ಲಾಲ್ ಬಾಗ್‌ನಲ್ಲಿ ವಾಹನ ನಿಲ್ಲಿಸಲು ಹೆಚ್ಚುವರಿ ಹಣ ಪಾವತಿಸಿ

ಬೆಂಗಳೂರು, ಜೂನ್ 10 : ಲಾಲ್ ಬಾಗ್‌ಗೆ ಭೇಟಿ ನೀಡುವ ಜನರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಇದ್ದರೆ ವಾಹನಗಳ ಪಾರ್ಕಿಂಗ್‌ಗೆ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಸ್ಮಾರ್ಟ್‌ ಪಾರ್ಕಿಂಗ್ ಯೋಜನೆ ಅನ್ವಯ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ.

2019ರ ಏಪ್ರಿಲ್‌ನಲ್ಲಿ ಲಾಲ್ ಬಾಗ್‌ನಲ್ಲಿ ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯ ಜಾರಿಗೆ ತರಲಾಗಿದೆ. ಡಬಲ್‌ ರೋಡ್ ಪ್ರವೇಶ ದ್ವಾರದ ಮೂಲಕ ಆಗಮಿಸುವ ವಾಹನಗಳಿಗಾಗಿಯೇ ಗೇಟ್ ಆಳವಡಿಕೆ ಮಾಡಲಾಗಿದೆ. ಮೂರು ಗಂಟೆಗಳ ಕಾಲ ಜನರು ವಾಹನ ನಿಲ್ಲಿಸಬಹುದು.

ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಪ್ರತಿಗಂಟೆಗೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕು. 15 ದಿನಗಳಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಸಾಫ್ಟ್‌ವೇರ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

Lalbagh

ಪ್ರಸ್ತುತ ಮೂರು ಗಂಟೆಗಳಿಗೆ ಬೈಕ್‌ಗೆ 25, ಕಾರುಗಳಿಗೆ 30, ಮಿನಿ ಬಸ್‌ಗಳಿಗೆ 60, ಬಸ್‌ಗಳಿಗೆ 120 ರೂ. ಶುಲ್ಕವನ್ನು ನಿಗದಿಮಾಡಲಾಗಿದೆ. ಮೂರು ಗಂಟೆಗಳಿಗಿಂತ ಹೆಚ್ಚಿಗೆ ಹೊತ್ತು ವಾಹನ ನಿಲ್ಲಿಸಿದರೆ ಬೈಕ್‌ಗೆ 5, ನಾಲ್ಕು ಚಕ್ರದ ವಾಹನಗಳಿಗೆ 10, ಮಿನಿ ಬಸ್, ಬಸ್‌ಗಳಿಗೆ 20 ರೂ. ಹೆಚ್ಚಿನ ಹಣ ನೀಡಬೇಕಿದೆ.

ಲಾಲ್‌ ಬಾಗ್‌ಗೆ ವಾರದ ದಿನಗಳಲ್ಲಿ ಪ್ರತಿದಿನ 250 ರಿಂದ 300, ಭಾನುವಾರ 500, ಸಾರ್ವತ್ರಿಕ ರಜಾ ದಿನಗಳಲ್ಲಿ 800 ವಾಹನಗಳು ಬರುತ್ತವೆ. 1 ರಿಂದ 2 ಗಂಟೆಗಳ ಕಾಲ ಜನರು ವಾಹನ ನಿಲ್ಲಿಸುವುದೇ ಹೆಚ್ಚು, ಮೂರು ಗಂಟೆಗಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+