ಅನಂತ ಕುಮಾರ್-ವಿಜಯ್ ಕುಮಾರ್: ಕುಮಾರಧ್ವಯರ ಕಾಡುವ ಚಿತ್ರ

ಬೆಂಗಳೂರು, ನವೆಂಬರ್ 13: ಜಯನಗರ ಸುತ್ತಮುತ್ತ ಈ ಕುಮಾರಧ್ವಯರು ಎರಡು ತಾರೆಗಳಂತಿದ್ದರು. ಪಕ್ಷ, ಜಾತಿ, ಸಮುದಾಯಗಳನ್ನು ಮೀರಿ ಇಬ್ಬರೂ ಜನರಿಗೆ ಹತ್ತಿರವಾಗಿದ್ದರು. ಆದರೆ, ಈ ಎರಡೂ ತಾರೆಗಳು ಕೆಲವೇ ತಿಂಗಳ ಅಂತರದಲ್ಲಿ ಮರೆಯಾಗಿವೆ.

ಜಯನಗರದ ಶಾಸಕರಾಗಿದ್ದ ಬಿ.ಎನ್. ವಿಜಯ್ ಕುಮಾರ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶಿಷ್ಟ ವರ್ಚಸ್ಸು ಬೆಳೆಸಿಕೊಂಡಿದ್ದರು. ಜಯನಗರ ಒಳಗೊಂಡ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅನಂತ ಕುಮಾರ್ ಅವರದ್ದೇ ಬಹುದೊಡ್ಡ ಪ್ರಭಾವಳಿ. ಈಗ ಈ ಎರಡೂ ಪ್ರಭಾವಳಿಗಳನ್ನು ಕಳೆದುಕೊಂಡು ಬಿಜೆಪಿ ಮಸುಕಾಗಿದೆ.

ಅನಂತ್ ಕುಮಾರ್ ಮತ್ತು ವಿಜಯ್ ಕುಮಾರ್ ಒಟ್ಟಿಗೆ ಸೈಕಲ್ ತುಳಿದುಕೊಂಡು ನಗುತ್ತಾ ಸಾಗುವ ಚಿತ್ರ ಈಗ ಎಲ್ಲೆಡೆ ಹರಿದಾಡುತ್ತಿದೆ. ಆ ಚಿತ್ರದಲ್ಲಿ ಕಾಣಿಸುತ್ತಿದ್ದ ಇಬ್ಬರ ನಗು, ಹುಮ್ಮಸ್ಸು ಈಗ ಎಲ್ಲರ ಹೃದಯವನ್ನು ಕಲಕುತ್ತಿದೆ.

photograph of demised ananth kumar and vijay kumar riding cycle making emotional

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ವಿಜಯ್ ಕುಮಾರ್ ಮೇ 4ರಂದು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಚುನಾವಣೆ ಪ್ರಚಾರದ ವೇಳೆ ಕುಸಿದುಬಿದ್ದಿದ್ದ ಅವರು ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈಗ ಅನಂತ ಕುಮಾರ್ ಕೂಡ ವಿಧಿವಶರಾಗಿದ್ದಾರೆ. ಜಯನಗರದ ಇಬ್ಬರು ಕುಮಾರರೂ ಈಗ ಇಲ್ಲ. ಆದರೆ, ಇಬ್ಬರೂ ನಗುತ್ತಾ ಬೈಸಿಕಲ್ ಓಡಿಸುತ್ತಿರುವ ಚಿತ್ರ ಜನಮಾನಸದಲ್ಲಿ ಹಾಗೆಯೇ ಉಳಿಯಲಿದೆ, ಇಬ್ಬರು ನಾಯಕರ ಅಗಲುವಿಕೆಯ ನೋವು ಕೂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+