ಚಕ್ರಪಾಣಿ, ಫಾರೂಕ್, ರೆಹಮಾನ್ ಖಾನ್, ಖಾದರ್, ಮೊಹಮದ್ ಮುಹಿನ್, ಜಗದೀಶ್, ಶಂಕರ್, ಜಯಪ್ರಕಾಶ್, ರಾಜು, ಪ್ರಭು, ಚಂದ್ ಪಾಶಾ, ಕುಮಾರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರೆಯನ್ನು ನರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ.












Click it and Unblock the Notifications