ಬೆಂಗಳೂರಿನಲ್ಲಿ ಮೇ 7, 14ರಂದು ಪಾಸ್‌ಪೋರ್ಟ್ ಮೇಳ
ಬೆಂಗಳೂರು, ಏಪ್ರಿಲ್ 29 : ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಮೇ 7 ಮತ್ತು 14 ರಂದು ಪಾಸ್‌ಪೋರ್ಟ್ ಮೇಳ ಆಯೋಜಿಸಿದೆ. ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಯ ಜನರಿಗೆ ನೆರವಾಗಲು ಪಾಸ್‌ಪೋರ್ಟ್ ಸೇವಾ ಶಿಬಿರವನ್ನು ಏರ್ಪಡಿಸಿದೆ.
ಬೆಂಗಳೂರಿನ ಲಾಲ್‌ಬಾಗ್ ಮತ್ತು ಮಾರತ್‌ಹಳ್ಳಿಯಲ್ಲಿರುವ ಪಾಸ್‌ಪೋರ್ಟ್ ಕೇಂದ್ರಗಳಲ್ಲಿ ಮೇ 7 ಮತ್ತು 14ರಂದು ಪಾಸ್‌ಪೋರ್ಟ್ ಮೇಳ ನಡೆಯಲಿದೆ. ಈ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವವರು ಭೇಟಿಯ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು. [ಪಾಸ್ ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು]

ಕೊಡಗು, ಮೈಸೂರು ಮತ್ತು ಹಾಸನ ಭಾಗದ ಜನರಿಗೆ ನೆರವಾಗಲು ಮೇ 7 ಮತ್ತು 8 ರಂದು ಮಡಿಕೇರಿಯ ಹಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಶಿಬಿರವನ್ನು ಏರ್ಪಡಿಸಲಾಗಿದೆ. [ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್]
ಈ ಮೇಳ ಮತ್ತು ಶಿಬಿರಗಳು ನಡೆಯುವ 5 ದಿನ ಮೊದಲು ಆಸಕ್ತರಿಗೆ ನಿಗದಿತ ಸಮಯವನ್ನು ತಿಳಿಸಲಾಗುತ್ತದೆ. ಮೊದಲೇ ಭೇಟಿಯನ್ನು ನಿಗದಿ ಮಾಡಿಕೊಳ್ಳದೆ ನೇರವಾಗಿ ಬರುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ನೋಡಬಹುದಾಗಿದೆ. [ವೆಬ್ ಸೈಟ್ ವಿಳಾಸ]












Click it and Unblock the Notifications