ಮಂಗಳೂರು-ಉಡುಪಿ-ಗಂಗಾವತಿ ಸ್ಲೀಪರ್ ಪಲ್ಲಕ್ಕಿ ಬಸ್ ವೇಳಾಪಟ್ಟಿ, ದರ ವಿವರ
ಮಂಗಳೂರು, ನವೆಂಬರ್ 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ಗಂಗಾವತಿಗೆ ಉಡುಪಿ ಜಿಲ್ಲೆಯ ಮಾರ್ಗವಾಗಿ ತೆರಳುವ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಬಸ್ ಸೌಕರ್ಯ ಕಲ್ಪಿಸಿದ್ದು. ಬಸ್ ಸಂಚಾರ ಈಗಾಗಲೇ ಆರಂಭವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ ಮಂಗಳೂರು-ಗಂಗಾವತಿ-ಮಂಗಳೂರು ಮಾರ್ಗ ವಯಾ ಉಡುಪಿ, ಭಟ್ಕಳ, ಕುಮಟಾ, ಅಂಕೋಲಾ, ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ಪಲ್ಲಕ್ಕಿ ಬಸ್ ಸೇವೆ ಆರಂಭಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪಲ್ಲಕ್ಕಿ ಹೆಸರಿನಲ್ಲಿ ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್‌ಗಳ ಸೌಲಭ್ಯವನ್ನು ಆರಂಭಿಸಿದೆ. ಸುಮಾರು 11.3 ಮೀಟರ್ ಉದ್ದವಿರುವ ಈ ಪಲ್ಲಕ್ಕಿ ಬಸ್ ಬಿಎಸ್-6 ತಂತ್ರಜ್ಞಾನ ಮಾದರಿ ಹೆಚ್‌ಪಿ ಇಂಜಿನ್ ಹೊಂದಿದೆ. ಪಲ್ಲಕ್ಕಿ ಬಸ್ 30 ಸೀಟುಗಳನ್ನು ಹೊಂದಿದ್ದು ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ನೀಡಲಾಗಿದೆ.
ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಕರು ಕೆಎಸ್‌ಆರ್‌ಟಿಸಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದೆ. ಈ ರೀತಿಯ ಅನುಕೂಲವಿರುವ ಪಲ್ಲಕ್ಕಿ ಬಸ್ ಇದೀಗ ಮಂಗಳೂರು-ಗಂಗಾವತಿ-ಮಂಗಳೂರು ಮಾರ್ಗವಾಗಿ ಸೇವೆ ಆರಂಭಿಸಿದೆ.
ಮಂಗಳೂರಿನಿಂದ ಗಂಗಾವತಿ ಪ್ರಯಾಣದ ವಿವರ
ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ರಾತ್ರಿ 7:30ಕ್ಕೆ ಮಂಗಳೂರಿನಿಂದ ಪ್ರಯಾಣ ಆರಂಭಿಸಲಿದ್ದು, 8:45ಕ್ಕೆ ಉಡುಪಿಗೆ ತೆರಳಲಿದೆ. ಬಳಿಕ 9:25ಕ್ಕೆ ಕುಂದಾಪುರಕ್ಕೆ ತೆರಳಲಿದ್ದು, ಅಲ್ಲಿಂದ ಭಟ್ಕಳ, ಕುಮಟಾ, ಅಂಕೋಲಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಚಲಿಸಿ ಬೆಳಗ್ಗೆ 6:00 ಗಂಟೆಗೆ ಕೊಪ್ಪಳಕ್ಕೆ ತಲುಪಲಿದೆ. ಕೊನೆಗೆ ಬೆಳಗ್ಗೆ 7:00 ಗಂಟೆಗೆ ಗಂಗಾವತಿಗೆ ತಲುಪಲಿದೆ.
ಗಂಗಾವತಿಯಿಂದ ಮಂಗಳೂರು ಪ್ರಯಾಣದ ವಿವರ
ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ರಾತ್ರಿ 8:00 ಗಂಟೆಗೆ ಗಂಗಾವತಿಯಿಂದ ಪ್ರಯಾಣ ಆರಂಭಿಸಲಿದ್ದು, 9:00ಕ್ಕೆ ಕೊಪ್ಪಳಕ್ಕೆ ತೆರಳಲಿದೆ. ಬಳಿಕ 10:15ಕ್ಕೆ ಗದಗಕ್ಕೆ ತೆರಳಲಿದ್ದು, ರಾತ್ರಿ 11:30ಕ್ಕೆ ಹುಬ್ಬಳ್ಳಿಗೆ ತಲುಪಲಿರುವ ಈ ಬಸ್ ಅಂಕೋಲಾ, ಕುಮಟಾ, ಭಟ್ಕಳ, ಉಡುಪಿ ಮಾರ್ಗವಾಗಿ ಚಲಿಸಿ ಬೆಳಗ್ಗೆ 7:30ಕ್ಕೆ ಮಂಗಳೂರಿಗೆ ತಲುಪಲಿದೆ.
ಟಿಕೆಟ್ ಬುಕ್ ಮಾಡಿಕೊಳ್ಳುವುದು ಹೇಗೆ..?
ಇನ್ನು ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ಮಂಗಳೂರಿನಿಂದ ಗಂಗಾವತಿ ಪ್ರಯಾಣದ ದರ 1,100ರೂಪಾಯಿ ಆಗಿದೆ. ಮಂಗಳೂರು ಟು ಗಂಗಾವತಿ ಪಲ್ಲಕ್ಕಿ ಬಸ್ ಬುಕ್ ಮಾಡಲು ಆನ್‌ಲೈನ್ ಸೌಲಭ್ಯ ನೀಡಲಾಗಿದೆ. ಪ್ರಯಾಣಿಕರು www.ksrtc.in ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅಥವಾ ಹತ್ತಿರದ ಕೆಎಸ್‌ಆರ್‌ಟಿಸಿ ರಿಸರ್ವವೇಶನ್ ಸೆಂಟರ್‌ಗೆ ತೆರಳಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಪುತ್ತೂರು-ಬೆಂಗಳೂರು ಪಲ್ಲಕ್ಕಿ ಬಸ್ ಸೇವೆ ಆರಂಭ
ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ಪುತ್ತೂರಿನಿಂದ ಬೆಂಗಳೂರಿಗೆ ಸೇವೆ ಆರಂಭಿಸಿದೆ. . ಐದು ಡಿಪೋ ವ್ಯಾಪ್ತಿ ಹೊಂದಿರುವ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಟ್ಟು 4 ಪಲ್ಲಕ್ಕಿ ಬಸ್‌ಗಳು ಮಂಜೂರಾಗಿದ್ದು, ಇದರಲ್ಲಿ2 ಬಸ್‌ಗಳು ಪುತ್ತೂರು ಡಿಪೋಗೆ ಬಂದಿವೆ. ಈ ಎರಡೂ ಬಸ್‌ಗಳು ಪುತ್ತೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿವೆ.












Click it and Unblock the Notifications