ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆಗೆ 23 ದಿನ ಮಾತ್ರ
ಬೆಂಗಳೂರು, ಮೇ 28 : ಪಾಸ್‌ಪೋರ್ಟ್ ಪಡೆಯುವವರಿಗೆ ಸಂತಸದ ಸುದ್ದಿ. ಪೊಲೀಸರ ಪರಿಶೀಲನಾ ಅವಧಿಯನ್ನು 43 ದಿನಗಳಿಂದ 23 ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಪಿ.ಎಸ್. ಕಾರ್ತಿಕೇಯನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕಾರ್ತೀಕೇಯನ್ ಅವರು, ತ್ವರಿತವಾಗಿ ಪಾಸ್‌ಪೋರ್ಟ್ ವಿತರಣೆ ಮಾಡಲು ಅನುಕೂಲವಾಗುವಂತ ಪೊಲೀಸರ ಪರಿಶೀಲನಾ ಅವಧಿಯನ್ನು 23 ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು. [10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ?]

ಡಿಸೆಂಬರ್ ವೇಳೆಗೆ ಈ ಅವಧಿಯನ್ನು 10 ದಿನಗಳಿಗೆ ಇಳಿಕೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಪರಿಶೀಲನಾ ಅವಧಿಯನ್ನು ಕಡಿತಗೊಳಿಸಿರುವುದರಿಂದ 14 ರಿಂದ 16 ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು. [ಮಂಗಳೂರು ಪಾಸ್ ಪೋರ್ಟ್ ಕೇಂದ್ರ ಉನ್ನತೀಕರಣಕ್ಕೆ ಮನವಿ]
ಮೂರು ದಿನದಲ್ಲಿ ತಲುಪಲಿದೆ : ಅತ್ಯಂತ ಪಾರದರ್ಶಕವಾಗಿ ಪಾಸ್‌ಪೋರ್ಟ್ ವಿತರಣೆ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಮೂರು ದಿನದಲ್ಲಿ ಪಾಸ್‌ಪೋರ್ಟ್ ತಲುಪಿಸಲಾಗುತ್ತದೆ ಎಂದು ಕಾರ್ತೀಕೇಯನ್ ಅವರು ಹೇಳಿದರು.
ಇಂಟರ್ನ್ ಶಿಪ್ ಕೋರ್ಸ್ : 'ಪಾಸ್‌ಪೋರ್ಟ್ ಸೇವಾ ಮಿತ್ರ' ಯೋಜನೆಯಡಿ ಪದವೀಧರರಿಗೆ 4 ರಿಂದ 8 ವಾರಗಳ ಇಂಟರ್ನ್ ಶಿಪ್ ಅನ್ನು ಜೂನ್‌ನಲ್ಲಿ ಆರಂಭಿಸಲಾಗುತ್ತಿದೆ. ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಶಿಷ್ಯ ವೇತನ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications