PG Rent: ಬೆಂಗಳೂರಿನಲ್ಲಿ ಪಿಜಿ ಬಾಡಿಗೆ ದರ ಏರಿಕೆಗೆ ನಿರ್ಧಾರ; ಎಷ್ಟು % ತಿಳಿಯುರಿ

PG Rent: ಈಗಾಗಲೇ ಬೆಂಗಳೂರಿನಲ್ಲಿ ಪಿಜಿ, ಮನೆ ಬಾಡಿಗೆ ದರ ಏರಿಕೆಯಿಂದಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಮತ್ತೆ ಇದೀಗ ಪಿಜಿ ಅಸೋಸಿಯೇಷನ್‌ ಬಾಡಿಗೆ ದರ ಏರಿಕೆ ಮಾಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ಏರಿಕೆ ಮಾಡಲು ಮುಂದಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರು ಇದೀಗ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ನಗರದಲ್ಲಿ ಮನೆ, ಪಿಜಿ ಬಾಡಿಗೆಗಳಂತೂ ಗಗನಕ್ಕೇರುತ್ತಲೇ ಇದೆ. ಈಗಾಗಲೇ ಹಲವು ಬಾರಿ ಪಿಜಿಗಳ ಬಾಡಿಗೆ ದರ ಏರಿಕೆಯಿಂದ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಮತ್ತೆ ಇದೀಗ ದರ ಏರಿಕೆಗೆ ಮುಂದಾಗಿರುವುದರಿಂದ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ಎದುರಾದಂತಾಗಿದೆ. ಮತ್ತೊಂದೆಡೆ ಪಿಜಿ ನಡೆಸುವವರಿಗೆ ದಿನನಿತ್ಯದ ವಸ್ತುಗಳ ದರ ಏರಿಕೆಯಾಗಿವೆ ಎಂದು ಹೇಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

PG rent Hike in Bengaluru Association decision

ನಗರದಲ್ಲಿ ಪ್ರದೇಶವಾರು ಬಾಡಿಗೆ ದರ ವ್ಯತ್ಯಾಸ ಇದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ದರ ಇದೆ. ಇದು ಮೂಲಸೌಕರ್ಯಗಳು, ಜನರಿಗೆ ಬೇಕಾದ ಸಾರಿಗೆ ಸಂಪರ್ಕದ ಮೇಲೆ ಅವಲಂಬನೆಯಾಗಿರುತ್ತಿದೆ. ಪಿಜಿ ಬಾಡಿಗೆ ವಿಚಾರಕ್ಕೆ ಬಂದರೆ ಒಂದೊಂದು ಪಿಜಿಯಲ್ಲಿ ಒಂದೊಂದು ದರ ಇದೆ. ಮತ್ತೆ ಏನಾದರೂ ಏರಿಕೆ ಮಾಡಿದರೆ, ವಿದ್ಯಾರ್ಥಿಗಳು, ಉದ್ಯೂಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಉದ್ಯೋಗ ಅರಸಿ ಬೆಂಗಳೂರಿಗೆ ಪ್ರತಿನಿತ್ಯವೂ ಸಾವಿರಾರು ಮಂದಿ ಬರುತ್ತಾರೆ. ಕೆಲವೇ ಕೆಲವರು ಮಾತ್ರ ಬಾಡಿಗೆ ಮನೆ ಅಥವಾ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ಪೈಕಿ ಬಹುತೇಕ ಮಂದಿ ಸಮಯ ಉಳಿತಾಯ ಮಾಡಲು ಪಿಜಿಗಳಲ್ಲೇ ವಾಸ ಮಾಡುತ್ತಾರೆ. ಇಂತಹವರಿಗೆ ದರ ಏರಿಕೆಯಿಂದ ತುಂಬಾ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಿಜಿ ಅಸೋಸಿಯೇಷನ್ ಇದೀಗ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಪಿಜಿಗಳ ಬಾಡಿಗೆ ದರ ಹೆಚ್ಚಿಸುವುದಕ್ಕೆ ಮುಂದಾಗಿರುವ ಪಿಜಿ ಅಸೋಸಿಯೇಷನ್ ಶೀಘ್ರದಲ್ಲೇ ಪಿಜಿ ಮಾಲೀಕರ ಜೊತೆ ಸಭೆ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ದಿನನಿತ್ಯದ ವಸ್ತುಗಳ ದರ ಏರಿಕೆಯ ಹಿನ್ನೆಲೆ ಪಿಜಿಗಳ ನಿರ್ವಹಣೆಗೆ ಕಷ್ಟ ಆಗುತ್ತಿದೆ ಎಂದು ಮಾಲೀಕರ ಅಳಲಾಗಿದೆ.

ಈಗಾಗಲೇ ಹಲವು ಖಾಸಗಿ ಕಟ್ಟಡಗಳ ಬಾಡಿಗೆ ಹೆಚ್ಚಳ, ನೀರಿನ ದರ ಸೇರಿದಂತೆ ದಿನನಿತ್ಯದ ವಸ್ತುಗಳ ದರ ವಸ್ತುಗಳ ದರಗಳನ್ನು ಏರಿಕೆ ಮಾಡಲಾಗಿದೆ. ಮಹಾಮಾರಿ ಕೊರೊನಾ ಸಂದಭರ್ದಲ್ಲೂ ಕೂಡ ದರ ಏರಿಕೆ ಮಾಡಿರಲಿಲ್ಲ. ಸದ್ಯ ಇದೀದ ಅನಿವಾರ್ಯದಿಂದ ಈ ನಿರ್ಧಾರವನ್ನು ಅಸೋಸಿಯೇಷನ್ ತೆಗೆದುಕೊಂಡಿದೆ. ಅಧಿಕೃತವಾಗಿ ಎಷ್ಟು ದರ ಏರಿಕೆ ಅಂತಾ ಪಿಜಿ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ತಿಳಿಸಲಾಗುತ್ತದೆ. ಆದರೆ ಪಿಜಿ ಅಸೋಸಿಯೇಷನ್ ಈಗಾಗಲೇ ಶೇಕಡ 5ರಷ್ಟು ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+