ಪ್ಯಾನಿಕ್ ಬಟನ್ ಇಲ್ಲದ ವಾಹನಗಳ ನೋಂದಣಿ ತಡೆದ ಸಾರಿಗೆ ಇಲಾಖೆ
ಬೆಂಗಳೂರು, ಜನವರಿ 21: ಪ್ಯಾನಿಕ್ ಬಟನ್ ಇಲ್ಲದ ವಾಹನಗಳ ನೋಂದಣಿಗೆ ಸಾರಿಗೆ ಇಲಾಖೆ ನಡೆ ಹಿಡಿದಿದೆ.
ಪ್ರತಿಯೊಂದು ವಾಹನದಲ್ಲೂ ಪ್ಯಾನಿಕ್ ಬಟನ್ ಹಾಗೂ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ಉಪಕರಣ ಇರಲೇಬೇಕು, ಇಲ್ಲದ ವಾಹನಗಳ ನೋಂದಣಿಯನ್ನು ತಡೆಹಿಡಿಯಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2019ರ ಜನವರಿ 1ರಿಂದ ದೇಶಾದ್ಯಂತ ನೋಂದಣಿಯಾಗುವ ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಲ್ಲಿ ಈ ಎರಡು ಉಪಕರಣ ಅಳವಡಿಕೆ ಕಡ್ಡಾಯವಾಗಿದೆ.

ಸಾರಿಗೆ ಇಲಾಖೆಯು ಒಂದು ಸಾವಿರ ವಾಹನಗಳ ನೋಂದಣಿಗೆ ತಡೆ ಹಿಡಿದಿದೆ. ಯಾವುದೇ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ವಾಹನ ಮಾಲೀಕರು ತಮ್ಮ ವಾದ ಮಂಡಿಸುತ್ತಿದ್ದಾರೆ.
ಕೇಂದ್ರದ ಅಧಿಸೂಚನೆಯಿಲ್ಲದೆ ತರಾತುರಿಯಲ್ಲಿ ಅನುಷ್ಠಾನಕ್ಕ ಮುಂದಾಗಿರುವುದು ಸರಿಯಲ್ಲ. ಕೇಂದ್ರದ ಈ ಅಧಿಸೂಚನೆಯನ್ನು ದೇಶದ 12 ರಾಜ್ಯಗಳು ಮಾತ್ರ ಒಪ್ಪಿವೆ.











Click it and Unblock the Notifications