ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ, ಇಬ್ಬರ ಬಂಧನ, 4 ಯುವತಿಯರ ರಕ್ಷಣೆ

ಬೆಂಗಳೂರು, ಜೂನ್ 22: ನಗರದ ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಕಮ್ಮನಹಳ್ಳಿಯಲ್ಲಿ 'ಸ್ಪಾ' ನಡೆಸಲು ಅನುಮತಿ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

'ಸ್ಯಾಫ್ರಾನ್ ಸಲೂನ್ ಮತ್ತು ಥಾಯ್ ಸ್ಪಾ' ಹೆಸರಿನಲ್ಲಿ ಅಧಿಕೃತವಾಗಿ 'ಸ್ಪಾ' ನಡೆಸಲು ಪರವಾನಗಿ ಪಡೆದು ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Police busted prostitution racket in Bengaluru, 2 arrested, 4 girls rescued

'ಬಾಡಿ ಟು ಬಾಡಿ ಮಸಾಜ್', 'ಹ್ಯಾಪಿ ಎಂಡಿಂಗ್', 'ಹ್ಯಾಂಡ್‍ಜಾಬ್' ಎಂಬಿತ್ಯಾದಿ ಮಸಾಜ್‍ಗಳ ಮೂಲಕ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಶಿವಮಲ್ಲಪ್ಪ, ಹರೀಶ್ ಎಂಬವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಅಂಕಲ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.

ಇನ್ನು ಲೈಂಗಿಕ ಚಟವಟಿಕೆಯಲ್ಲಿ ತೊಡಗಿಸಿದ್ದ 4 ಜನ ಯುವತಿಯರನ್ನು ವೇಶ್ಯಾವಾಟಿಕೆಯಿಂದ ರಕ್ಷಣೆ ಮಾಡಲಾಗಿದೆ.

ಆರೋಪಿಗಳಿಂದ ರೂ. 3000 ನಗದು, 3 ಮೊಬೈಲ್ ಫೋನ್, ಒಂದು ಸ್ವೈಪಿಂಗ್ ಮೆಷಿನ್, ಕಾಂಡೋಮುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+