ನಮ್ಮ ಮೆಟ್ರೋದ ಕೊಳೆ ತೊಳೆದು ಬಣ್ಣ ಬಳಿದ 'ಅಗ್ಲಿ ಇಂಡಿಯನ್'

Recommended Video

      ನಮ್ಮ ಮೆಟ್ರೋದ ಕೊಳೆ ತೊಳೆದು ಬಣ್ಣ ಬಳಿದ 'ಅಗ್ಲಿ ಇಂಡಿಯನ್' | Oneindia Kannada

      ಬೆಂಗಳೂರು, ಫೆಬ್ರವರಿ 26 : ವಿವಿಧ ಕ್ಷೇತ್ರಗಳ ಸ್ವಯಂ ಸೇವಕರನ್ನು ಒಳಗೊಂಡ 'ಅಗ್ಲಿ ಇಂಡಿಯನ್ ' ತಂಡ ನಮ್ಮ ಬನಶಂಕರಿಯ ನಮ್ಮ ಮೆಟ್ರೋ ನಿಲ್ದಾಣವನ್ನು ಸ್ವಚ್ಛಗೊಳಿಸಿ ಮೆಟ್ರೋ ಪಿಲ್ಲರ್ ಗಳ ಮೇಲೆ ಬಣ್ಣ ಬಳಿದು ಕಂಗೊಳಿಸುವಂತೆ ಮಾಡುತ್ತಿದೆ.

      ಅಗ್ಲಿ ಇಂಡಿಯನ್ ತಂಡವು ಕ್ಲೀನ್ ಬೆಂಗಳೂರು ಅಭಿಯಾನದಡಿಯಲ್ಲಿ ಮೆಟ್ರೋ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿದ್ದು, ಈಗಾಗಲೇ ಜೆಪಿನಗ ಮೆಟ್ರೋ ನಿಲ್ದಾಣದಲ್ಲಿ ತಮ್ಮ ಕಾರ್ಯ ಮುಂದುವರೆಸಿದ್ದು ಸೋಮವಾರ ಬನಶಂಕರಿ ಮೆಟ್ರೋ ನಿಲ್ದಾಣವನ್ನು ಶುಚಿಗೊಳಿಸಿ ಪಿಲ್ಲರ್ ಗಳ ಮೇಲೆ ಬಣ್ಣ ಬಳಿಯಲಾಗುತ್ತಿದೆ.

      ಅಗ್ಲಿ ಇಂಡಿಯನ್: ಮೆಟ್ರೋ ಕಂಬಗಳ ತುಂಬಾ ಬಣ್ಣ ಬಣ್ಣದ ಚಿತ್ತಾರ

      ಅಗ್ಲಿ ಇಂಡಿಯನ್ ನ ಸುಮಾರು 30 ರಿಂದ 40 ಕಾರ್ಯಕರ್ತರು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಶಾಲೆ, ಕಾಲೇಜುಗಳು, ಬಸ್ ನಿಲ್ದಾಣ, ಸ್ಕೈವಾಕ್, ಅಂಡರ್ ಪಾಸ್, ಫ್ಲೈ ಓವರ್ ಕೆಳಗೆ ಹೀಗೆ ಎಲ್ಲೆಲ್ಲಿ ತ್ಯಾಜ್ಯ ತುಂಬಿಕೊಂಡು ನಗರದ ಅಂದಗೆಡಿಸಿರುತ್ತವೆಯೋ ಅಲ್ಲಲ್ಲಿ ಅಗ್ಲಿ ಇಂಡಿಯನ್ ತಂಡ ಧಾವಿಸಿ ಸ್ವಚ್ಛತಾ ಕೆಲಸವನ್ನು ಕೈಗೊಳ್ಳುತ್ತಾರೆ.

      Pick up a brush and paint those metro pillars

      ಅಗ್ಲಿ ಇಂಡಿಯನ್ ಎನ್ನುವುದು ಒಂದು ಪೇಸ್ ಬುಕ್ ಗ್ರೂಪ್ ಆಗಿದ್ದು, ನಗರದ ಸ್ವಚ್ಛತೆಯನ್ನು ಕಾಪಾಡುವ ಕುರಿತು ಪಣ ತೊಡುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ನಂತರ ಪ್ರತಿಯೊಂದು ಅಭಿಯಾನದಲ್ಲೂ ಮಾಹಿತಿಯನ್ನು ರವಾನಿಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+