ಪೀಣ್ಯ ಮೆಟ್ರೋ ರೈಲು ವೇಳಾಪಟ್ಟಿ ಬದಲಾವಣೆ
ಬೆಂಗಳೂರು, ಅ. 13 : ಪೀಣ್ಯ ಇಂಡಸ್ಟ್ರಿ ಮತ್ತು ಜಾಲಹಳ್ಳಿ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಯೋಜನೆಯ ಅಂತಿಮ ಹಂತಹ ಕಾಮಗಾರಿ ನಡೆಯುತ್ತಿರುವುದರಿಂದ ಅ.12ರಿಂದ 25ರವರೆಗೆ ಮೆಟ್ರೋ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಅ.12ರಿಂದ 25ರವರೆಗೆ ಈ ತಾತ್ಕಾಲಿಕ ವೇಳಾಪಟ್ಟಿ ಅನ್ವಯವಾಗುತ್ತದೆ. ಅ.13ರಿಂದ 15ರವರೆಗೆ ಯಶವಂತಪುರ-ಪೀಣ್ಯ ಕೈಗಾರಿಕಾ ವಲಯ ಮಾರ್ಗದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ 15 ನಿಮಿಷಗಳ ಅಂತರದಲ್ಲಿ ರೈಲುಗಳು ಚಲಿಸಲಿವೆ.

ಅ.16 ರಿಂದ 25 ರವರೆಗೆ ಪೀಣ್ಯ ಕೈಗಾರಿಕಾ ವಲಯ-ಸಂಪಿಗೆ ರಸ್ತೆ ನಿಲ್ದಾಣ ಮಾರ್ಗವಾಗಿ 10 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮೆಟ್ರೋ ರೈಲು ಸಂಚರ ನಡೆಸಲಿದೆ. [2015ರ ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ ಸಂಚಾರ]
ಸಂಪಿಗೆ ರಸ್ತೆ ಮತ್ತು ಪೀಣ್ಯ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ನಾಗಸಂದ್ರವರೆಗೆ ವಿಸ್ತರಣೆ ಮಾಡುವ ಕಾಮಗಾರಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, 2015ರ ಫೆಬ್ರವರಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇದೆ.
ಈಗಾಗಲೇ ಸಂಪಿಗೆ ರಸ್ತೆಯಿಂದ ಪೀಣ್ಯದವರೆಗೆ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗಿನ 3.5 ಕಿ.ಮೀ ಉದ್ದದ (ರೀಚ್ 3ಬಿ) ಕಾಮಗಾರಿ ನಡೆಯುತ್ತಿದೆ.












Click it and Unblock the Notifications