Bengaluru-Belagavi Vande Bharat: ಬೆಂಗಳೂರು-ಬೆಳಗಾವಿ ವಂದೇ ಭಾರತ್‌ಗೆ ಚಾಲನೆ: ಟಿಕೆಟ್ ದರ, ಮಾರ್ಗಗಳು, ವೇಳಾಪಟ್ಟಿ
Bengaluru-Belagavi Vande Bharat Express: ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 10) ಚಾಲನೆ ನೀಡದರು. ಹಾಗಾದ್ರೆ ಈ ರೈಲು ಯಾವೆಲ್ಲಾ ಮಾರ್ಗಗಳಲ್ಲಿ ಸಂಚರಿಸಲಿದೆ? ಸಮಯಗಳು ಹಾಗೂ ದರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಹಾಗಾದ್ರೆ ಇದು ಯಾವೆಲ್ಲಾ ಮಾರ್ಗಗಳಲ್ಲಿ ಸಂಚರಿಸಲಿದೆ ಹಾಗೂ ಟಿಕೆಟ್ ದರ ಎಷ್ಟಿರಲಿದ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್‌ಆರ್ ರೇಲ್ವೇ ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್ ಮೂಲಕ ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ , ನಾಗಪುರ (ಅಜ್ನಿ)- ಪುಣೆ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಇನ್ನು ಬಹುದಿನಗಳ ಕನಸಾಗಿದ್ದ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಕೊನೆಗೂ ಚಾಲನೆ ಸಿಕ್ಕಂತಾಗಿದ್ದು, ಇದು ಆಗಸ್ಟ್ 11ರ ಸೋಮವಾರದಿಂದ ನಿಯಮಿತವಾಗಿ ಸಂಚಾರ ಆರಂಭ ಆರಂಭಿಸಲಿದೆ.
ಯಾವಾಗಿನಿಂದ ಸಂಚಾರ ಆರಂಭ?: ಆಗಸ್ಟ್ 11ರ ಸೋಮವಾರದಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಆರಂಭ ಆಗಲಿದೆ. ಬೆಳಗಾವಿ -ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26751) ರೈಲು ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಬಿಡಲಿದ್ದು, ಮಧ್ಯಾಹ್ನ 1:50ಕ್ಕೆ ಬೆಂಗಳೂರಿಗೆ ಬರಲಿದೆ.
* ಬಳಿಕ ಬೆಂಗಳೂರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2:20ಕ್ಕೆ ಹೊರಡುವ ರೈಲು (26752), ರಾತ್ರಿ 10:40 ಗಂಟೆಗೆ ಬೆಳಗಾವಿಗೆ ಮುಟ್ಟಲಿದೆ. ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚಾರ ಮಾಡಲಿದೆ.
ಬೆಳಗಾವಿ-ಬೆಂಗಳೂರು ವಂದೇ ಭಾರತ್ ಎಲ್ಲೆಲ್ಲಿ ನಿಲುಗಡೆ?
* ಧಾರವಾಡ
* ಹುಬ್ಬಳ್ಳಿ
* ಹಾವೇರಿ
* ದಾವಣಗೆರೆ
* ತುಮಕೂರು
* ಯಶವಂತಪುರ
ಸಮಯಗಳ ವಿವರ: ಬೆಳಗಾವಿಯಿಂದ ಬೆಳಗ್ಗೆ ಬೆಳಗ್ಗೆ 5:20ಕ್ಕೆ ಸಂಚಾರ ಶುರು ಮಾಡಲಿದೆ. ಧಾರವಾಡ ಬೆಳಗ್ಗೆ 7:8, ಹುಬ್ಬಳ್ಳಿ ಬೆಳಿಗ್ಗೆ 7:30, ಹಾವೇರಿ ಬೆಳಗ್ಗೆ 8:35, ದಾವಣಗೆರೆ ಬೆಳಗ್ಗೆ 9:25, ತುಮಕೂರು ಮಧ್ಯಾಹ್ನ 12:15, ಯಶವಂತಪುರ ಮಧ್ಯಾಹ್ನ 1:3ಕ್ಕೆ ಬಿಡಲಿದ್ದು, ಬೆಂಗಳೂರು ಕೆಎಸ್‌ಆರ್‌ಗೆ ಮಧ್ಯಾಹ್ನ 1:50ಕ್ಕೆ ಬರಲಿದೆ.
ಬಳಿಕ ಬೆಂಗಳೂರು ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 2:20ಕ್ಕೆ ಸಂಚಾರ ಶುರು ಮಾಡಲಿದೆ. ಅಲ್ಲಿಂದ ಯಶವಂತಪುರ ಮಧ್ಯಾಹ್ನ ಮಧ್ಯಾಹ್ನ 2:28, ತುಮಕೂರು ಮಧ್ಯಾಹ್ನ 3:3, ದಾವಣಗೆರೆ ಸಂಜೆ 5:48, ಹಾವೇರಿ ಸಂಜೆ 6:48, ಹುಬ್ಬಳ್ಳಿ ರಾತ್ರಿ 8,
ಧಾರವಾಡಕ್ಕೆ ರಾತ್ರಿ 8:25 ಬರಲಿದ್ದು, ಅಲ್ಲಿಂದ ಬೆಳಗಾವಿ ರಾತ್ರಿ 10:40ಕ್ಕೆ ಬಂದು ತಲುಪಲಿದೆ. ಈ ರೈಲು 8 ಗಂಟೆ 50 ನಿಮಿಷಗಳಲ್ಲಿ 611 ಕಿಲೋ ಮೀಟರ್ ದೂರ ಕ್ರಮಿಸಲಿದೆ.
ಟಿಕೆಟ್ ದರಗಳ ವಿವರ
* ಬೆಂಗಳೂರು - ಬೆಳಗಾವಿಗೆ 1,118 ರೂಪಾಯಿ (ಚೇರ್‌ಕಾರ್), ಎಕ್ಸಿಕ್ಯೂಟಿವ್ ಚೇರ್‌ಕಾರ್ 2279 ರೂಪಾಯಿ
* ಬೆಂಗಳೂರು - ಧಾರವಾಡಕ್ಕೆ ಚೇರ್‌ಕಾರ್ 914 ರೂಪಾಯಿ ಇದ್ದರೆ, ಎಕ್ಸಿಕ್ಯೂಟಿವ್ ಚೇರ್‌ಕಾರ್ 1,863 ರೂಪಾಯಿ
* ಬೆಂಗಳೂರು - ಹುಬ್ಬಳ್ಳಿ ಚೇರ್‌ಕಾರ್ 885 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್ 1,802 ರೂಪಾಯಿ
* ಬೆಂಗಳೂರು - ಹಾವೇರಿ ಚೇರ್‌ಕಾರ್ 778 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್ 1,588 ರೂಪಾಯಿ
* ಬೆಂಗಳೂರು - ದಾವಣಗೆರೆ ಚೇರ್‌ಕಾರ್ 676 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್ 1,379 ರೂಪಾಯಿ
* ಬೆಂಗಳೂರು - ತುಮಕೂರು ಚೇರ್‌ಕಾರ್ 298 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್ 615 ರೂಪಾಯಿ
* ಬೆಂಗಳೂರು - ಯಶವಂತಪುರ ಚೇರ್‌ಕಾರ್ 242 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್‌ಕಾರ್ 503 ರೂಪಾಯಿ
ವಂದೇ ಭಾರತ್ ರೈಲು ಎಕ್ಸ್‌ಪ್ರೆಸ್ ದೇಶದ ಜನರ ಮನಗೆದ್ದ ಹೈಷಾರಾಮಿ ರೈಲಾಗಿದೆ. ಇದಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಮಾರ್ಗಗಳಲ್ಲಿ ಬಿಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಇದೀಗ ಕೊನೆಗೂ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ಸಿಕ್ಕಿದ್ದು ಹೊಸ ಕ್ರಾಂತಿಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುತ್ತಿದ್ದು, ಇದು 11ನೇಯದ್ದಾಗಿದೆ.












Click it and Unblock the Notifications