Namma Metro: 5 ನಮ್ಮ ಮೆಟ್ರೋ ನಿಲ್ದಾಣಕ್ಕೆ ಪ್ಲಾಟಿನಂ ರೇಟಿಂಗ್ ಗರಿ

ಬೆಂಗಳೂರು, ಏಪ್ರಿಲ್ 01: ನಮ್ಮ ಮೆಟ್ರೋ ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿಯಾಗಿ ಬದಲಾಗುತ್ತಿದೆ. ಪ್ರಸ್ತುತ ಎರಡು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿದ್ದು, 77 ಕಿ. ಮೀ. ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ 8 ಲಕ್ಷಕ್ಕೂ ಅಧಿಕ ಜನರು ಮೆಟ್ರೋ ರೈಲಿನಲ್ಲಿ ಸಂಚಾರವನ್ನು ಮಾಡುತ್ತಿದ್ದಾರೆ. 18 ಕಿ. ಮೀ. ಹಳದಿ ಮಾರ್ಗ ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ನಿಲ್ದಾಣಗಳ ಕುರಿತು ಅಪ್‌ಡೇಟ್ ಒಂದನ್ನು ನೀಡಿದೆ. ನಮ್ಮ ಮೆಟ್ರೋದ ರೀಚ್-4ಬಿ ಯೋಜನೆಯ 5 ನಿಲ್ದಾಣಗಳು ಈಗ ಐಜಿಬಿಸಿ ಪ್ಲಾಟಿನಂ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಯಾವ-ಯಾವ ನಿಲ್ದಾಣಗಳು ಎಂದು ಮಾಹಿತಿಯನ್ನು ಕೊಟ್ಟಿದೆ.

Platinum Ratings For Five Namma Metro Stations List

ಯಾವ-ಯಾವ ನಿಲ್ದಾಣಗಳು?; ಬಿಎಂಆರ್‌ಸಿಎಲ್ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ನಿಂದ ವೇಗವಾದ ಸಾಮೂಹಿಕ ಸಾರಿಗೆ ವ್ಯವಸ್ಥೆಯ (ಎಂಆರ್‌ಟಿಸಿ) ಎತ್ತರಿಸಿದ ಮೆಟ್ರೋ ನಿಲ್ದಾಣಗಳ ವಿಭಾಗದಲ್ಲಿ ರೀಚ್-4ಬಿ 5 ನಿಲ್ದಾಣಗಳಿಗೆ ಹಸಿರು ಕಟ್ಟಡಗಳಿಗೆ ನೀಡುವ ಪ್ರತಿಷ್ಠಿತ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಹೇಳಿದೆ.

ಪ್ಲಾಟಿನಂ ರೇಟಿಂಗ್ ಪಡೆದ ನಿಲ್ದಾಣಗಳು ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ರೇಷ್ಮೆ ಸಂಸ್ಥೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಸಂಸ್ಥೆಯು ಹಸಿರು ಕಟ್ಟಡಗಳಿಗೆ ನೀಡುವ ಪ್ರಮುಖ ಪ್ರಮಾಣೀಕರಣ ಸಂಸ್ಥೆಯಾಗಿದೆ. ಈ ಸಂಸ್ಥೆಯಿಂದ ಪಡೆಯುವ ಪ್ರಮಾಣೀಕರಣವು ಪ್ರತಿಷ್ಠಿತ ಮನ್ನಣೆಯಾಗಿದೆ.

ಇದನ್ನು ವಿವಿಧ ನಿಯತಾಂಕಗಳಲ್ಲಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಕಟ್ಟಡಗಳು ಮತ್ತು ಮೂಲಸೌಕರ್ಯ ಯೋಜನೆಗಳಾದ ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿಗಳು, ನವೀಕರಿಸಬಹುದಾದ ಶಕ್ತಿಯ ಬಳಕೆ ಮತ್ತು ವರ್ಧಿತ ಒಳಾಂಗಣ ಪರಿಸರ ಗುಣಮಟ್ಟಗಳನ್ನು ಪ್ರಮಾಣೀಕರಿಸುತ್ತದೆ.

ಬಿಎಂಆರ್‌ಸಿಎಲ್ ಸದರಿ ನಿಲ್ದಾಣಗಳಲ್ಲಿ ಹಲವಾರು ಸುಸ್ಥಿರ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಇಂಧನ ಬಳಕೆ ಮತ್ತು ಹವಾನಿಯಂತ್ರಣ ವ್ಯವಸ್ಥೆಗಳ ಸ್ಥಾಪನೆ, ನಿಲ್ದಾಣ ಕಾರ್ಯಾಚರಣೆಗಳಿಗೆ ಸೌರಶಕ್ತಿಯ ಬಳಕೆ, ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಗಳು, ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳ ಸಂಯೋಜನೆ ಇತ್ಯಾದಿಗಳು ಇದರಲ್ಲಿ ಒಳಗೊಂಡಿದೆ.

ಈ ಸಾಧನೆಯು ತನ್ನ ಎಲ್ಲಾ ಮೆಟ್ರೋ ಕಾರಿಡಾರ್‌ಗಳ ನಿರ್ಮಾಣ ಮತ್ತು ಕಾರ್ಯಾಚರಣೆಗಳಲ್ಲಿ ಹಸಿರು ಕಟ್ಟಡ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಿಎಂಆರ್‌ಸಿಎಲ್‌ನ ದೊಡ್ಡ ದೃಷ್ಟಿಕೋನದ ಭಾಗವಾಗಿದೆ ಎಂದು ಹೇಳಿದೆ.

ಸದ್ಯ ನಮ್ಮ ಮೆಟ್ರೋ ಸೇವೆಗಳು 77 ಕಿ. ಮೀ. ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್ 43.49 ಕಿ. ಮೀ. ಪೂರ್ವದಲ್ಲಿ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ಪ್ರಾರಂಭವಾಗಿ ಪಶ್ಚಿಮದಲ್ಲಿ ಚಲ್ಲಘಟ್ಟ ಟರ್ಮಿನಲ್‌ನಲ್ಲಿ ಅಂತ್ಯವಾಗುತ್ತದೆ.

ಉತ್ತರ-ದಕ್ಷಿಣ ಕಾರಿಡಾರ್ ನಮ್ಮ ಮೆಟ್ರೋ ಮಾರ್ಗ 33.5 ಕಿ. ಮೀ. ಇದೆ. ಉತ್ತರದಲ್ಲಿ ಮಾದಾವರದಲ್ಲಿ ರೈಲು ಸಂಚಾರ ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ (ರೇಷ್ಮೆ ಸಂಸ್ಥೆ) ತನಕ ರೈಲು ಸಂಚಾರವಿದೆ.

Take a Poll

ಇನ್ನು ಈ ವರ್ಷದ ಮೇ ತಿಂಗಳ ಅಂತ್ಯದಲ್ಲಿ ಬಹು ನಿರೀಕ್ಷಿತ ಮತ್ತು ಸುಮಾರು 3 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ಅಂದಾಜಿಸಲಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ.

ಈ ಮಾರ್ಗ 18.8 ಕಿ. ಮೀ. ಉದ್ದದವಾಗಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. ಈಗಾಗಲೇ ಈ ಮಾರ್ಗದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ಚಾಲಕರಹಿತ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+