HSRP Number Plates: ಎಲೆಕ್ಟ್ರಿಕ್ ಬೈಕ್‌ಗಳಿಗೂ ಬರಲಿದ್ಯಾ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್!?
ಬೆಂಗಳೂರು, ಏಪ್ರಿಲ್. 01: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ಕಡಿಮೆ ಏನಿಲ್ಲ. ಅದರಲ್ಲೂ ಬೈಕ್‌ಗಳ ಸಂಖ್ಯೆ ವಿಪರೀತವಾಗುತ್ತಿದೆ. ಅಪಘಾತಗಳು, ಸರಗಳ್ಳತನ, ಕಳ್ಳತನಗಳಲ್ಲಿ ಮುಖ್ಯವಾಗಿ ಕೇಳಿಬರುವುದೇ ದ್ವಿಚಕ್ರವಾಹನಗಳ ಹೆಸರುಗಳು. ಸರಗಳ್ಳತನ ಅಂದರೆನೇ ಬೈಕ್‌ನಲ್ಲಿ ಬರುವವರು ಎನ್ನುವಂತಾಗಿದೆ.
ಹೀಗಿರುವಾಗ ಬೈಕ್‌ಗಳಿಗೆ ನಂಬರ್ ಪ್ಲೇಟ್ ಇಲ್ಲ ಎಂದರೆ ಕಳ್ಳಕಾಕರಿಗೆ ಎಷ್ಟು ಉಪಯೋಗ ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಚೈನ್ ಸ್ನ್ಯಾಚಿಂಗ್ ಮತ್ತು ಕಳ್ಳತನದಂತಹ ಅಪರಾಧಗಳನ್ನು ತಡೆಯಲು ಸರ್ಕಾರ ಎಲ್ಲಾ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಕಡ್ಡಾಯಗೊಳಿಸಿದೆ. ಆದರೆ, ಇದು ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅನ್ವಯವಾಗುವುದಿಲ್ಲ.

ಇ-ಬೈಕ್‌ಗಳಿಗೆ ಇಲ್ಲ ನಂಬರ್ ಪ್ಲೇಟ್- ಆತಂಕದಲ್ಲಿ ಪೊಲೀಸರು!
ಕೆಲವು ಇ- ಬೈಕ್‌ಗಳು ನಂಬರ್ ಪ್ಲೇಟ್ ಹಾಕಿಸುವ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದನ್ನೇ ನೆಪ ಮಾಡಿಕೊಂಡು ಇ-ಬೈಕ್‌ಗಳು ಆಗಾಗ್ಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಘಟನೆಗಳು ನಡೆಯುತ್ತಲೆ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಸಂಚಾರ ಪೊಲೀಸರು ಸರ್ಕಾರಕ್ಕೆ ಪತ್ರ ಬರೆದಿದ್ದು, ಇ-ಸ್ಕೂಟರ್‌ಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ನಂಬರ್ ಪ್ಲೇಟ್‌ಗಳನ್ನು ಹಾಕಿಸಬೇಕು ಅಥವಾ ಅವುಗಳಿಗೆ ಆದ ಕೆಲವು ನಿರ್ದಿಷ್ಟ ನಿಯಮಗಳು ಇರುಬೇಕು ಎಂದು ಪೂರ್ವ ವಲಯದ ಡಿಸಿಪಿ (ಸಂಚಾರ) ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳ ಪ್ರಕಾರ (CMVR), 250 ವ್ಯಾಟ್‌ಗಳಿಗಿಂತ ಕಡಿಮೆ ವಿದ್ಯುತ್ ಉತ್ಪಾದನೆಯನ್ನು ಹೊಂದಿರುವ ಮತ್ತು 30 km/ph ಗಿಂತ ಹೆಚ್ಚಿನ ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಎಲೆಕ್ಟ್ರಿಕ್ ಸ್ಕೂಟರ್ ವರ್ಗಗಳ ಅಡಿಯಲ್ಲಿ ಬರುತ್ತವೆ ಎಂದಿದ್ದಾರೆ.

ಈ ವಾಹನಗಳನ್ನು ಬಳಸಲು ಲೈಸೆನ್ಸ್, ಹೆಲ್ಮೆಟ್ ಅಥವಾ ನಂಬರ್ ಪ್ಲೇಟ್‌ಗಳ ಅಗತ್ಯವಿಲ್ಲ. ಇಷ್ಟೇ ಅಲ್ಲದೆ ಅವುಗಳನ್ನು ಆರ್‌ಟಿಒ ಅಡಿಯಲ್ಲಿ ನೋಂದಾಯಿಸಬೇಕಿಲ್ಲ. ಹೆಚ್ಚಾಗಿ ಡೆಲಿವರಿ ಏಜೆಂಟ್‌ಗಳು ಇವುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇ-ಸ್ಕೂಟರ್‌ಗಳಿಗೆ ಹೆಲ್ಮೆಟ್ ಧರಿಸಲು, ಸಂಚಾರ ನಿಯಮಗಳನ್ನು ಅನುಸರಿಸಲು ಮತ್ತು ಪುಟ್‌ಪಾತ್‌ಗಳ ಗಾಡಿ ಓಡಿಸದಂತೆ ಜಾರಿ ಅಧಿಕಾರಿಗಳು ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಈ ಇ-ಸ್ಕೂಟರ್‌ಗಳು ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೆ, ಅವುಗಳಿಗೆ ನಂಬರ್ ಪ್ಲೇಟ್ ಇಲ್ಲದಿರುವುದರಿಂದ ಅವುಗಳನ್ನು ಗುರುತಿಸಲು ಆಗುವುದಿಲ್ಲ. ಈ ವಾಹನಗಳು ಮೋಟಾರು ವಾಹನ ನಿಯಮಗಳು ಅಥವಾ ಸಂಚಾರ ನಿಯಮಗಳ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ ದಂಡ ವಿಧಿಸಲಾಗುತ್ತಿಲ್ಲ. ಹೀಗಾಗಿ ಸರ್ಕಾರವು ಈ ವಾಹನಗಳನ್ನು ಇ-ಸ್ಕೂಟರ್‌ಗಳೆಂದು ಪರಿಗಣಿಸಿದ್ದರೂ, ಅವುಗಳಿಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿಗಳನ್ನು ತರುವ ಅಗತ್ಯವಿದೆ ಎಂದು ಟ್ರಾಫಿಕ್ ಪೊಲೀಸರು ಅಭಿಪ್ರಾಯ ಪಡುತ್ತಾರೆ.
ಸಾಮಾನ್ಯ ಸೈಕಲ್‌ಗಳಂತೆ ಇ-ಸ್ಕೂಟರ್‌ಗಳಿಗೆ ನಂಬರ್ ಪ್ಲೇಟ್‌ಗಳ ಅಗತ್ಯವಿರುವುದಿಲ್ಲ. ಆದರೂ ಸವಾರರು ಸಂಚಾರ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ . ನಂಬರ್ ಪ್ಲೇಟ್ ಇಲ್ಲದೆ ಕಾರ್ಯನಿರ್ವಹಿಸುವುದು ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಕಾನೂನುಬಾಹಿರ ಎಂಬುದನ್ನು ತಿಳಿದಿರುವುದು ಕಡ್ಡಾಯವಾಗಿದೆ. ಸರ್ಕಾರವು ಇ-ಸ್ಕೂಟರ್‌ಗಳನ್ನು ನಿಷೇಧಿಸಲು ಚಿಂತಿಸುತ್ತಿದೆ. ಈ ವಾಹನಗಳು ವಿಶೇಷ ಗುರುತುಗಳನ್ನು (unique identifiers) ಹೊಂದಿದ್ದರೂ, ಅವುಗಳನ್ನು ಟ್ರ್ಯಾಕ್ ಮಾಡುವುದು ಒಂದು ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.












Click it and Unblock the Notifications