ವ್ಹೀಲಿಂಗ್ ಮಾಡುವ ಪುಂಡರ ಹೆಡೆಮುರಿ ಕಟ್ಟುತ್ತಿರುವ ಪೊಲೀಸರು: 6 ಮಂದಿ ಬಂಧನ

ಬೆಂಗಳೂರು, ಜೂನ್ 30: ಬೆಂಗಳೂರು ನಗರದ ಹಲವು ಕಡೆಗಳಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಇಂತಹ ಪುಂಡರ ಹೆಡೆಮುರಿ ಕಟ್ಟಲು ಆರಂಭಿಸಿದ್ದಾರೆ. ಬೆಂಗಳೂರು ನಗರ ಸಂಚಾರ ಪೊಲೀಸರ ಪಶ್ಚಿಮ ವಿಭಾಗದ ವಿಶೇಷ ತಂಡ ಪ್ರತ್ಯೇಕ ಪ್ರಕರಣಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರು ಪುಂಡರನ್ನು ಬಂಧಿಸಿದೆ.

ಬೆಂಗಳೂರು ಪಶ್ಚಿಮ ಭಾಗದಲ್ಲಿ ವೀಲಿಂಗ್ ಪ್ರಕರಣಗಳ ತನಿಖೆಗಾಗಿ ವಿವಿಧ ಠಾಣೆಗಳ ಎಂಟು ಸದಸ್ಯರನ್ನು ಒಳಗೊಂಡ ತಂಡವನ್ನು ಜೂನ್ 20 ರಂದು ರಚನೆ ಮಾಡಲಾಗಿದೆ. ವ್ಹೀಲಿಂಗ್ ಮಾಡುವ ಪುಂಡರನ್ನು ಮಟ್ಟ ಹಾಕಲು ಈ ತಂಡ ಕೆಲಸ ಮಾಡಲಿದೆ.

Police Crack Down on Reckless Wheelie

ಮಾಗಡಿ ರಸ್ತೆ ಸಂಚಾರ ನಿರೀಕ್ಷಕರ ನೇತೃತ್ವದಲ್ಲಿ ತಂಡವು ಸ್ಥಳೀಯ ದೂರುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದ ಎಚ್ಚರಿಕೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತದೆ. ವ್ಹೀಲಿಂಗ್ ಮಾಡುವುದರಿಂದ ಹೆದ್ದಾರಿಗಳು ಮತ್ತು ಇತರ ಜನನಿಬಿಡ ರಸ್ತೆಗಳಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಲಾಗುತ್ತದೆ.

ಒಂಬತ್ತು ದಿನದಲ್ಲಿ ಆರು ಪ್ರಕರಣ ದಾಖಲು

ವಿಶೇಷ ತಂಡ ಕಾರ್ಯಾಚರಣೆಗೆ ಇಳಿದ 9 ದಿನಗಳಲ್ಲಿ ಆರು ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿದೆ. ಹೆಚ್ಚಿನ ತನಿಖೆಗಾಗಿ ಮೂರು ಪ್ರಕರಣಗಳನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರಿಗೆ, ಎರಡು ವಿಜಯನಗರಕ್ಕೆ ಮತ್ತು ಒಂದು ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

"ವಾಹನಗಳಲ್ಲಿ ಯಾವುದೇ ಮಾರ್ಪಾಡುಗಳನ್ನು ಗುರುತಿಸಿದರೆ, ಸಂಪೂರ್ಣ ತಪಾಸಣೆ ನಡೆಸಿದ ನಂತರ ವಾಹನ ನೋಂದಣಿಯನ್ನು ರದ್ದುಗೊಳಿಸಲು ನಾವು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗೆ ತಿಳಿಸುತ್ತೇವೆ. ಚಾಲನಾ ಪರವಾನಗಿಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುತ್ತದೆ." ಎಂದು ವಿಶೇಷ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿಹೆಚ್ ವರದಿ ಮಾಡಿದೆ.

ವೀಲಿಂಗ್ ಮಾಡುವ ಪುಂಡರು ಪದೇ ಪದೇ ವೀಲಿಂಗ್ ಮಾಡುವ ರಸ್ತೆಗಳು, ಸ್ಥಳಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವಿಡಿಯೋಗಳನ್ನು ವಿಶೇಷ ತಂಡ ಸೂಕ್ಷ್ಮವಾಗಿ ಗಮನಿಸುತ್ತದೆ.

ವೀಲಿಂಗ್ ಮಾಡುವುದು ಗಂಭೀರ ಅಪರಾಧ

ಭಾರತೀಯ ಮೋಟಾರು ವಾಹನಗಳ (IMV) ಕಾಯಿದೆಯ IPC ಸೆಕ್ಷನ್ 279 (ಸಾರ್ವಜನಿಕ ರೀತಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು ಸೆಕ್ಷನ್ 189 (ರೇಸಿಂಗ್ ಮತ್ತು ವೇಗದ ಪ್ರಯೋಗಗಳಿಗೆ ಶಿಕ್ಷೆ) ಅಡಿಯಲ್ಲಿ ವೀಲಿಂಗ್ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ವೀಲಿಂಗ್ ಮಾಡುವವರ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇರುವುದು ಕಂಡುಬಂದರೆ ಅಥವಾ ಹೆಲ್ಮೆಟ್ ಧರಿಸದೇ ಇದ್ದರೆ, ಅವರು ಹೆಚ್ಚುವರಿಯಾಗಿ ಐಎಂವಿ ಯ ಸೆಕ್ಷನ್ 3(1) r/w 181 ಅಥವಾ 129 ರ ಅಡಿಯಲ್ಲಿ ಆರೋಪಗಳನ್ನು ಎದುರಿಸಬೇಕಾಗುತ್ತದೆ.

ಅಪಘಾತಗಳಿಗೆ ಕಾರಣ

ಗುರುವಾರವಷ್ಟೇ ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರದ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರೂ ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು, ಮೈಸೂರು ಹೊರವಲಯದ ರಸ್ತೆಗಳಲ್ಲಿ ಅನೇಕ ಪುಂಡರು ಮಾರಕಾಸ್ತ್ರಗಳನ್ನು ಹಿಡಿದು ವೀಲಿಂಗ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಇಂತ ಪುಂಡರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+